1999 ರಿಂದ ಶುರುವಾದ ನಿರಂತರ ಪ್ರಯತ್ನ, 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕನಾಗಿ ನೇಮಕ

Published : Sep 25, 2026, 07:05 PM IST
Teacher

ಸಾರಾಂಶ

ಕಳೆದ 27 ವರ್ಷಗಳಿಂದ ಸರ್ಕಾರಿ ಶಿಕ್ಷಕನಾಗಲು ನಡೆಸಿದ ನಿರಂತರ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ. 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕನಾಗಿ ನೇಮಕಗೊಂಡಿದ್ದಾರೆ. ಹಲವು ಬಾರಿ ಪರೀಕ್ಷೆ ಬರೆದು ಕೊನೆಗೆ ಪಾಸ್ ಆಗಿದ್ದು ಹೇಗೆ?

ಬಾಘಪತ್ (ಸೆ.25) ವಯಸ್ಸು 59. ನಿವೃತ್ತಿ ವಯಸ್ಸು ಹತ್ತಿರಬರುತ್ತದ್ದಂತೆ ಸರ್ಕಾರಿ ಶಿಕ್ಷಕನಾಗಿ ನೇಮಕಗೊಂಡ ಘಟನೆ ನಡೆದಿದೆ. 1999ರಿಂದ ಸರ್ಕಾರಿ ಶಿಕ್ಷಕನಾಗಿ ಸತತವಾಗಿ ಪರೀಕ್ಷೆ, ಸಂದರ್ಶನಕ್ಕೆ ಹಾಜರಾಗಿದ್ದಾರೆ. ಆದರೆ ಒಂದಲ್ಲಾ ಒಂದು ಕಾರಣದಿಂದ ಸರ್ಕಾರಿ ಶಿಕ್ಷಕ ಹುದ್ದೆ ಕೈತಪ್ಪಿದೆ. ಆದರೆ ಪ್ರಯತ್ನ ಮಾತ್ರ ಕೊನೆಗೊಳ್ಳಲಿಲ್ಲ. ಕಳೆದ 27 ವರ್ಷಗಳಿಂದ ಸತತ ಹೋರಾಟ, ಸತತ ಪ್ರಯತ್ನದ ಫಲವಾಗಿ ಇದೀಗ 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕನಾಗಿ ನೇಮಕಗೊಂಡ ಘಟನೆ ಉತ್ತರ ಪ್ರದೇಶದ ಬಾಘಪತ್‌ನಲ್ಲಿ ನಡೆದಿದೆ.

ಶಿಕ್ಷಕ ನೇಮಕಾತಿ ಪ್ರಯತ್ನ

ವಿಜಯ್ ಕುಮಾರ್ ಶರ್ಮಾ ಸಂಸ್ಕೃತ ಅಧ್ಯಾಪಕ. ಉತ್ತರ ಪ್ರದೇಶ ಸರ್ಕಾರಿ ಶಿಕ್ಷಕ ಹುದ್ದೆಗಾಗಿ 1999ರಿಂದ ನಿರಂತರವಾಗಿ ಪರೀಕ್ಷೆ ಬರೆಯುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರಿ ಶಿಕ್ಷಕ ನೇಮಕಾತಿಗೆ ಪ್ರತಿ ಬಾರಿ ಹಾಜರಾಗಿದ್ದಾರೆ. TGT ಪರೀಕ್ಷೆ ಹಾಗೂ PGT ಪರೀಕ್ಷೆಯನ್ನು ಸತತವಾಗಿ ಬರೆದಿದ್ದಾರೆ. ಆರು ಬಾರಿ TGT ಪರೀಕ್ಷೆ ಹಾಗೂ ನಾಲ್ಕು ಬಾರಿ PGT ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಯಲ್ಲಿ ಪಾಸಾದ ವೇಳೆ ಸಂದರ್ಶನದಲ್ಲಿ ಫೇಲ್ ಆಗುತ್ತಿತ್ತು. ಕೆಲವು ಬಾರಿ ಪರೀಕ್ಷೆಯಲ್ಲೇ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಕಳೆದ 27 ವರ್ಷಗಳಿಂದ ಪರೀಕ್ಷೆ ಬರೆಯುತ್ತಲೇ ಬಂದಿದ್ದಾರೆ.

