ವರಮಹಾಲಕ್ಷ್ಮಿ ಹಬ್ಬದಂದು ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಸಚಿವ ಸುರೇಶ್ ಕುಮಾರ್...!

By Suvarna News  |  First Published Jul 31, 2020, 7:08 PM IST

ವರಮಹಾಲಕ್ಷ್ಮೀ ಹಬ್ಬದ ದಿನದಂದು ಸರ್ಕಾರಿ ಶಿಕ್ಷಕರಿಗೆ ಸಚಿವ ಸುರೇಶ್ ಕುಮಾರ್ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. 


ಬೆಂಗಳೂರು, (ಜುಲೈ.31): ಶಿಕ್ಷಕರ‌ ವರ್ಗಾವಣಾ ನಿಯಮಗಳನ್ನು ಶಿಕ್ಷಣ‌ ಇಲಾಖೆಯು ಅಂತಿಮಗೊಳಿಸಿದೆ. ಈ ಬಾರಿ ಆಗಸ್ಟ್ ನಲ್ಲಿ ಶಿಕ್ಷಕರ‌ ವರ್ಗಾವಣೆಯು ಅನುಷ್ಠಾನಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.

ಕಳೆದ ಅಧಿವೇಶನದಲ್ಲಿ ಶಿಕ್ಷಕರ‌ ವರ್ಗಾವಣಾ ಕಾಯ್ದೆಗೆ ಅನುಮೋದನೆ ದೊರಕಿತ್ತು.‌ ಶಿಕ್ಷಕ ಸ್ನೇಹಿಯಾದ, ಶಿಕ್ಷಣ ಸ್ನೇಹಿಯಾದ ವರ್ಗಾವಣಾ ನೀತಿಯು ಅನುಷ್ಠಾನಗೊಳ್ಳುವ ಸಮಯ ಸನ್ನಿಹಿತವಾಗಿದೆ. ಇಂದು (ಶುಕ್ರವಾರ) ಅಧಿಕಾರಿಗಳ‌ ಸಭೆ‌ ನಡೆಸಿ ಕೂಡಲೇ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬೇಕೆಂದು ಸೂಚನೆ ನೀಡಿದ್ದೇನೆ ಎಂದರು.

Tap to resize

Latest Videos

undefined

ಶಿಕ್ಷಕರ ವರ್ಗಾವಣೆಯಲ್ಲಿ ಪ್ರಭಾವಿಗಳ ಕೈವಾಡ ನಿಜ: ಸುರೇಶ್‌ ಕುಮಾರ್

ಕಳೆದ ಬಾರಿ ಕಡ್ಡಾಯ ವರ್ಗಾವಣೆಯಿಂದ ತೊಂದರೆಗೀಡಾಗಿದ್ದ ಶಿಕ್ಷಕರು ಈ‌ ಬಾರಿಯ ಮೊದಲ ಆದ್ಯತೆಯ ವರ್ಗಾವಣೆಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.

click me!