ಸರ್ಕಾರಿ ಅಧಿಕಾರಿಗೆ 2.32 ಕೋಟಿ ರೂ. ದಂಡ, 5 ವರ್ಷ ಜೈಲು ಶಿಕ್ಷೆ

By Sathish Kumar KH  |  First Published Aug 20, 2024, 9:05 PM IST

ತುಮಕೂರಿನಲ್ಲಿ ಭ್ರಷ್ಟಾಚಾರದ ಮೂಲಕ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಸರ್ಕಾರಿ ಅಧಿಕಾರಿಗೆ ನ್ಯಾಯಾಲಯವು 2.32 ಕೋಟಿ ರೂ. ದಂಡ ಮತ್ತು 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. 


ತುಮಕೂರು (ಆ.20): ರಾಜ್ಯ ಸರ್ಕಾರಿ ಹುದ್ದೆಯಲ್ಲಿದ್ದರೂ ಸಾರ್ವಜನಿಕ ಸೇವೆ ಮಾಡಿಕೊಡುವುದಕ್ಕೆ ಭ್ರಷ್ಟಾಚಾರ ಮೂಲಕ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದ ಸರ್ಕಾರಿ ಅಧಿಕಾರಿಗೆ ಬರೋಬ್ಬರಿ 2.32 ಕೋಟಿ ರೂ. ದಂಡ ಹಾಗೂ 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ತುಮಕೂರು ಜಿಲ್ಲೆಯ ಆರ್. ಸುಬ್ರಹ್ಮಣ್ಯ ದೊಡ್ಡ ಮೊತ್ತದ ದಂಡ ಪಾವತಿ ಹಾಗೂ ಶಿಕ್ಷೆಗೆ ಗುರಿಯಾದ ಸರ್ಕಾರಿ ಅಧಿಕಾರಿ ಆಗಿದ್ದಾನೆ. ಸರ್ಕಾರಿ ಅಧಿಕಾರಿಯ ವಿರುದ್ಧ ದಾಖಲಾಗಿದ್ದ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತುಮಕೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಮಲಿಂಗೇಗೌಡ ಅವರು ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ. ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಹಣ ಗಳಿಕೆ ಮಾಡಿದ್ದ ಸರ್ಕಾರಿ ಅಧಿಕಾರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ. ಅಂದರೆ ಬರೊಬ್ಬರಿ 2.32 ಕೋಟಿ ರೂ. ದಂಡ ಹಾಗೂ 5 ವರ್ಷ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಲಾಗಿದೆ.

Tap to resize

Latest Videos

undefined

ದೊಡ್ಡಬಳ್ಳಾಪುರ ದಾಬಸ್‌ಪೇಟೆ ನಡುವೆ ಕೆಹೆಚ್ಐಆರ್ ಸಿಟಿ ಪ್ರಾಜೆಕ್ಟ್ ಆರಂಭ; ಎಂ.ಬಿ. ಪಾಟೀಲ

ಈ ಘಟನೆಯ ವಿವರ ಇಲ್ಲಿದೆ ನೋಡಿ: 
ತುಮಕೂರಿನಲ್ಲಿ 2016ರಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್. ಸುಬ್ರಹ್ಮಣ್ಯ, ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆಂಬ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳ ತಂಡಕ್ಕೆ 1,16,44,000 ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ, ಎಸಿಬಿ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ಮಂಗಳವಾರ ಶಿಕ್ಷೆ ಪ್ರಕಟ ಮಾಡಿದೆ.

ಗೃಹ ಜ್ಯೋತಿ ಯೋಜನೆಯ ವಿದ್ಯುತ್ ಕದ್ದ ಕಾಂಗ್ರೆಸ್ ನಾಯಕಿ; 1 ಲಕ್ಷ ರೂ. ದಂಡ ವಿಧಿಸಿದ ಮೆಸ್ಕಾಂ!

ತುಮಕೂರಿನ 7 ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿದೆ. ಇನ್ನು ಆರೋಪಿಯು ದಂಡ ಕಟ್ಟಲು ವಿಫಲವಾದರೇ 2 ವರ್ಷ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವಂತೆ ಆದೇಶ ಹಹೊರಡಿಸಲಾಗಿದೆ. ಇನ್ನು ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ್ದ ವಕೀಲ ಬಸವರಾಜು ಅವರು ವಾದ ಮಂಡಿಸಿದ್ದರು. ಒಟ್ಟಾರೆ, ಭ್ರಷ್ಟ ಅಧಿಕಾರಿಗೆ ಶಿಕ್ಷೆ ಕೊಡಿಸುವಲ್ಲಿ ದೂರುದಾರರು, ಎಸಿಬಿ ಅಧಿಕಾರಿಗಳು ಹಾಗೂ ವಕೀಲರ ಪಾತ್ರ ಪ್ರಮುಖವಾಗಿದೆ. ಇನ್ನು ಭ್ರಷ್ಟಾ ಸರ್ಕಾರಿ ಅಧಿಕಾರಿ ಸುಬ್ರಹ್ಮಣ್ಯಗೆ ನೀಡಿದ ಈ ಶಿಕ್ಷೆಯು ರಾಜ್ಯದ ಎಲ್ಲ ಭ್ರಷ್ಟ ಮತ್ತು ಲಂಚಗುಳಿತನ ಮಾಡುವ ಅಧಿಕಾರಿಗಳಿಗೆ ನೀತಿ ಪಾಠವಾಗಿದೆ ಎಂದು ಕೆಲವರು ಬಣ್ಣಿಸಿದ್ದಾರೆ.

click me!