2025ರಲ್ಲಿ ಪ್ರತಿ 5 ದಿನಕ್ಕೊಂದು ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆ

By Sathish Kumar KH  |  First Published Jan 1, 2025, 5:03 PM IST

ಸರ್ಕಾರಿ ನೌಕರಿಗಾಗಿ ತಯಾರಿ ನಡೆಸುತ್ತಿರುವ ಯುವಕರಿಗೆ ಗುಡ್ ನ್ಯೂಸ್‌ ಕೊಟ್ಟ ರಾಜಸ್ಥಾನ ಲೋಕ ಸೇವಾ ಆಯೋಗ. 162 ಪರೀಕ್ಷೆಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. 2025ನೇ ಸಾಲಿನಲ್ಲಿ ಪ್ರತಿ 5 ದಿನಕ್ಕೊಮ್ಮೆ ಪರೀಕ್ಷೆ ನಡೆಯಲಿದೆ. 


ಜೈಪುರ (ಜ.01): ಇನ್ನು ಹೊಸ ವರ್ಷ ಆರಂಭವಾಗಿದ್ದು,  2025ನೇ ವರ್ಷ ಆರಂಭವಾಗಿದೆ. ಈ ವರ್ಷ ರಾಜಸ್ಥಾನದ ಯುವಕರಿಗೆ ತುಂಬಾ ಒಳ್ಳೆಯದಾಗಲಿದೆ. ಸರ್ಕಾರಿ ನೌಕರಿಗೆ ತಯಾರಿ ನಡೆಸುತ್ತಿರುವವರಿಗೆ ರಾಜಸ್ಥಾನ ಲೋಕಸೇವಾ ಆಯೋಗ ಈ ವರ್ಷ ನಡೆಯಲಿರುವ ಪರೀಕ್ಷೆಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ರಾಜಸ್ಥಾನದಲ್ಲಿ ಈ ವರ್ಷ ಜನವರಿಯಿಂದ ಡಿಸೆಂಬರ್ ವರೆಗೆ 162 ಪರೀಕ್ಷೆಗಳು ನಡೆಯಲಿವೆ. ಇಡೀ ವರ್ಷ ಒಟ್ಟು 82 ದಿನ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ, ರಾಜ್ಯದಲ್ಲಿ ಪ್ರತಿ 5 ದಿನಗಳಿಗೊಮ್ಮೆ ಒಂದಲ್ಲ ಒಂದು ನೇಮಕಾತಿ ಪರೀಕ್ಷೆ ನಡೆಯಲಿದೆ.

ಈ ಬಾರಿಯ ನೋಂದಣಿ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆ: ಕಳೆದ ವರ್ಷ ರಾಜಸ್ಥಾನದಲ್ಲಿ ನಡೆದ ಹಲವು ನೇಮಕಾತಿ ಪರೀಕ್ಷೆಗಳಲ್ಲಿ ಡಮ್ಮಿ ಅಭ್ಯರ್ಥಿಗಳು ಕುಳಿತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹಾಗಾಗಿ, ಈ ಬಾರಿ ಇದಕ್ಕೆ ಕಡಿವಾಣ ಹಾಕಲು ಒನ್ ಟೈಮ್ ನೋಂದಣಿ ಪ್ರಕ್ರಿಯೆಯಲ್ಲಿ ಸರ್ಕಾರ ದೊಡ್ಡ ಬದಲಾವಣೆ ತಂದಿದೆ. ಈಗ ನೋಂದಣಿ ವೇಳೆ ವೆಬ್‌ಕ್ಯಾಮ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಲೈವ್ ಫೋಟೋ ಸೆರೆಹಿಡಿಯಲಾಗುತ್ತದೆ. ಪರೀಕ್ಷೆಯ ವೇಳೆ ನಡೆಯುವ ವೀಡಿಯೋಗ್ರಫಿಯಲ್ಲಿ ದಾಖಲಾದ ಅಭ್ಯರ್ಥಿಯನ್ನು ಒನ್ ಟೈಮ್ ನೋಂದಣಿ ವೇಳೆ ಸೆರೆಹಿಡಿದ ಲೈವ್ ಫೋಟೋ ಜೊತೆ ಹೋಲಿಕೆ ಮಾಡಲಾಗುತ್ತದೆ. ಇದರಿಂದ ಪರೀಕ್ಷೆಗಳಲ್ಲಿ ಡಮ್ಮಿ ಅಭ್ಯರ್ಥಿಗಳು ಕುಳಿತುಕೊಳ್ಳುವುದನ್ನು ತಡೆಯಬಹುದು.

