ಸರ್ಕಾರಿ ಸ್ವಾಮ್ಯದ ಪ್ರಮುಖ ಇಂಗ್ಲಿಷ್ ನ್ಯೂಸ್ ಚಾನೆಲ್ ಆಗಿರುವ ಡಿಡಿ ಇಂಡಿಯಾದಲ್ಲಿ ಖಾಲಿ ಇರುವ 15 ಹುದ್ದೆಗಳಿಗೆ ಪ್ರಸಾರ ಭಾರತಿ ಅರ್ಜಿ ಆಹ್ವಾನಿಸಿದೆ. ದೂರದರ್ಶನದಲ್ಲಿ ಪತ್ರಕರ್ತರಾಗಲು ಬಯಸುತ್ತಿರುವವರಿಗೆ ಇದೊಂದು ಅವಕಾಶವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದೆ.
ಸರ್ಕಾರಿ ಸ್ವಾಮ್ಯದ ದೂರದರ್ಶನ ನ್ಯೂಸ್ ವಾಹಿನಿಯಲ್ಲಿ ಖಾಲೆ ಇರುವ ವಿವಿಧ ಹುದ್ದೆಗಳಿಗೆ ಪ್ರಸಾರ ಭಾರತಿ ಅರ್ಜಿಗಳನ್ನು ಆಹ್ವಾನಿಸಿದೆ. ಅಸೈನ್ಮೆಂಟ್ ಕೋಆರ್ಡಿನೇಟರ್, ಬ್ರಾಡ್ಕಾಸ್ಟ್ ಎಕ್ಸಿಕ್ಯೂಟಿವ್, ಕಾಪಿ ರೈಟರ್ ಹಾಗೂ ಗೆಸ್ಟ್ ಕೋ-ಆರ್ಡಿನೇಟರ್ ಹುದ್ದೆಗಳಿಗೆಅರ್ಜಿಗಳನ್ನು ಸಲ್ಲಿಸಬಹುದು.
ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಏಪ್ರಿಲ್ 20ರೊಳಗೆ ಅರ್ಹ ಅಭ್ಯರ್ಥಿಗಳು ದೂರದರ್ಶನ ನ್ಯೂಸ್, ನವದೆಹಲಿ ಕಚೇರಿಗಳಿಗೆ ಕಳುಹಿಸಬೇಕು. ಆಸಕ್ತಿ ಮತ್ತು ಅರ್ಹತೆ ಹೊಂದಿರುವ ವ್ಯಕ್ತಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಇದಕ್ಕಾಗಿ ಪ್ರಸಾರ ಭಾರತಿಯ ಅಧಿಕೃತ ವೆಬ್ ತಾಣಕ್ಕೆ ಭೇಟಿ ಕೊಡಬೇಕು. ನೇಮಕಾತಿ ಅಧಿಸೂಚನೆಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
undefined
ಸೇನೆಯಿಂದ ಶೀಘ್ರ ಜೂನಿಯರ್ ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ?
ಅಸೈನ್ಮೆಂಟ್ ಕೋಆರ್ಡಿನೇಟರ್ – 04, ಬ್ರಾಡ್ಕಾಸ್ಟ್ ಎಕ್ಸಿಕ್ಯೂಟಿವ್ ಗ್ರೇಡ್ 1- 05, ಕಾಪಿ ರೈಟರ್ ಗ್ರಾಡ್ 2 – 04, ಗೆಸ್ಟ್ ಕೋಆರ್ಡಿನೇಟರ್ ಗ್ರೇಡ್ 1- 1, ಗೆಸ್ಟ್ ಕೋಆರ್ಡಿನೇಟರ್ ಗ್ರೇಡ್ 2- 1 ಹುದ್ದೆಗಳಿಗೆ ಸರ್ಕಾರಿ ಸ್ವಾಮ್ಯದ ದೂರದರ್ಶನವು ನೇಮಕಾತಿ ಪ್ರಕ್ರಿಯನ್ನು ಆರಂಭಿಸಲಾಗಿದೆ.
ಅಸೈನ್ಮೆಂಟ್ ಕೋಆರ್ಡಿನೇಟರ್ ಹುದ್ದಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಾಮೂಹಿಕ ಸಂವಹನ ಅಥವಾ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಪಡೆದಿರಬೇಕು. ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು. ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಟ 5 ವರ್ಷ ಅನುಭವವಿರಬೇಕು. ವಯೋಮಿತಿ 40 ವರ್ಷ ಮೀರಿರಬಾರದು.
