ಲಾಕ್‌ಡೌನ್‌ ಸಡಿಲಿಕೆ ಬಳಿಕ 100 ದಿನದಲ್ಲಿ 10 ಲಕ್ಷ ಮಂದಿ ವಿಮಾನಯಾನ

By Kannadaprabha News  |  First Published Sep 2, 2020, 9:17 AM IST

ಬೆಂಗಳೂರಿಂದ 49 ನಗರಗಳಿಗೆ ಸೇವೆ| ಲಾಕ್‌ಡೌನ್‌ ಬಳಿಕ 15000ಕ್ಕೂ ಅಧಿಕ ಟ್ರಿಪ್‌| 49 ನಗರಗಳ ಪೈಕಿ ಅತಿ ಹೆಚ್ಚು ಶೇ.13ರಷ್ಟು ಪ್ರಯಾಣಿಕರು ಕೊಲ್ಕತ್ತಾಗೆ ಪ್ರಯಾಣ| ಮುಂದಿನ ದಿನಗಳಲ್ಲಿ ಪ್ರಯಾಣಿಕರ= ಸಂಖ್ಯೆ ಮತ್ತಷ್ಟು ವೃದ್ಧಿಸುವ ನಿರೀಕ್ಷೆ| 


ಬೆಂಗಳೂರು(ಸೆ.02): ಕೊರೋನಾ ಲಾಕ್‌ಡೌನ್‌ ಸಡಿಲಿಕೆ ಬಳಿಕ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಿಂದ ಸ್ವದೇಶಿ ವಿಮಾನ ಸೇವೆ ಪುನಾರಂಭಗೊಂಡು ಮಂಗಳವಾರಕ್ಕೆ ನೂರು ದಿನ ಪೂರೈಸಿದೆ. ಈ ಅವಧಿಯಲ್ಲಿ ವಿಮಾನ ನಿಲ್ದಾಣದಿಂದ ದೇಶದ 49 ನಗರಗಳಿಗೆ 10.04 ಲಕ್ಷ ಮಂದಿ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ.

ಮೇ 25ರಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕರು ಸ್ವದೇಶಿ ವಿಮಾಯಾನ ಸೇವೆಗೆ ಅನುಮತಿ ನೀಡಿದ ನಂತರ ಹಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಆರಂಭಿಸಿದ್ದ ಸ್ವದೇಶಿ ವಿಮಾನ ಸೇವೆ ಇದೀಗ ಯಶಸ್ವಿ ನೂರು ದಿನ ಪೂರೈಸಿದೆ. ಈ ನೂರು ದಿನಗಳಲ್ಲಿ 15,658 ಟ್ರಿಪ್‌ ವಿಮಾನ ಕಾರ್ಯಾಚರಣೆ ಮಾಡಿದ್ದು, 10.04 ಲಕ್ಷ ಮಂದಿ ಪ್ರಯಾಣಿಕರು ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. ಕೊರೋನಾ ಪೂರ್ವದಲ್ಲಿ ದೇಶದ 58 ನಗರಗಳಿಗೆ ವಿಮಾನ ಸೇವೆ ನೀಡುತ್ತಿದ್ದ ಕೆಐಎ, ಇದೀಗ 49 ನಗರಗಳಿಗೆ ವಿಮಾನ ಸೇವೆ ನೀಡುತ್ತಿದೆ. ಅಂದರೆ, ಶೇ.84ರಷ್ಟುಸ್ವದೇಶಿ ವಿಮಾನ ಸಂಚಾರ ಪುನರ್‌ ಆರಂಭಗೊಂಡಿದೆ.

Latest Videos

undefined

ಸುರಕ್ಷತಾ ಕ್ರಮಗಳಿಂದ ಯಶಸ್ವಿ ಸೇವೆ:

ಕೆಐಎ ವಿಮಾನ ನಿಲ್ದಾಣದ ವಾಹನ ಪಾರ್ಕಿಂಗ ಸ್ಥಳದಿಂದ ವಿಮಾನ ಏರುವ ಹಂತದ ವರೆಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಬಯೋಮೆಟ್ರಿಕ್‌ ಸೆಲ್‌್ಫ ಬೋರ್ಡಿಂಗ್‌, ಮಾನವ ಸ್ಪರ್ಶ ಹೆಚ್ಚಿರುವ ಸ್ಥಳಗಳು ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಶೇ.90ರಷ್ಟುಪ್ರಯಾಣಕರು ವಿಮಾನ ನಿಲ್ದಾಣದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬಿಐಎಎಲ್‌ ತಿಳಿಸಿದೆ.

ಅಂತಾರಾಷ್ಟ್ರೀಯ ವಿಮಾನ ಸೆಪ್ಟೆಂಬರ್ ಅಂತ್ಯದವರೆಗೆ ಇಲ್ಲ, ಕೇಂದ್ರ ಕೊಟ್ಟ ಕಾರಣ

ವಿಮಾನ ಕಾರ್ಯಾಚರಣೆ ಏರಿಕೆ:

ಸ್ವದೇಶಿ ವಿಮಾನ ಸೇವೆ ಆರಂಭದ ಬಳಿಕ ಜುಲೈನಲ್ಲಿ ವಿಮಾನಗಳ ಕಾರ್ಯಾಚರಣೆ ಶೇ.39ರಷ್ಟಿದ್ದರೆ, ಆಗಸ್ಟ್‌ನಲ್ಲಿ ಶೇ.47ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ವೃದ್ಧಿಸುವ ನಿರೀಕ್ಷೆಯಿದೆ ಎಂದು ಬಿಐಎಎಲ್‌ ತಿಳಿಸಿದೆ.

ಕೊಲ್ಕತ್ತಾಗೆ ಹೆಚ್ಚು ಪ್ರಯಾಣ

49 ನಗರಗಳ ಪೈಕಿ ಅತಿ ಹೆಚ್ಚು ಶೇ.13ರಷ್ಟು ಪ್ರಯಾಣಿಕರು ಕೊಲ್ಕತ್ತಾಗೆ ಪ್ರಯಾಣಿಸಿದ್ದು, ದೆಹಲಿಗೆ ಶೇ.11 ಹಾಗೂ ಪಾಟ್ನಾಗೆ ಶೇ.6ರಷ್ಟುಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅಂತೆಯೆ ಪೂರ್ವದ ನಗರಗಳಿಗೆ ಶೇ.33.07, ದಕ್ಷಿಣದ ನಗರಗಳಿಗೆ ಶೇ.30.09, ಉತ್ತರದ ನಗರಗಳಿಗೆ ಶೇ.25.08 ಹಾಗೂ ಪಶ್ಚಿಮದ ನಗರಗಳಿಗೆ 9.06ರಷ್ಟು ಪ್ರಯಾಣಿಕರು ವಿಮಾನಗಳಲ್ಲಿ ಸಂಚರಿಸಿದ್ದಾರೆ.

click me!