Tap to resize

Latest Videos

ಕರ್ನಾಟಕದಲ್ಲಿ ನೇಮಕಾತಿ ಸ್ಥಗಿತ: ಕರ್ನಾಟಕದಲ್ಲಿ ಕಳೆದ ಐದಾರು ವರ್ಷಗಳಿಂದ ಸರಿಯಾಗಿ 10 ನೇಮಕಾತಿ ಪರೀಕ್ಷೆಗಳು ಕೂಡ ನಡೆದಿಲ್ಲ. ಅದರಲ್ಲಿಯೂ ಪಿಎಸ್‌ಐ, ಕೆಪಿಎಸ್‌ಸಿ, ಎಸ್‌ಡಿಎ, ಕೆಎಎಸ್ ಸೇರಿದಂತೆ ವಿವಿಧ ಉದ್ಯೋಗದಲ್ಲಿ ಹಗರಣದ ನಡೆದಿರುವ ಘಟನೆಗಳು ಕೂಡ ವರದಿಯಾಗಿವೆ. ಪೊಲೀಸ್ ನೇಮಕಾತಿ, ಶಿಕ್ಷಕರ ನೇಮಕಾತಿ ಮಾತ್ರ ಯಶಸ್ವಿಯಾಗಿ ನಡೆದಿದೆ. ಇದೀಗ ಎಸ್‌ಸಿ ಒಳಮೀಸಲಾತಿ ಜಾರಿಗೆ ತರುತ್ತಿರುವುದರಿಂದ ಯಾವುದೇ ಹೊಸ ನೇಮಕಾತಿ ಆದೇಶಗಳನ್ನು ಮಾಡದಂತೆ ಸ್ಥಗಿತಗೊಳಿಸಲಾಗಿದೆ. ಇನ್ನು ಉದ್ಯೋಗಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಯುವಜನರು ಉದ್ಯೋಗ ಸಿಗದೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು, ಜೀವನ ಕಟ್ಟಿಕೊಳ್ಳಲಾಗದೇ ಪರದಾಡುತ್ತಿದ್ದಾರೆ.

ಇದನ್ನೂ ಓದಿ: ಕೆಎಎಸ್‌ ಎಡವಟ್ಟು: ಮರುಪರೀಕ್ಷೆ ಅಭ್ಯರ್ಥಿಗಳಿಗೆ ಕೃಪಾಂಕ?

ಈ ವರ್ಷ ನಡೆಯಲಿರುವ ನೇಮಕಾತಿ ಪರೀಕ್ಷೆಗಳ ದಿನಾಂಕಗಳು...
1. ಅಸಿಸ್ಟೆಂಟ್ ಪ್ರಾಸಿಕ್ಯೂಷನ್ ಆಫೀಸರ್ (ಪ್ರಿಲಿಮಿನರಿ) ಸ್ಪರ್ಧಾತ್ಮಕ ಪರೀಕ್ಷೆ-2024- 19 ಜನವರಿ 2025.

2. ರಾಜಸ್ಥಾನ ರಾಜ್ಯ ಮತ್ತು ಅಧೀನ ಸೇವೆಗಳ ಸಂಯೋಜಿತ ಸ್ಪರ್ಧಾತ್ಮಕ (ಪೂರ್ವಭಾವಿ) ಪರೀಕ್ಷೆ-2024- 02 ಫೆಬ್ರವರಿ 2025.

3. ಲೈಬ್ರರಿಯನ್ ಗ್ರೇಡ್-II. (ಶಾಲಾ ಶಿಕ್ಷಣ) ಸ್ಪರ್ಧಾತ್ಮಕ ಪರೀಕ್ಷೆ-2024 -16 ಫೆಬ್ರವರಿ 2025.

4. RO ಗ್ರೇಡ್-II, EO ಗ್ರೇಡ್-IV ಸ್ಪರ್ಧಾತ್ಮಕ ಪರೀಕ್ಷೆ-2024- 23 ಮಾರ್ಚ್ 2025.

5. ಕೃಷಿ ಅಧಿಕಾರಿ ಸ್ಪರ್ಧಾತ್ಮಕ ಪರೀಕ್ಷೆ-2024- 20 ಏಪ್ರಿಲ್ 2025.

6. ಪಿಟಿಐ ಮತ್ತು ಲೈಬ್ರರಿಯನ್ (ಸಂಸ್ಕೃತ ಕಾಲೇಜು ಶಿಕ್ಷಣ) ಸ್ಪರ್ಧಾತ್ಮಕ ಪರೀಕ್ಷೆ-2024 - 4 ರಿಂದ 6 ಮೇ 2025.