ಈ ಬಾರಿ ಸರ್ಕಾರಿ ಶಿಕ್ಷಕರ ನೇಮಕಾತಿಯಲ್ಲಿ ಕೆಲ ಮಾರ್ಪಡು ಮಾಡಲಾಗಿತ್ತು. ಸಂದರ್ಶನ ಭಾಗ ಕಡಿತಗೊಳಿಸಲಾಗಿತ್ತು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದ ವಿಜಯ್ ಕುಮಾರ್ ಶರ್ಮಾ ಕೊನೆಗೂ ಸರ್ಕಾರಿ ಸಂಸ್ಕೃತ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ. ಖಾಸಗಿ ಶಾಲೆಯಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಾ, ಸರ್ಕಾರಿ ಶಿಕ್ಷಕರ ನೇಮಕಾತಿ ಪ್ರತಿ ಬಾರಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಬಹುತೇಕ ಬಾರಿ ಸಂದರ್ಶನದಲ್ಲಿ ವಿಜಯ್ ಕುಮಾರ್ ಶರ್ಮಾಗೆ ನಿರಾಸೆಯಾಗುತ್ತಿತ್ತು. ಕಳೆದ ಎರಡು ದಶಕದಿಂದ ಖಾಸಗಿ ಶಾಲೆಯಲ್ಲಿ ಅಧ್ಯಾಪಕನಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ವಿಜಯ್ ಕುಮಾರ್ ಶರ್ಮಾ ಇದೀಗ ಸರ್ಕಾರಿ ಶಿಕ್ಷಕನಾಗಿ ಬಡ್ತಿ ಪಡೆದಿದ್ದಾರೆ.

ನೇಮಕಾತಿ ಪತ್ರ ಪಡೆದ ವಿಜಯ್ ಕುಮಾರ್ ಶರ್ಮಾ

ಕಳೆದ 27 ವರ್ಷಗಳ ಕಾಲ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ. 59ನೇ ವಯಸ್ಸಿನಲ್ಲಿ ಕೊನೆಗೂ ಸರ್ಕಾರಿ ಶಿಕ್ಷರನ ನೇಮಕಾತಿ ಲೆಟರ್ ಪಡೆದಿದ್ದಾರೆ. ಪತ್ರ ಪಡೆದ ವಿಜಯ್ ಕುಮಾರ್ ಸಂತಸ ಹಂಚಿಕೊಂಡಿದ್ದಾರೆ. ನಾನು ಕೆಲಸ ಮಾಡಿದ ಶಾಲೆ, ಆಡಳಿತ ಮಂಡಳಿ, ವಿದ್ಯಾರ್ಥಿಗಳು ನನಗೆ ಸಹಕರಿಸಿದ್ದಾರೆ. ನನ್ನ ನಿರಂತರ ಹೋರಾಟಕ್ಕೆ ಫಲ ಸಿಕ್ಕಿದೆ. ವಿಳಂಬವಾದರೂ ಹೋರಾಟ ಯಶಸ್ವಿಯಾಗಿದೆ ಎಂದು ವಿಜಯ್ ಕುಮಾರ್ ಶರ್ಮಾ ಹೇಳಿದ್ದಾರೆ.

PREV
Read more Articles on
click me!

Recommended Stories

ಲೋಕಾಯುಕ್ತ ದಾಳಿ: 8 ಸರ್ಕಾರಿ ಅಧಿಕಾರಿಗಳ ಮನೇಲಿ ₹23 ಕೋಟಿ ಅಕ್ರಮ ಆಸ್ತಿ ಪತ್ತೆ; ಯಾರ ಬಳಿ ಎಷ್ಟಿದೆ ಗೊತ್ತಾ?
ಕಲ್ಯಾಣ ಕರ್ನಾಟಕ ಶಿಕ್ಷಕರ ನೇಮಕಾತಿ: ಹಳೆ ಪಟ್ಟಿ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