ಹೆರಿಗೆ ರಜೆಗೆ ಹೋದಾಕೆಯ ನೌಕರಿ ಕಸಿದ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ..!

By Kannadaprabha News  |  First Published Aug 16, 2024, 10:15 AM IST

ಹೆರಿಗೆ ರಜೆ ಮೇಲೆ ತೆರಳಿದ್ದ ಉದ್ಯೋಗಿಯನ್ನು ಪುನಃ ನೌಕರಿಗೆ ನೇಮಕ ಮಾಡಿಕೊಂಡು ವೇತನ ಸೇರಿದಂತೆ 'ತಾಯ್ತನ ಸೌಲಭ್ಯ ಕಾಯ್ದೆ'ಯಡಿ ಎಲ್ಲ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿದ ಹೈಕೋರ್ಟ್


ವೆಂಕಟೇಶ್ ಕಲಿಪಿ

ಬೆಂಗಳೂರು(ಆ.16):  ಹೆರಿಗೆ ರಜೆ ಪೂರೈಸಿ ಬಂದಿದ್ದ ಮಹಿಳಾ ಉದ್ಯೋಗಿಯನ್ನು ಪುನಃ ನೌಕರಿಗೆ ತೆಗೆದು ಕೊಳ್ಳದ ಸರ್ಕಾರದ ಕ್ರಮವನ್ನು ಕಟುಮಾತಲ್ಲಿ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಸಾಂವಿಧಾನಿಕ ಆದೇಶ-ನಿಯ ಮಗಳನ್ನು ಉಲ್ಲಂಘಿಸಲು ಕಾರಣ ಕಂಡುಕೊಳ್ಳುತ್ತಿರುವ ಸರ್ಕಾರ ನಡೆ ನಾಚಿಕೆಗೇಡು, ಉದ್ದಟತನದಿಂದ ಕೂಡಿದೆ ಎಂದು ನುಡಿದಿದೆ.

Tap to resize

Latest Videos

undefined

ಅಲ್ಲದೆ, ಹೆರಿಗೆ ರಜೆ ಮೇಲೆ ತೆರಳಿದ್ದ ಉದ್ಯೋಗಿಯನ್ನು ಪುನಃ ನೌಕರಿಗೆ ನೇಮಕ ಮಾಡಿಕೊಂಡು ವೇತನ ಸೇರಿದಂತೆ 'ತಾಯ್ತನ ಸೌಲಭ್ಯ ಕಾಯ್ದೆ'ಯಡಿ ಎಲ್ಲ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ. ಹರಿಗೆ ರಜೆ ಪೂರೈಸಿ ಕರ್ತವ್ಯಕ್ಕೆ ವಾಪಸ್ಸಾದ ನಂತರವೂ ತನಗೆ ಉದ್ಯೋಗ ನೀಡದ ಸರ್ಕಾರದ ಕ್ರಮ ಆಕ್ಷೇಪಿಸಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ರೈತ ಸಂಪರ್ಕ ಕೇಂದ್ರದಲ್ಲಿ ಲೆಕ್ಕಾಧಿಕಾರಿಯಾಗಿದ್ದ ಬಳಿಗಾರ್ ಚಾಂದ್‌ಬೀ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರ ಪೀಠ ಈ ಆದೇಶ ಮಾಡಿದೆ.

ಬಾಡಿಗೆ ತಾಯ್ತನದ ಪ್ರಕರಣ: ವೀರ್ಯ ಅಥವಾ ಅಂಡಾಣು ದಾನ ಮಾಡಿದವರಿಗೆ ಮಕ್ಕಳ ಮೇಲೆ ಹಕ್ಕಿಲ್ಲ: ಕೋರ್ಟ್‌