7. ಭೂವಿಜ್ಞಾನಿ (ಗಣಿ ಮತ್ತು ಭೂವಿಜ್ಞಾನ ಇಲಾಖೆ) ಸ್ಪರ್ಧಾತ್ಮಕ ಪರೀಕ್ಷೆ- 2024, - 7 ಮೇ 2025.

8. ಸಹಾಯಕ ಗಣಿ ಎಂಜಿನಿಯರ್ (ಗಣಿ ಮತ್ತು ಭೂವಿಜ್ಞಾನ ಇಲಾಖೆ) ಸ್ಪರ್ಧಾತ್ಮಕ ಪರೀಕ್ಷೆ- 2024, - 07 ಮೇ 2025.

9. ಸೀನಿಯರ್ ಸೈಂಟಿಫಿಕ್ ಆಫೀಸರ್ ಸ್ಪರ್ಧಾತ್ಮಕ ಪರೀಕ್ಷೆ-2024- 12 ರಿಂದ 16 ಮೇ 2025.

10. ಸಹಾಯಕ ಪ್ರಾಧ್ಯಾಪಕ (ವೈದ್ಯಕೀಯ ಶಿಕ್ಷಣ) ಸ್ಪರ್ಧಾತ್ಮಕ ಪರೀಕ್ಷೆ - 12 ರಿಂದ 16 ಮೇ 2025.

11. ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ಪರ್ಧಾತ್ಮಕ ಪರೀಕ್ಷೆ-2024- 17 ಮೇ 2025.

12. ಅಸಿಸ್ಟೆಂಟ್ ಪ್ರಾಸಿಕ್ಯೂಷನ್ ಆಫೀಸರ್ (ಮುಖ್ಯ) ಸ್ಪರ್ಧಾತ್ಮಕ ಪರೀಕ್ಷೆ-2024, -1 ಜೂನ್ 2025.

13. ರಾಜಸ್ಥಾನ ರಾಜ್ಯ ಮತ್ತು ಅಧೀನ ಸೇವೆಗಳ ಸಂಯೋಜಿತ ಸ್ಪರ್ಧಾತ್ಮಕ (ಮುಖ್ಯ) ಪರೀಕ್ಷೆ-2024, 17 ಮತ್ತು 18 ಜೂನ್ 2025.

14. ಸಹಾಯಕ ಪ್ರಾಧ್ಯಾಪಕ (ವೈದ್ಯಕೀಯ ಶಿಕ್ಷಣ) ಸ್ಪರ್ಧಾತ್ಮಕ ಪರೀಕ್ಷೆ: V.No 23/2024-25 23 ಜೂನ್ ನಿಂದ 6 ಜುಲೈ 2025.

15. ಉಪನ್ಯಾಸಕರು ಮತ್ತು ತರಬೇತುದಾರ - (ಶಾಲಾ ಶಿಕ್ಷಣ) ಸ್ಪರ್ಧಾತ್ಮಕ ಪರೀಕ್ಷೆ-2024, 23 ಜೂನ್ ನಿಂದ 6 ಜುಲೈ 2025.

16. ತಾಂತ್ರಿಕ ಸಹಾಯಕ (ಜಿಯೋಫಿಸಿಕ್ಸ್) ಸ್ಪರ್ಧಾತ್ಮಕ ಪರೀಕ್ಷೆ-2024, 7 ಜುಲೈ 2025.

17. ಬಯೋಕೆಮಿಸ್ಟ್ ಸ್ಪರ್ಧಾತ್ಮಕ ಪರೀಕ್ಷೆ-2024, 7 ಜುಲೈ 2025.

18. ಜೂನಿಯರ್ ಕೆಮಿಸ್ಟ್ ಸ್ಪರ್ಧಾತ್ಮಕ ಪರೀಕ್ಷೆ-2024, 8 ಜುಲೈ 2025.

19. ಸಹಾಯಕ ಪರೀಕ್ಷಾ ಅಧಿಕಾರಿ (PWD) ಸ್ಪರ್ಧಾತ್ಮಕ ಪರೀಕ್ಷೆ-2024, 8 ಜುಲೈ 2025.

20. ಸಹಾಯಕ ನಿರ್ದೇಶಕರು (ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ) ಸ್ಪರ್ಧಾತ್ಮಕ ಪರೀಕ್ಷೆ-2024, 9 ಜುಲೈ 2025.

21. ಸಂಶೋಧನಾ ಸಹಾಯಕ (ಮೌಲ್ಯಮಾಪನ ಇಲಾಖೆ) ಸ್ಪರ್ಧಾತ್ಮಕ ಪರೀಕ್ಷೆ-2024, 10 ಜುಲೈ 2025.

22. ಉಪ ಜೈಲರ್ ಸ್ಪರ್ಧಾತ್ಮಕ ಪರೀಕ್ಷೆ-2024, 13 ಜುಲೈ 2025.

