ಪಿಯುಸಿ ಉಪನ್ಯಾಸಕರ‌ ನೇಮಕಾತಿ ಕೌನ್ಸಿಲಿಂಗ್‌ಗೆ ಹೊಸ ದಿನಾಂಕ ಪ್ರಕಟ

By Suvarna News  |  First Published Jul 21, 2020, 10:38 PM IST

ಪಿಯುಸಿ ಉಪನ್ಯಾಸಕರ ಹುದ್ದೆಗೆ ಆಯ್ಕೆಗೊಂಡಿದ್ದ ಅಭ್ಯರ್ಥಿಗಳ ಕೌನ್ಸಿಲಿಂಗ್ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಇದೀಗ ಗ್ರೀನ್ ಸಿಗ್ನಲ್ ನೀಡಿ ದಿನಾಂಕ ಘೋಷಣೆ ಮಾಡಿದೆ.


ಬೆಂಗಳೂರು, (ಜುಲೈ.21):  ಪಿಯುಸಿ ಉಪನ್ಯಾಸಕರ ಹುದ್ದೆಗೆ ಆಯ್ಕೆಗೊಂಡಿದ್ದ ಅಭ್ಯರ್ಥಿಗಳ ಕೌನ್ಸಿಲಿಂಗ್ ಪ್ರಕ್ರಿಯೆಗೆ ದಿನಾಂಕ ಪ್ರಕಟಿಸಲಾಗಿದೆ. 

 ಆಗಸ್ಟ್ 10 ರಿಂದ ಪಿಯುಸಿ ಉಪನ್ಯಾಸಕರ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಈ ಬಗ್ಗೆ ಟ್ವೀಟ್ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

'ದ್ವಿತೀಯ ಪಿಯುಸಿ ರಿಸಲ್ಟ್ ಕುಸಿಯಲು ಉಪನ್ಯಾಸಕರ ಕೊರತೆ, ಇದಕ್ಕೆ ಹೊಣೆ ಸುರೇಶ್ ಕುಮಾರ್'

ಪಿಯುಸಿ ಉಪನ್ಯಾಸಕರ ದಿನಾಂಕ ನಿರ್ಧರಿಸುವ ಕುರಿತು ಇಂದು ಶಿಕ್ಷಣ ಇಲಾಖೆಯ ಪ್ರಧಾನ‌ ಕಾರ್ಯದರ್ಶಿ ಹಾಗೂ ಪದವಿಪೂರ್ವ ಮಂಡಳಿಯ ನಿರ್ದೇಶಕರ ಜೊತೆ ಸಭೆ ಸೇರಿ ಚರ್ಚಿಸಲಾಯಿತು.

ದೀರ್ಘ ಸಮಾಲೋಚನೆ ನಂತರ ಪದವಿಪೂರ್ವ ಶಿಕ್ಷಣ ಉಪನ್ಯಾಸಕರ‌ ನೇಮಕಾತಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು 10.08.2020 ರಂದು ಆರಂಭಿಸಲು ನಿರ್ಧರಿಸಲಾಗಿದೆ.

— S.Suresh Kumar, Minister - Govt of Karnataka (@nimmasuresh)

 ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್ ದಿನಾಂಕ ನಿರ್ಧರಿಸುವ ಕುರಿತು ಇಂದು (ಮಂಗಳವಾರ) ಶಿಕ್ಷಣ ಇಲಾಖೆಯ ಪ್ರಧಾನ‌ ಕಾರ್ಯದರ್ಶಿ ಹಾಗೂ ಪದವಿಪೂರ್ವ ಮಂಡಳಿಯ ನಿರ್ದೇಶಕರ ಜೊತೆ ಸಭೆ ಸೇರಿ ಚರ್ಚಿಸಲಾಯಿತು. ದೀರ್ಘ ಸಮಾಲೋಚನೆ ನಂತರ ಪದವಿಪೂರ್ವ ಶಿಕ್ಷಣ ಉಪನ್ಯಾಸಕರ‌ ನೇಮಕಾತಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು 10.08.2020 ರಂದು ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಪಿಯುಸಿ ಉಪನ್ಯಾಸಕರ‌ ನೇಮಕಾತಿ ಕೌನ್ಸಿಲಿಂಗ್ ನ್ನು ಜುಲೈ 8 ರಂದು‌ ನಡೆಸಲು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಹಾಗೂ ಸಕಾಲ ಸಚಿವರು ಆದ ಎಸ್‌ ಸುರೇಶ್ ಕುಮಾರ್ ಅವರು ಸೂಚಿಸಿ ಆದೇಶ ಹೊರಿಡಿಸಿದ್ದರು. ಆದ್ರೆ, ಕಾರಣಾಂತರಗಳಿಂದ ಕೌನ್ಸಿಲಿಂಗ್ ರದ್ದು ಮಾಡಲಾಗಿತ್ತು.

click me!