ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮವೆಸಗಲು ಅಭ್ಯರ್ಥಿಗಳು ಗುಪ್ತಾಂಗದಲ್ಲಿ ಬ್ಲೂಟೂತ್ ಇಟ್ಟುಕೊಂಡು ಬಂದಿದ್ದರು.
ಯಾದಗಿರಿ (ಅ.29): ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಹುದ್ದೆಯ ಪರೀಕ್ಷೆಯಲ್ಲಿ ಕೆಲವು ಪರೀಕ್ಷಾರ್ಥಿಗಳು ಬ್ಲೂಟೂತ್ ಡಿವೈಸ್ಅನ್ನು ಗುಪ್ತಾಂಗಗಳಲ್ಲಿ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದರು. ಅಲ್ಲಿ ಇಟ್ಟುಕೊಂಡ ಡಿವೈಸ್‌ಗಳನ್ನು ಮೆಟಲ್ ಡಿಟೆಕ್ಟರ್‌ನಿಂದಲೂ ಪತ್ತೆ ಮಾಡಲಾಗಿಲ್ಲ. ನಂತರ, ಶೌಚಗೃಹಕ್ಕೆ ಹೋಗಿ ಕಿವಿ, ಜನಿವಾರ, ಶರ್ಟ್ ಕಾಲರ್‌ನಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಎಫ್‌ಡಿಎ ಪರೀಕ್ಷಾ ವೇಳೆ ನಡೆದ ಅಕ್ರಮ ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಬ್ಲೂಟೂತ್ ಡಿವೈಸ್ ಬಳಸಿ ಎಫ್‌ಡಿ ಎಕ್ಸಾಂ ಬರೆಯುತ್ತಿರುವ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ಬಂತು. ತಕ್ಷಣ ನಾವು ಎರಡು ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಅಕ್ರಮವಾಗಿ ಪರೀಕ್ಷೆ ಬರೆಯಲು ಮುಂದಾಗಿದ್ದ 9 ಜನ ಪರೀಕ್ಷಾರ್ಥಿಗಳನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 4 ಬ್ಲೂಟೂತ್ ಡಿವೈಸ್, ಎರಡು ವಾಕಿ-ಟಾಕಿ, ಒಂಬತ್ತು ಮೊಬೈಲ್ ಸೇರಿ 9 ಜನರಿಂದ ವಿವಿಧ ಮಾದರಿಯ ಬಟ್ಟೆಗಳು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
undefined
ಯಾದಗಿರಿ: ಬ್ಲೂಟೂತ್ ಬಳಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದ ಆರೋಪಿ ಅರೆಸ್ಟ್
ಇನ್ನು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಬಂಧಿತ ಆರೋಪಿಗಳೆಲ್ಲರೂ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನವರು. ಆದರೆ, ಅದರಲ್ಲಿ ಒಬ್ಬರು ಮಾತ್ರ ವಿಜಯಪುರದವರು. ಇವರೆಲ್ಲರೂ ತಮ್ಮ ಸಂಬಂಧಿಕರ ಮುಖಾಂತರ ಹಣ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ, ಯಾರಿಗೆ ನೀಡಿದ್ದಾರೆ ಎಂಬ ಮಾಹಿತಿ ಇನ್ನೂ ತಿಳಿದಿಲ್ಲ. ಆರೋಪಿಗಳನ್ನು ಇಂದು ಸಂಜೆ ಅಡಿಶನಲ್ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿತ್ತು. ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಪೊಲೀಸ್ ಕಸ್ಟಡಿಗೆ ನಾವು ಕೇಳಿದ್ದೆವು. ಆದರೆ, ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದ್ದಾರೆ ಎಂದರು.