ಇನ್ನು ಬ್ರಾಡ್ಕಾಸ್ಟ್ ಎಕ್ಸಿಕ್ಯೂಟಿವ್ ಗ್ರೇಡ್ 1 ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ರೇಡಿಯೋ / ಟೆಲಿವಿಷನ್ ಪ್ರೊಡಕ್ಷನ್ನಲ್ಲಿ ಪದವಿ ಅಥವಾ ವೃತ್ತಿಪರ ಡಿಪ್ಲೊಮಾ ಆಗಿರಬೇಕು. ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು. ಇದೇ ಕ್ಷೇತ್ರದಲ್ಲಿ ಕನಿಷ್ಟ 3 ವರ್ಷ ಅನುಭವವಿರಬೇಕು. 40 ವರ್ಷ ಮೀರಿರಬಾರದು.
NTPCಯಲ್ಲಿ ನೇಮಕಾತಿ; ತಿಂಗಳಿಗೆ 71 ಸಾವಿರ ರೂಪಾಯಿ ಸಂಬಳ!
ಕಾಪಿ ರೈಟರ್ ಗ್ರಾಡ್ 2 ಹುದ್ದೆಗಳಿಗೆ ಅರ್ಜಿ ಹಾಕುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಸಾಮೂಹಿಕ ಸಂವಹನ / ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಸಂಬಂಧಿತ ವಿಷಯದಲ್ಲಿ ಪದವಿ ಪಡೆದಿರಬೇಕು. ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು. ಇದೇ ಕ್ಷೇತ್ರದಲ್ಲಿ ಕನಿಷ್ಟ 1 ವರ್ಷ ಅನುಭವವಿರಬೇಕು. ವಯೋಮಿತಿ 40 ವರ್ಷ ಮೀರಿರಬಾರದು.
ಗೆಸ್ಟ್ ಕೋಆರ್ಡಿನೇಟರ್ ಗ್ರೇಡ್ 1 ಹುದ್ದೆಗೆ ಬಿಎ ಪದವೀಧರರಾಗಿರಬೇಕು. ಪ್ರತಿಷ್ಠಿತ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಸಾರ್ವಜನಿಕ ಸಂಪರ್ಕ / ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಆಗಿರಬೇಕು. ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು. ಇದೇ ಕ್ಷೇತ್ರದಲ್ಲಿ ಕನಿಷ್ಟ 7 ವರ್ಷ ಅನುಭವವಿರಬೇಕು. ವಯೋಮಿತಿ 45 ವರ್ಷ ಮೀರಿರಬಾರದು.
ಹಾಗೆಯೇ ಗೆಸ್ಟ್ ಕೋಆರ್ಡಿನೇಟರ್ ಗ್ರೇಡ್ 2 ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಬಿಎ ಪದವೀಧರರಾಗಿರಬೇಕು. ಪ್ರತಿಷ್ಠಿತ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಸಾರ್ವಜನಿಕ ಸಂಪರ್ಕ / ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಆಗಿರಬೇಕು. ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು. ಇದೇ ಕ್ಷೇತ್ರದಲ್ಲಿ ಕನಿಷ್ಟ 3 ವರ್ಷ ಅನುಭವವಿರಬೇಕು. ವಯೋಮಿತಿ 45 ವರ್ಷ.
ವಾಯುಪಡೆಯಲ್ಲಿ 1515 ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ ಶುರು, ಅಪ್ಲೈ ಮಾಡಿ
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಉಪನಿರ್ದೇಶಕರು (ಎಚ್‌ಆರ್), ಕೊಠಡಿ ಸಂಖ್ಯೆ 413, 4 ನೇ ಮಹಡಿ, ದೂರದರ್ಶನ ಭವನ, ಟವರ್-ಬಿ ಕೋಪರ್ನಿಕಸ್ ಮಾರ್ಗ, ನವದೆಹಲಿ -110001- ಇಲ್ಲಿಗೆ ನೋಂದಾಯಿತ ಪೋಸ್ಟ್ / ಕೊರಿಯರ್ / ಡ್ರಾಪ್ ಬಾಕ್ಸ್ ಮೂಲಕ ಕಳುಹಿಸಬೇಕು. ದಿನಾಂಕ 20 ಏಪ್ರಿಲ್ 2021 ರಂದು ಸಂಜೆ 05:00 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.