ಸಾರಿಗೆ ಇಲಾಖೆಯಲ್ಲಿ ಶೀಘ್ರ 8000 ಹುದ್ದೆಗಳಿಗೆ ನೇಮಕಾತಿ: ಸಚಿವ ರಾಮಲಿಂಗಾ ರೆಡ್ಡಿ

By Kannadaprabha News  |  First Published Nov 1, 2023, 4:00 AM IST

ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಒಂದೂ ಹೊಸ ಬಸ್ ಖರೀದಿ ಮಾಡಲಿಲ್ಲ. ಅಧಿಕಾರದ ಕೊನೆಯಲ್ಲಿ ಹೊಸ ಬಸ್ ಖರೀದಿಗೆ ತೀರ್ಮಾನಿಸಿದರೂ, ಅನುಷ್ಠಾನಕ್ಕೆ ತರಲಿಲ್ಲ. ಈ ಸರ್ಕಾರದಲ್ಲಿ ಹೊಸ ಬಸ್ ಬರುತ್ತಿವೆ. ನಾನು 2013ರಲ್ಲಿ ಮಂತ್ರಿ ಇದ್ದಾಗ ನೇಮಕಾತಿ ಮಾಡಿರುವುದು ಬಿಟ್ಟರೆ ಮತ್ತೆ ನೇಮಕಾತಿಯಾಗಿಲ್ಲ. 13,888 ಸಾರಿಗೆ ಇಲಾಖೆಯ ನೌಕರರು ನಿವೃತ್ತಿ ಹೊಂದಿದ್ದರು. ಶೀಘ್ರದಲ್ಲಿ ಹೊಸ ಬಸ್ ಖರೀದಿ ಮತ್ತು ಖಾಲಿ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದ ಸಚಿವ ರಾಮಲಿಂಗಾ ರೆಡ್ಡಿ 


ವಿಜಯಪುರ(ನ.01): ರಾಜ್ಯ ಸಾರಿಗೆ ಇಲಾಖೆಯಲ್ಲಿ ಶೀಘ್ರ 8000 ಹುದ್ದೆಗಳ ನೇಮಕಾತಿ ಹಾಗೂ ಹೊಸ ಬಸ್ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪ್ರಕಟಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಒಂದೂ ಹೊಸ ಬಸ್ ಖರೀದಿ ಮಾಡಲಿಲ್ಲ. ಅಧಿಕಾರದ ಕೊನೆಯಲ್ಲಿ ಹೊಸ ಬಸ್ ಖರೀದಿಗೆ ತೀರ್ಮಾನಿಸಿದರೂ, ಅನುಷ್ಠಾನಕ್ಕೆ ತರಲಿಲ್ಲ. ಈ ಸರ್ಕಾರದಲ್ಲಿ ಹೊಸ ಬಸ್ ಬರುತ್ತಿವೆ. ನಾನು 2013ರಲ್ಲಿ ಮಂತ್ರಿ ಇದ್ದಾಗ ನೇಮಕಾತಿ ಮಾಡಿರುವುದು ಬಿಟ್ಟರೆ ಮತ್ತೆ ನೇಮಕಾತಿಯಾಗಿಲ್ಲ. 13,888 ಸಾರಿಗೆ ಇಲಾಖೆಯ ನೌಕರರು ನಿವೃತ್ತಿ ಹೊಂದಿದ್ದರು. ಶೀಘ್ರದಲ್ಲಿ ಹೊಸ ಬಸ್ ಖರೀದಿ ಮತ್ತು ಖಾಲಿ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದರು.

Latest Videos

undefined

ವಿಜಯಪುರ: ಬರದಲ್ಲೂ ಗುಮ್ಮಟನಗರಿ ರೈತನ ಭರ್ಜರಿ ಆದಾಯ, ಡ್ರ್ಯಾಗನ್‌ ಬೆಳೆದು ಲಕ್ಷ-ಲಕ್ಷ ಗಳಿಕೆ..!