ಪ್ರಕರಣದಲ್ಲಿ ಅರ್ಜಿದಾರಿಗೆ ಹೆರಿಗೆ ರಜೆಯ ಹಕ್ಕು-ಅರ್ಹತೆ: ಯನ್ನು ಅನ್ಯಾಯವಾಗಿ ನಿರಾಕರಿ ಸಲಾಗಿದೆ. ಕಾನೂನು ಬಾಹಿ. ರವಾಗಿ ಕೆಲಸದಿಂದ ತೆಗೆಯ ಲಾಗಿದೆ. ಹಾಗಾಗಿ, ಆಕೆಯನ್ನು ಉದ್ಯೋಗಕ್ಕೆ ಮರು ನಿಯೋಜಿಸಬೇಕು. ಹಾಗೆಯೇ, ಹೆರಿಗೆ ರಜೆಗೆ ಹೋಗುವ ಮುನ್ನ ಅರ್ಜಿದಾರೆ ಹೊಂದಿದ್ದ ಉದ್ಯೋಗಕ್ಕೆ ನಿಯಮಿತ ನೇಮಕಾತಿ (ರೆಗ್ಯೂಲರ್ ಅಪಾಯಿಂಟ್ ಮೆಂಟ್) ನಡೆಸುವವರೆಗೂ ಆ ಉದ್ಯೋಗದಲ್ಲಿ ಕರ್ತವ್ಯ ನಿರ್ವಹಿಸಲು ಆಕೆಗೆ ಅನುಮತಿ ನೀಡಬೇಕು. ಅರ್ಜಿದಾರೆಗೆ ಹಿಂಬಾಕಿ, ತಾಯ್ತನ ಸೌಲಭ್ಯ ಕಾಯ್ದೆ ಅಡಿಯಲ್ಲಿ ಎಲ್ಲ ಸೌಲಭ್ಯ ಕಲ್ಪಿಸಬೇಕು. 25000 ರು. ಪರಿಹಾರ ಕಲ್ಪಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ. ಪ್ರಕರಣದ ವಿವರ: ಅರ್ಜಿದಾರೆಯು ಹೂವಿನ ಹಡಗಲಿ ರೈತ ಸಂಪರ್ಕ ಕೇಂದ್ರದಲ್ಲಿ ಲೆಕ್ಕಾ ಧಿಕಾರಿ ಹುದ್ದೆಗೆ ಮೆ। ಸ್ಟಾರ್ಟ್ ಡಿಟೆಕ್ಟಿವ್ ಅಂಡ್ ಅಲೈಡ್ ಸರ್ವಿಸ್ (ಇಂಡಿಯಾ) ಪ್ರೈ.ಲಿ ಏಜೆನ್ಸಿ ಮೂಲಕ ಗುತ್ತಿಗೆ ಆಧಾರದ ಆದರೆ, ಪ್ರವೀಣ್ ಕ್ಯಾಳಕಟ್ಟಿ ಎಂಬುವರು ನಿಮ್ಮ ಸ್ಥಳದಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದ್ದ ಕೃಷಿ ಅಧಿಕಾರಿ, ಉದ್ಯೋಗದಲ್ಲಿ ಮುಂದುವರಿಯಲು ಅನುಮತಿ ನಿರಾಕರಿಸಿ ದ್ದರು. ನಂತರ ಉದ್ಯೋಗ ಕಲ್ಪಿಸಲು ಹಲವು ಬಾರಿ ಮಾಡಿದ್ದರೂ ಸರ್ಕಾರ ಸ್ಪಂದಿಸದಕ್ಕೆ ಹೈಕೋರ್ಟ್ ಮೊರೆ ಹೋಗಿದ್ದರು.

ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ರಾಜ್ಯ ಸರ್ಕಾರ, ಅರ್ಜಿದಾರೆಯನ್ನು ಉದ್ಯೋಗಕ್ಕೆ ತೆಗೆದುಕೊಂಡಿದ್ದ ಏಜೆನ್ಸಿಯ ಗುತ್ತಿಗೆ ಅವಧಿ 20225 2.100 20235 5.30 ವರೆಗೆ ಮಾತ್ರ ಅಸ್ತಿತ್ವದಲ್ಲಿತ್ತು. 2023-24ನೇ ಸಾಲಿಗೆ ಪ್ರತ್ಯೇಕ ಬಿಡ್ಡಿಂಗ್ ಕರೆಯಾಗಿತ್ತು. ಯಶಸ್ವಿ ಬಿಡ್‌ಾರರು ಉದ್ಯೋಗ ನೀಡುವ ಸಂಬಂಧ ಅರ್ಜಿದಾರೆಯೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಇದರಿಂದ ಸೇವೆ ಯಲ್ಲಿ ಮುಂದುವರಿಸುವಂತೆ ತಾಯ್ತನ ಹಕ್ಕು ಆಧಾರದ ಮೇಲೆ ಅರ್ಜಿದಾರೆ ಪರಿಹಾರ ಕೋರುವಂತಿಲ್ಲ ಎಂದು ವಾದಿಸಿತ್ತು. ಈ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.

