UAS Dharwad Recruitment 2022: ಕೃಷಿ ವಿಶ್ವವಿದ್ಯಾಲಯದಲ್ಲಿ ಪಾರ್ಟ್ ಟೈಂ ಟೀಚರ್ ಕೆಲಸ ಇದೆ

By Gowthami KFirst Published Nov 19, 2022, 5:12 PM IST
Highlights

ಧಾರವಾಡದಲ್ಲಿರುವ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಒಟ್ಟು 2 ಪಾರ್ಟ್ ಟೈಂ ಟೀಚರ್ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನವೆಂಬರ್ 30, 2022ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಧಾರವಾಡ (ನ.19): ಧಾರವಾಡದಲ್ಲಿರುವ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಒಟ್ಟು 2 ಪಾರ್ಟ್ ಟೈಂ ಟೀಚರ್ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಲ್ಲಿಸಬಹುದಾಗಿದೆ. ಧಾರವಾಡದಲ್ಲಿ ಉದ್ಯೋಗ ಮಾಡಲು ಉದ್ದೇಶಿಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು   ನವೆಂಬರ್ 30, 2022ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಅಧಿಕೃತ ವೆಬ್‌ತಾಣ uasd.eduಗೆ ಭೇಟಿ ನೀಡಬಹುದು. 

ಶೈಕ್ಷಣಿಕ ವಿದ್ಯಾಭ್ಯಾಸ:  ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪಾರ್ಟ್ ಟೈಂ  ಟೀಚರ್ ಹುದ್ದೆಗಳಿಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ  ಪ್ರಾಣಿ ವಿಜ್ಞಾನ/ಪಶುವೈದ್ಯಕೀಯ ವಿಜ್ಞಾನದಲ್ಲಿ M.Sc, MVSc, Ph.D ವಿದ್ಯಾರ್ಹತೆ ಪಡೆದಿರಬೇಕು.

ಅರ್ಜಿ ಶುಲ್ಕ:  ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪಾರ್ಟ್ ಟೈಂ  ಟೀಚರ್ ಹುದ್ದೆಗಳಿಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿಲ್ಲ.

ಆಯ್ಕೆ ಪ್ರಕ್ರಿಯೆ: ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪಾರ್ಟ್ ಟೈಂ  ಟೀಚರ್ ಹುದ್ದೆಗಳಿಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ ವಿವರ:  ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪಾರ್ಟ್ ಟೈಂ  ಟೀಚರ್ ಹುದ್ದೆಗಳಿಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 40,000 ರೂ ವೇತನ ದೊರೆಯಲಿದೆ.

ಸಂದರ್ಶನ ನಡೆಯುವ ಸ್ಥಳ:  ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪಾರ್ಟ್ ಟೈಂ  ಟೀಚರ್ ಹುದ್ದೆಗಳಿಗೆ ನಡೆಯುವ ನೇರ ಸಂದರ್ಶನದ ಸ್ಥಳ ವಿಳಾಸ ಇಂತಿದೆ.  ಮುಖ್ಯ ಕಛೇರಿ (ಕೃಷಿ), ಕೃಷಿ ವಿಶ್ವವಿದ್ಯಾಲಯ, ಧಾರವಾಡ-ಕರ್ನಾಟಕ.

ಮಹಾಂತ ಕಾಲೇಜಿನಲ್ಲಿ ಹಚ್ಚೇವು ಕನ್ನಡದ ದೀಪ
ಧಾರವಾಡ: ರಾಯಾಪುರದ ಎಸ್‌ಜೆಎಂವಿ ಮಹಾಂತ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ, ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ 67ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಚ್ಚೇವು ಕನ್ನಡ ದೀಪ ಕಾರ್ಯಕ್ರಮಕ್ಕೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಚಾಲನೆ ನೀಡಲಾಯಿತು.