ಬಹುತೇಕ ಬಸ್‌ಗಳು ಗುಜರಿಗೆ ಹೋಗಿವೆ. ಹೊಸ ಬಸ್‌ಗಳು ಸಹ ಬಂದಿರಲಿಲ್ಲ. ಹೀಗಾಗಿ 13800 ಹೊಸ ಬಸ್ ಖರೀದಿಗೆ ಅನುಮತಿ ಕೇಳಿದ್ದೆ. 8000ಕ್ಕೂ ಅಧಿಕ ಬಸ್ ಖರೀದಿಗೆ ಅನುಮತಿ ಸಿಕ್ಕಿದೆ. ಪ್ರಕ್ರಿಯೆ ಪ್ರಾರಂಭವಾಗಿದೆ. ನಾಲ್ಕೈದು ತಿಂಗಳಲ್ಲಿ 5200 ಹೊಸ ಬಸ್ ಬರಲಿವೆ ಎಂದರು.

ರಾಜ್ಯದಲ್ಲಿ 85 ಕೋಟಿ ಜನ ಉಚಿತ ಬಸ್ ಪ್ರಯಾಣ:

ಉಚಿತ ಬಸ್ ಸೌಲಭ್ಯದಿಂದಾಗಿ ಯಾವುದೇ ಸಮಸ್ಯೆಯಾಗಿಲ್ಲ. ಮುಖ್ಯಮಂತ್ರಿಗಳು 9 ತಿಂಗಳಿಗೆ ₹2800 ಕೋಟಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿದ್ದರು. ಮಾರ್ಚ್‌ನಿಂದ ಪ್ರತಿ ತಿಂಗಳು ಹಣ ನೀಡಲಾಗುತ್ತದೆ. ಹೆಚ್ಚುವರಿ ಹಣವನ್ನು ಸಹ ಸಿಎಂ ಕೊಡುವ ಭರವಸೆ ನೀಡಿದ್ದಾರೆ. ಬಿಜೆಪಿಯವರು ಹೇಳುವ ಹಾಗೆ ಯಾವುದೇ ಸಂಬಳ ಬಾಕಿ ಇರಿಸಿಕೊಂಡಿಲ್ಲ. ಬೇಕಾದರೆ ಆರ್‌ಟಿಐ ಕಾಯ್ದೆಯಡಿ ಮಾಹಿತಿ ಪಡೆಯಬಹುದು. ಈವರೆಗೆ ರಾಜ್ಯದಲ್ಲಿ 85 ಕೋಟಿ ಜನ ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ ಎಂದರು.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಬದಲಾಗಲ್ಲ: ಸಚಿವ ಸತೀಶ ಜಾರಕಿಹೊಳಿ

ಇನ್ನು 10 ವರ್ಷ ಯೋಜನೆ:

ಈ ಹಿಂದೆ ಈ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಬಿಜೆಪಿಯವರು ಚುನಾವಣೆಗೊಸ್ಕರ ಮಾಡುತ್ತಿದ್ದಾರೆಂದು ಆರೋಪಿಸಿದರು. ಚುನಾವಣೆ ಆಯ್ತು. ನಾವು ಗೆದ್ದೆವು. ಆ ಮೇಲೆ ಇವರು ಸಂಬಳ ಸರಿಯಾಗಿ ಕೊಡಲ್ಲ, ಯೋಜನೆ ನಿಲ್ಲಲಿದೆ ಎಂದೆಲ್ಲ ಟೀಕಿಸಿದರು. ಆದರೆ ಈ ಯೋಜನೆ ಇನ್ನೂ 10 ವರ್ಷ ಸೌಲಭ್ಯ ಇರಲಿದೆ ಎಂದರು.

ಕರ್ನಾಟಕ ಬಸ್‌ ಧಕ್ಕೆ ಮಾಡಿದರೆ ಕ್ರಮ:

ಮೀಸಲಾತಿ ಹೋರಾಟ ಮಹಾರಾಷ್ಟ್ರದ ಆಂತರಿಕ ವಿಚಾರ. ಅವರು ಹೋರಾಟ ಮಾಡಿಕೊಳ್ಳಲಿ. ಆದರೆ, ಕರ್ನಾಟಕದ ಬಸ್‌ಗೆ ಧಕ್ಕೆ ಮಾಡಬಾರದು. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಯಾರು ಬೆಂಕಿ ಹಚ್ಚುತ್ತಿದ್ದಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ. ಈ ಸರ್ಕಾರ ಇನ್ನೂ 10 ವರ್ಷ ಇರಲಿದೆ. ನಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದರು.

click me!