ಪೋಕ್ಸೋ ಕೇಸ್‌ ಸೆಟ್ಲ್‌ಮೆಂಟ್‌ ಅರ್ಜಿಗಳು ಹೆಚ್ಚಳ: ಸಂತ್ರಸ್ತೆಯನ್ನೇ ಮದುವೆಯಾಗುತ್ತೇನೆಂದು ಆರೋಪಿಗಳ ಅರ್ಜಿ..!

ಮೇಲೆ 2014ರ ಜೂ.16ರಂದು ನೇಮಕ ಗೊಂಡು, 2024ರ ಮೇವರೆಗೆ ಕೆಲಸ ಮಾಡಿ ದೂರು. 2023 ಮೇ 6ರಿಂದ ಆ.31ರವರೆಗೆ ಹೆರಿಗೆ ರಜೆ ಪಡೆದಿದ್ದರು. ರಜೆ ಅವಧಿ ಪೂರ್ಣವಾದ ನಂತರ ಉದ್ಯೋಗಕ್ಕೆ ಹಾಜ ರಾಗಲು ಸಿದ್ಧವಿರುವುದಾಗಿ 2023ರ ಸೆ.1 ರಂದು ಕೃಷಿ ಅಧಿಕಾರಿಗೆ ಪತ್ರ ನೀಡಿದ್ದರು. 

ಕೋರ್ಟ್‌ನಿಂದ ಸರ್ಕಾರಕ್ಕೆ ಚಾಟಿ

ಮಾದರಿ ಉದ್ಯೋಗದಾತನಾಗಿ ಕಾರ್ಯನಿರ್ವಹಿಸಬೇಕಿರುವ ಸರ್ಕಾರ, ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ಉಲ್ಲಂಘಿಸಲು ಕಾರಣ ಕಂಡುಕೊಳ್ಳುತ್ತಿವೆ. ಸರ್ಕಾರಿ ಉದ್ಯೋಗ ಬಯಸುವ ನಾಗರಿಕರಿಗೆ, ಸಾಂವಿಧಾನಿಕ ಮತ್ತು ಶಾಸನಬದ್ದೆ ನೀಡಲಾಗಿರುವ ಹಕ್ಕುಗಳ ಶೋಷಣೆ ಮತ್ತು ದುರುಪಯೋಗ ಮಾಡುವುದರಲ್ಲಿ ವ್ಯವಸ್ಥಿತವಾಗಿ ತೊಡಗಿಸಿಕೊಂಡಿದೆ. ಈ ಪ್ರಕರಣ ಅದಕ್ಕೆ ಅತ್ಯುತ್ತಮ ಉದಾಹರಣೆ. ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ್ದ ಅರ್ಜಿದಾರೆಗೆ ಉದ್ಯೋಗದ ಹಕ್ಕು, ಉದ್ಯೋಗದಾತ ಮತ್ತು ಉದ್ಯೋಗಿ ನಡುವಿನ ಸಂಬಂಧವನ್ನು ಸಂಪೂರ್ಣ ನಿರಾಕರಿಸಿರುವ ತನ್ನ ಕ್ರಮ ಸಮರ್ಥಿಸಿಕೊಳ್ಳುವಲ್ಲಿ ರಾಜ್ಯ ಮತ್ತದರ ಪ್ರಾಧಿಕಾರಿಗಳು ದಿಟ್ಟತನ ತೋರುತ್ತಿದೆ. ಇದರಿಂದ ಯಾವುದೇ ಶಾಸನಬದ್ಧ ರಕ್ಷಣೆಯಿಲ್ಲದೆ ಉದ್ಯೋಗಿ ಸೊರಗಿ ಹೋಗುತ್ತಾರೆ ಎಂದು ಪೀಠ ತೀಕ್ಷ್ಯವಾಗಿ ನುಡಿದಿದೆ.

click me!