ವಿದ್ಯಾರ್ಥಿಗಳೊಂದಿಗೆ ಹಾಡು, ಮಾತು, ಚರ್ಚೆ ಹಾಗೂ ಪುಸ್ತಕ ಪ್ರದರ್ಶನ ನಡೆಯಿತು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಮೂರ್ತಿ ಬೆಳೆಗೆರೆ ಮಾತನಾಡಿ, ಕನ್ನಡ ಸೇರಿದಂತೆ ಯಾವುದೇ ಮಾತೃಭಾಷೆಯು ಬದುಕನ್ನು ಸುಂದರಗೊಳಿಸುತ್ತದೆ. ಬದುಕನ್ನು ಕಟ್ಟಿಕೊಡುತ್ತದೆ. ಸಾವಲಂಬಿಗಳಾಗಲು ಸ್ವತಂತ್ರವಾಗಿ ಬದುಕಲು ಮಾರ್ಗದರ್ಶನ ನೀಡುತ್ತದೆ. ಕಾರಣ ವಿದ್ಯಾರ್ಥಿಗಳು ಕಾಲಾವಕಾಶಗಳ ಸದುಪಯೋಗ ಭಾಷೆಯನ್ನು ಮತ್ತಷ್ಟುಗಟ್ಟಿಗೊಳಿಸಿ ಎಂದರು.

ಲೋಕಜ್ಞಾನ ಪಡೆದುಕೊಂಡು ಸಮಾಜಮುಖಿಗಳಾಗಿ ಬದುಕಬೇಕು. ನಮ್ಮ ನೆಲ ಜಲವನ್ನು ಅರ್ಥೈಯಿಸಿಕೊಳ್ಳಿ, ಕನ್ನಡ ಕಟ್ಟುವ ಕೆಲಸ ತಮ್ಮದಾಗಲಿ ಕನ್ನಡ ಭಾಷೆಯನ್ನು ಪ್ರೀತಿಸುವುದರ ಮೂಲಕ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದರು.

Karnataka Teacher Recruitment: 13363 ಶಿಕ್ಷಕರ ನೇಮಕ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಕಿತ್ತೂರಿನ ಸರ್ಕಾರಿ ಕಾಲೇಜು ಪ್ರಾಧ್ಯಾಪಕರಾದ ಡಾ. ಪ್ರಜ್ಞಾ ಮತ್ತಿಹಳ್ಳಿ, ಬದುಕಿಗಾಗಿ ಕನ್ನಡ ಬೇಕು, ಕನ್ನಡದ ಕುರಿತು ಜೀವನ ಪ್ರೀತಿ ಇರಲಿ, ಕನ್ನಡ ನಡೆ-ನುಡಿ ಸಂಸ್ಕೃತಿಯನ್ನು ಅನುಭವಿಸುವ ಗೌರವಿಸುವ, ಪ್ರೀತಿಸುವ ಮನಸ್ಸು ತಮ್ಮದಾಗಲಿ. ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆ ಇರಲಿ. ಜೀವನ ಕ್ರಮ ವಿರಲಿ. ಕನ್ನಡನ್ನು ಉಸಿರಾಗಿಸಿ, ಹಸಿರಾಗಿಸಿ ಎಂದರು.

BENGALURU UNIVERSITY RECRUITMENT: ಫುಲ್ ಟೈಂ/ಪಾರ್ಟ್​​ ಟೈಂ ಉಪನ್ಯಾಸಕ ಹುದ್ದೆ ಖಾಲಿ ಇದೆ

ಶಂಕರ ಕುಂಬಿ ಪರಿಚಯಿಸಿದರು. ಪ್ರಾಚಾರ್ಯ ಡಾ. ಶಾಂತಯ್ಯ ಕೆ.ಎಸ್‌. ಮಾತನಾಡಿದರು. ರಾಜ್ಯೋತ್ಸವ ನಿಮಿತ್ತ ವಿದ್ಯಾರ್ಥಿ ಒಕ್ಕೂಟದ ಮಹಿಳಾ ಸಂಘ ಹಾಗೂ ಸಾಂಸ್ಕೃತಿಕ ಸಂಘ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ, ಕನ್ನಡ ಗೀತ ಗಾಯನ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕನ್ನಡ ವಿದ್ಯಾವರ್ಧಕ ಸಂಘ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿತು. ಉಪನ್ಯಾಸಕರಾದ ಡಾ. ಸುಜಾತಾ ಎಸ್‌., ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಜಯಲಕ್ಷ್ಮೇ ಯಂಡಿಗೇರಿ ನಿರೂಪಿಸಿದರು.

 

click me!