ಪರೀಕ್ಷಾ ಕೇಂದ್ರ ಪ್ರವೇಶ ವೇಳೆ ಪೊಲೀಸ್ ಇಲಾಖೆ ವೈಫಲ್ಯ ವಿಚಾರದ ಬಗ್ಗೆ ಮಾತನಾಡಿ, ಪೊಲೀಸ್ ಇಲಾಖೆ ಎಲ್ಲಾ ಬಿಗಿ ಭದ್ರತೆ ವಹಿಸಿತ್ತು, ಆದಾಗ್ಯೂ ಈ ಘಟನೆ ನಡೆದಿದೆ. ಮೊದಲಿನ ಪರೀಕ್ಷೆಗೆ ಮೆಟಲ್ ಡಿಟೆಕ್ಟರ್ ನಿಂದ ತಪಾಸಣೆ ನಡೆಸಿರಲಿಲ್ಲ. ಈ ಪ್ರಕರಣ ಗಮನಕ್ಕೆ ಬಂದ ತಕ್ಷಣ ಮೆಟಲ್ ಡಿಟೆಕ್ಟರ್ ಬಳಸಿದ್ದೇವೆ. ಮೊದಲೇ ಮೆಟಲ್ ಡಿಟೆಕ್ಟರ್ ಬಳಸಿದ್ರೂ ಸಹ ಬ್ಲುಟ್ಯುತ್ ಡಿವೈಸ್ ಕ್ಯಾಚ್ ಮಾಡ್ತಿರಲಿಲ್ಲ. ಬ್ಲೂಟೂತ್ ಡಿವೈಸ್ ಅನ್ನು ಪರೀಕ್ಷಾರ್ಥಿಗಳು ಗುಪ್ತಾಂಗಗಳಲ್ಲಿ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದರು. ನಂತರ, ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ ಹೋಗಿ ಕಿವಿ, ಜನಿವಾರ, ಶರ್ಟ್ ಕಾಲರ್, ಬಟನ್, ಅಂಡರ್ ವೇರ್‌ಗಳಲ್ಲಿ ಇಟ್ಟುಕೊಳ್ಳುತ್ತಿದ್ದರು ಎಂಬುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ತಿಳಿಸಿದರು.
ಕೆಇಎ ಬ್ಲೂಟೂತ್ ಅಕ್ರಮ: 300 ಅಭ್ಯರ್ಥಿಗಳ ಜತೆ ₹5-8 ಲಕ್ಷಕ್ಕೆ ಡೀಲ್?
ಕೆಇಎ ಪರಿಕ್ಷೆ ಅಕ್ರಮ ಪ್ರಕರಣಕ್ಕೆ ಅಕ್ಕನೇ ಸಾಥ್: ಕೆಇಎ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮ್ಮನ ಅಕ್ರಮಕ್ಕೆ ಸಪೋರ್ಟ ಮಾಡಿದ ತಪ್ಪಿಗೆ ಅಕ್ಕ ಅರೆಸ್ಟ್ ಆಗಿದ್ದಾಳೆ. ಕಲಬುರಗಿ ವಿವಿ ಪರೀಕ್ಷಾ ಕೇಂದ್ರದಲ್ಲಿ ಬ್ಲ್ಯೂಟೂತ್ ಮೂಲಕ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಲಕ್ಷ್ಮೀಕಾಂತ ಎನ್ನುವ ಅಭ್ಯರ್ಥಿ. ಈ ಲಕ್ಷ್ಮೀಕಾಂತಗೆ ಹೊರಗಡೆ ಕಾರನಲ್ಲಿ ಕುಳಿತು ಮೊಬೈಲ್ ಬಳಸಿ ಉತ್ತರ ಹೇಳುತ್ತಿದ್ದ ಆತನ ಅಕ್ಕ. ತಮ್ಮನ ಅಕ್ರಮಕ್ಕೆ ಸಪೋರ್ಟ ಮಾಡಿದ ತಪ್ಪಿಗೆ ಅಕ್ಕ ಶೈಲಶ್ರಿ ತಳವಾರ ಸಹ ಅರೆಸ್ಟ್ ಆಗಿದ್ದಾಳೆ. ಲಕ್ಷ್ಮೀಪುತ್ರ ಅಫಜಲಪೂರ ತಾಲೂಕಿನ ಸೊನ್ನ ಗ್ರಾಮದ ನಿವಾಸಿಯಾಗಿದ್ದಾನೆ. ಇನ್ನು ಅಕ್ಕ ಶೈಲಶ್ರೀ ಚಿಕ್ಕಬಳ್ಳಾಪುರ ದಲ್ಲಿ ನರ್ಸಿಂಗ್ ಓದುತ್ತಿದ್ದಾಳೆ. ಈಗ ಪೊಲೀಸರು ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ನಂತರ 14 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.