VIMS Bellary Recruitment 2022: ಉಪನ್ಯಾಸಕ ಹುದ್ದೆಗಳಿಗೆ ವಿಮ್ಸ್ ನೇಮಕಾತಿ

By Suvarna News  |  First Published Apr 5, 2022, 1:04 PM IST

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟು 3 ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಇಚ್ಚಿಸುವವರು  ಜನವರಿ 10,2022ರಂದು ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. 
 


ಬೆಂಗಳೂರು(ಎ.4): ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ (Vijayanagar Institute of Medical Sciences) ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ  ಬಿಡುಗಡೆ ಮಾಡಿದೆ. ಸಹಾಯಕ ಪ್ರಾಧ್ಯಾಪಕ (Assistant Professor), ಪ್ರಾಧ್ಯಾಪಕ (Professor) ಮತ್ತು ಸಹ ಪ್ರಾಧ್ಯಾಪಕ (Associate Professor) ಒಟ್ಟು  3 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಇಚ್ಚಿಸುವವರು  ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಎಪ್ರಿಲ್ 12, 2022ರಂದು ಬೆಳಗ್ಗೆ 9 ಗಂಟೆಯಿಂದ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ವೆಬ್‌ಸೈಟ್‌ : www.vimsbellary.org.in ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯಲ್ಲಿ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ Ph.D, ಪದವಿ ಮಾಡಿರಬೇಕು.

Tap to resize

Latest Videos

undefined

ಅರ್ಜಿ ಶುಲ್ಕ:  ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯಲ್ಲಿ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ₹500 ಅರ್ಜಿ ಶುಲ್ಕ ಪಾವತಿಸಬೇಕು.

CCRI Recruitment 2022: ಕಾಫಿ ಲ್ಯಾಬೋರೇಟರಿ ತಂತ್ರಜ್ಞ ಹುದ್ದೆಗೆ ನೇಮಕಾತಿ

ವಯೋಮಿತಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯಲ್ಲಿ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:  ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯಲ್ಲಿ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ವಾಕ್ ಇನ್ ಇಂಟರ್ವ್ಯೂ ನಲ್ಲಿ ಭಾಗವಹಿಸಬೇಕು.  ಅಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ.

ವೇತನ ವಿವರ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯಲ್ಲಿ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ದೊರೆಯಲಿದೆ.

ನೇರ ಸಂದರ್ಶನ ನಡೆಯುವ ಸ್ಥಳ: 
ನಿರ್ದೇಶಕರು,
ವಿಮ್ಸ್ ಕ್ಯಾಂಪಸ್,
ಕಂಟೋನ್ಮೆಂಟ್, ಬಳ್ಳಾರಿ,
ಕರ್ನಾಟಕ

Bank of Baroda Recruitment 2022: 26 ಬ್ರ್ಯಾಂಚ್‌ಗಳಲ್ಲಿ 159 ಹುದ್ದೆಗಳ ಭರ್ತಿಗೆ ನೇಮಕಾತಿ

NIMHANS  ಖಾಲಿ ಇರುವ 9 ಹುದ್ದೆಗಳಿಗೆ ನೇಮಕಾತಿ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (National Institute of Mental Health and Neuro Sciences  -NIMHANS ) ಇಲ್ಲಿ ಖಾಲಿ ಇರುವ ವಿವಿಧ  ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.   ಲೆಕ್ಕಾಧಿಕಾರಿ ( Accountant), ಯೋಜನೆಯ ಸಂಯೋಜಕರು (Project Coordinator), ಯೋಜನಾ ಅಧಿಕಾರಿ (Project officer) ಹುದ್ದೆಗಳು ಸೇರಿ ಒಟ್ಟು 9 ಹುದ್ದೆಗಳು ಖಾಲಿ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಮೇಲ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್​ 15 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಬೇಕಾದ ಈ ಮೇಲ್ ವಿಳಾಸ apcnimhans@gmail.com   ಹೆಚ್ಚಿನ ಮಾಹಿತಿಗೆ ಆಸಕ್ತ ಅಭ್ಯರ್ಥಿಗಳು  ಅಧಿಕೃತ ವೆಬ್‌ತಾಣ nimhans.ac.in ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಲು ಕೋರಲಾಗಿದೆ. 

ಶೈಕ್ಷಣಿಕ ವಿದ್ಯಾರ್ಹತೆ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಜೊತೆಗೆ  ಸಂಶೋಧನೆ ಅಥವಾ ಕೆಲಸದಲ್ಲಿ ಕನಿಷ್ಠ 2 ವರ್ಷಗಳ ಅನುಭವವನ್ನು ಹೊಂದಿರಬೇಕು.

ಯೋಜನೆಯ ಸಂಯೋಜಕರು ಹುದ್ದೆಗೆ ಸಮಾಜಕಾರ್ಯ, ಮನೋವಿಜ್ಞಾನದಲ್ಲಿ ಪದವಿ, M.Phil ಮಾಡಿರಬೇಕು. 
ಪ್ರಾಜೆಕ್ಟ್ ಆಫೀಸರ್ ಹುದ್ದೆಗೆ ಸಮಾಜಕಾರ್ಯ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.
ಅಕೌಂಟೆಂಟ್​ ಹುದ್ದೆಗೆ ವಾಣಿಜ್ಯ ವಿಷಯದಲ್ಲಿ  ಪದವಿ ಪಡೆದಿರಬೇಕು. 

click me!