15 ಸಾವಿರ ಶಿಕ್ಷಕರ ನೇಮಕಕ್ಕೆ ಶೀಘ್ರ 1:2 ಪಟ್ಟಿ: ಸಚಿವ ಬಿಸಿ ನಾಗೇಶ್‌

By Gowthami KFirst Published Sep 24, 2022, 6:27 PM IST
Highlights

ಹದಿನೈದು ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷಾ ಫಲಿತಾಂಶದ ಆಧಾರಿಸಿ ಮುಂದಿನ ವಾರಾಂತ್ಯದೊಳಗೆ 1:2 ಆಧಾರದಲ್ಲಿ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

ಬೆಂಗಳೂರು (ಸೆ.24): ಹದಿನೈದು ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷಾ ಫಲಿತಾಂಶದ ಆಧಾರಿಸಿ ಮುಂದಿನ ವಾರಾಂತ್ಯದೊಳಗೆ 1:2 ಆಧಾರದಲ್ಲಿ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಪ್ರತಿ ಹುದ್ದೆಗೆ ಇಬ್ಬರು ಅಭ್ಯರ್ಥಿಗಳ ಆಯ್ಕೆಯಂತೆ (1:2) ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಿಸಲಾಗುವುದು. ನಂತರ ಒಂದು ಹುದ್ದೆಗೆ ಒಬ್ಬರಂತೆ ಅರ್ಹರ ಅಂತಿಮ ಆಯ್ಕೆಪಟ್ಟಿಪ್ರಕಟಿಸಲಾಗುವುದು. ಆದಷ್ಟುಬೇಗ ಹೊಸ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ ಶಾಲೆಗಳಿಗೆ ನಿಯೋಜಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಶಿಕ್ಷಕರ ನೇಮಕ ಅಕ್ರಮ: ಮತ್ತೆ 3 ಮಂದಿ ಸೆರೆ, ಬಂಧಿತರ ಸಂಖ್ಯೆ 16ಕ್ಕೆ ಏರಿಕೆ
ಕಾಂಗ್ರೆಸ್‌ ಅವಧಿಯಲ್ಲಿ ನಡೆದಿದೆ ಎನ್ನಲಾದ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಅಕ್ರಮ ಜಾಲವು ದಾವಣಗೆರೆ ಜಿಲ್ಲೆಗೂ ವ್ಯಾಪಿಸಿದ್ದು, ಈಗ ಆ ಜಿಲ್ಲೆಯ ಮೂವರು ಸಹ ಶಿಕ್ಷಕರು ಸಿಐಡಿ ಬಲೆಗೆ ಮಂಗಳವಾರ ಬಿದ್ದಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 16ಕ್ಕೇರಿದಂತಾಗಿದೆ. ದಾವಣಗೆರೆ ಜಿಲ್ಲೆಯ ಯಾಸ್ಮಿನ್‌ ಅಫ್‌್ಜ, ಬಿ.ಸಿ.ಚೈತ್ರಾ ಹಾಗೂ ಅಶೋಕ್‌ ನಾಯ್‌್ಕ ಬಂಧಿತರಾಗಿದ್ದು, ನಕಲಿ ದಾಖಲೆ ಸೃಷ್ಟಿಸಿ ಸಹ ಶಿಕ್ಷಕ ಹುದ್ದೆಯನ್ನು ಆರೋಪಿಗಳು ಪಡೆದಿದ್ದರು.

ಈ ಬಗ್ಗೆ ಶಿಕ್ಷಣ ಇಲಾಖೆ ನಡೆಸಿದ ಇಲಾಖಾ ಮಟ್ಟದ ಆತಂರಿಕ ವಿಚಾರಣೆ ವೇಳೆಯಲ್ಲಿ ಸಹ ಬಯಲಾಗಿತ್ತು. ಆ ವರದಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

2014-15ನೇ ಸಾಲಿನಲ್ಲಿ ನಡೆದಿದ್ದ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಕಲಿ ದಾಖಲೆ ಸಲ್ಲಿಸಿ ಕೆಲವರು ಹುದ್ದೆ ಪಡೆದಿದ್ದ ಸಂಗತಿ ಬಯಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸರು, ಮೊದಲ ಹಂತದಲ್ಲಿ ಮೂರು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ 12 ಮಂದಿ ಶಿಕ್ಷಕರನ್ನು ಬಂಧಿಸಿದ್ದರು. ಈಗ ಅಕ್ರಮದ ಜಾಲವು ದಾವಣಗೆರೆ ಜಿಲ್ಲೆಗೂ ವ್ಯಾಪ್ತಿಸಿದ್ದು, ಆ ಜಿಲ್ಲೆಯ ಮೂವರು ಶಿಕ್ಷಕರು ಬಂಧಿತರಾಗಿದ್ದಾರೆ. ಇತರೆ ಜಿಲ್ಲೆಗಳ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾನಿಗಳ ಸಹಾಯ-ಸಹಕಾರದಿಂದ ಅಗ್ನಿವೀರರ ನೇಮಕಾತಿ Rally ಯಶಸ್ವಿ

ಇನ್ನಷ್ಟು ಬಂಧನವಾಗಲಿದೆ ಎಂದ ಸಚಿವರು: ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ನಡೆದಿದ್ದ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಈವರೆಗೂ 16 ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮತ್ತಷ್ಟುಆರೋಪಿಗಳು ಭಾಗಿಯಾಗಿರುವ ಶಂಕೆ ಇದ್ದು ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ನಮಗೆ ಈ ವಿಚಾರ ಗೊತ್ತಾದ ತಕ್ಷಣ ಶಿಕ್ಷಣ ಇಲಾಖೆಯ ಎಸ್‌ಎಸ್‌ಎಲ್‌ಸಿ ಬೋರ್ಡ್‌ ನಿರ್ದೇಶಕರ ನೇತೃತ್ವದಲ್ಲಿ ತನಿಖೆ ನಡೆಸಿದ್ದಾಗ ಅಕ್ರಮ ನೇಮಕಾತಿ ಆಗಿರುವ ಬಗ್ಗೆ ಗೊತ್ತಾಯಿತು.

ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನ ಕೆಲಸ ನೀಡಿ; ಕಾರ್ಮಿಕರು ಪ್ರತಿಭಟನೆ

2015-16 ರಲ್ಲಿ ಅಹರ್ತತೆ ಇಲ್ಲದವರು ಸಹ ಶಿಕ್ಷಕರ ಹುದ್ದೆಗೆ ನೇಮಕವಾಗಿರುವುದು ಕಂಡು ಬಂತು. ನಂತರ ಇದನ್ನು ಸಿಐಡಿ ತನಿಖೆಗೆ ಕೊಡಲಾಯಿತು. ಸಿಐಡಿ ಅಧಿಕಾರಿಗಳು 16 ಮಂದಿಯನ್ನು ಬಂಧಿಸಿದ್ದಾರೆ. ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ ಪ್ರಸಾದ್‌ನನ್ನು ಬಂಧಿಸಿದ್ದಾರೆ ಎಂದರು. ಅಕ್ರಮವಾಗಿ ನೇಮಕವಾದವರೂ ಇನ್ನೂ ಅನೇಕರು ಇರಬಹುದು ಎಂದು ಅನುಮಾನವನ್ನು ಸಿಐಡಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿ ಮತ್ತಷ್ಟುಮಂದಿಯನ್ನು ಬಂಧಿಸಲಿದ್ದಾರೆ ಎಂದು ಹೇಳಿದರು.

click me!