23. ಸಹಾಯಕ ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿ ಸ್ಪರ್ಧಾತ್ಮಕ ಪರೀಕ್ಷೆ-2024, 29 ಜುಲೈ 2025.

24. ಗ್ರೂಪ್ ಇನ್‌ಸ್ಟ್ರಕ್ಟರ್/ಸರ್ವೇಯರ್/ಅಸಿಸ್ಟೆಂಟ್ ಅಪ್ರೆಂಟಿಸ್‌ಶಿಪ್ ಸ್ಪರ್ಧಾತ್ಮಕ ಪರೀಕ್ಷೆ-2024, 29 ಜುಲೈ 2025.

25. ವೈಸ್ ಪ್ರಿನ್ಸಿಪಾಲ್/ಸೂಪರಿಂಟೆಂಡೆಂಟ್ ITI ಸ್ಪರ್ಧಾತ್ಮಕ ಪರೀಕ್ಷೆ-2024, 30 ಜುಲೈನಿಂದ 1 ಆಗಸ್ಟ್ 2025.

26. ವಿಶ್ಲೇಷಕ ಕಮ್ ಪ್ರೋಗ್ರಾಮರ್ ಸ್ಪರ್ಧಾತ್ಮಕ ಪರೀಕ್ಷೆ-2024, 17 ಆಗಸ್ಟ್ 2025.

27. ಹಿರಿಯ ಶಿಕ್ಷಕರ (ಮಾಧ್ಯಮಿಕ ಶಿಕ್ಷಣ ಇಲಾಖೆ) ಸ್ಪರ್ಧಾತ್ಮಕ ಪರೀಕ್ಷೆ-2024, 7 ರಿಂದ 12 ಸೆಪ್ಟೆಂಬರ್ 2025.

28.ಪ್ರೊಟೆಕ್ಷನ್ ಆಫೀಸರ್ ಸ್ಪರ್ಧಾತ್ಮಕ ಪರೀಕ್ಷೆ-2024, 13 ಸೆಪ್ಟೆಂಬರ್ 2025.

29. ಸಹಾಯಕ ಇಂಜಿನಿಯರ್ (ಪ್ರಿಲಿಮಿನರಿ) ಸಂಯೋಜಿತ ಸ್ಪರ್ಧಾತ್ಮಕ ಪರೀಕ್ಷೆ-2024, 28 ಸೆಪ್ಟೆಂಬರ್ 2025.

30. ಸಹಾಯಕ ಅಂಕಿಅಂಶ ಅಧಿಕಾರಿ (ಆರ್ಥಿಕ ಮತ್ತು ಅಂಕಿಅಂಶ ಇಲಾಖೆ) ಸ್ಪರ್ಧಾತ್ಮಕ ಪರೀಕ್ಷೆ-2024, 12 ಅಕ್ಟೋಬರ್ 2025.

31. ಸಹಾಯಕ ಕೃಷಿ ಅಧಿಕಾರಿ (ಕೃಷಿ ಇಲಾಖೆ) ಪರೀಕ್ಷೆ-2024, 12 ರಿಂದ 19 ಅಕ್ಟೋಬರ್ 2025.

32. ಅಂಕಿಅಂಶ ಅಧಿಕಾರಿ (ಕೃಷಿ ಇಲಾಖೆ) ಪರೀಕ್ಷೆ-2024.

33. ಕೃಷಿ ಸಂಶೋಧನಾ ಅಧಿಕಾರಿ ಮತ್ತು ಸಹಾಯಕ ಕೃಷಿ ಸಂಶೋಧನಾ ಅಧಿಕಾರಿ (ಕೃಷಿ ಇಲಾಖೆ) ಪರೀಕ್ಷೆ-2024.

34. ಸಬ್ ಇನ್ಸ್‌ಪೆಕ್ಟರ್ (ಟೆಲಿಕಾಂ) ಸ್ಪರ್ಧಾತ್ಮಕ ಪರೀಕ್ಷೆ-2024, 09/11/2025.

35. ಸಹಾಯಕ ಪ್ರಾಧ್ಯಾಪಕರು (ಕಾಲೇಜು ಶಿಕ್ಷಣ ಇಲಾಖೆ) ಸ್ಪರ್ಧಾತ್ಮಕ ಪರೀಕ್ಷೆ-2024, 1 ರಿಂದ 12 ಡಿಸೆಂಬರ್, 15 ರಿಂದ 19 ಡಿಸೆಂಬರ್ ಮತ್ತು 22 ರಿಂದ 24 ಡಿಸೆಂಬರ್ 2025.

click me!