UAS Raichur Recruitment 2022: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ

By Suvarna NewsFirst Published Jan 22, 2022, 1:55 PM IST
Highlights

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು  ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಜನವರಿ 25, 2022ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಆಸಕ್ತರು ಜನವರಿ 25,2022ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. 

ಬೆಂಗಳೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು (university of agricultural sciences raichur) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. 2 ಸೀನಿಯರ್ ರಿಸರ್ಚ್ ಫೆಲೋ ಹುದ್ದೆ ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಜನವರಿ 25,2022ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ  ಆಸಕ್ತರು https://uasraichur.edu.in/index.php/en/ ಗೆ ಭೇಟಿ ನೀಡಿ.

ಶೈಕ್ಷಣಿಕ ವಿದ್ಯಾರ್ಹತೆ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ನೇಮಕಾತಿಯ ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ, ಪಿಹೆಚ್‌ಡಿ ಪಡೆದಿರಬೇಕು.

ವಯೋಮಿತಿ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ನೇಮಕಾತಿಯ ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ  ನೇಮಕಾತಿ ನಿಯಮಾನುಸಾರ ವಯೋಮಿತಿ ನೀಡಲಾಗಿದೆ. ವರ್ಗಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ನೇಮಕಾತಿಯ ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

Prasar Bharati Recruitment 2022: ಪ್ರಸಾರ ಭಾರತಿಯಲ್ಲಿನ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ವೇತನ ವಿವರ:  ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ನೇಮಕಾತಿಯ ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 31,000/- ರಿಂದ 35,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಅರ್ಜಿ ಸಲ್ಲಿಸಬೇಕಾದ ವಿಧಾನ: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://uasraichur.edu.in/index.php/en/ ನಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅರ್ಜಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿಕೊಂಡು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಜನವರಿ 25,2022 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಸಂದರ್ಶನ ನಡೆಯುವ ಸ್ಥಳ:
Pesticide Residue & Food Quality Analysis Laboratory,
University of Agricultural Sciences,
Raichur - 584104

ದೇಶದ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ, ಮಹಿಳೆಯರೇ ಹೆಚ್ಚು!

ಬರೋಬ್ಬರಿ 1419 ಹುದ್ದೆಗಳಿಗೆ ಅರ್ಜಿ ಆಹ್ವಾನ: ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆ (Animal Husbandry and Fisheries Department) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 1419 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಯ ಕೊನೆಯ ದಿನವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ahf.karnataka.gov.in ಗೆ ಭೇಟಿ ನೀಡಬಹುದು.

ಒಟ್ಟು 1419 ಹುದ್ದೆಗಳ ಮಾಹಿತಿ:
ಮೀನುಗಾರಿಕೆ ಸಹಾಯಕ ನಿರ್ದೇಶಕರು - 188 ಹುದ್ದೆಗಳು
ಪ್ರಥಮ ದರ್ಜೆ ಸಹಾಯಕರು - 95 ಹುದ್ದೆಗಳು
ಶೀಘ್ರಲಿಪಿಗಾರ - 11 ಹುದ್ದೆಗಳು
ದ್ವಿತೀಯ ದರ್ಜೆ ಸಹಾಯಕರು - 93 ಹುದ್ದೆಗಳು
ಡೇಟಾ ಎಂಟ್ರಿ ಅಸಿಸ್ಟೆಂಟ್ - 48 ಹುದ್ದೆಗಳು
ಚಾಲಕರು - 41 ಹುದ್ದೆಗಳು
ಮೀನುಗಾರಿಕೆ ಫೀಲ್ಡ್ ಮ್ಯಾನ್ - 475 ಹುದ್ದೆಗಳು
ಕ್ಲರ್ಕ್ - 2 ಹುದ್ದೆಗಳು
ಸೇವಕ - 187 ಹುದ್ದೆಗಳು

ವಯೋಮಿತಿ: ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆಯ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸುನಿಯಮಾನುಸಾರ ವಯೋಮಿತಿಯನ್ನು ಹೊಂದಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. 

ಆಯ್ಕೆ ಪ್ರಕ್ರಿಯೆ: ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆಯ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ,ಸಂದರ್ಶನ ಮತ್ತು ಮುಂಬಡ್ತಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಕರ್ನಾಟಕದಲ್ಲಿ ಉದ್ಯೋಗ ದೊರೆಯಲಿದೆ.

click me!