ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆ- ಸೆಟ್) ಹೊಸ ದಿನಾಂಕ ನಿಗದಿ

By Suvarna News  |  First Published Jul 9, 2021, 3:40 PM IST

* ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ 
* ಮುಂದೂಡಲಾಗಿದ್ದ ಕೆ- ಸೆಟ್ ಪರೀಕ್ಷೆಯ ದಿನಾಂಕ ಮರು ನಿಗದಿ
* ಪ್ರಕಟಣೆ ಹೊರಡಿಸಿದ ಮೈಸೂರು ವಿಶ್ವವಿದ್ಯಾಲಯ


ಬೆಂಗಳೂರು, (ಜುಲೈ.09): ಕೊರೋನಾ ಕಾರಣದಿಂದ ಮುಂದೂಡಲಾಗಿದ್ದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ- ಸೆಟ್)ಯ ದಿನಾಂಕವನ್ನು ಮರು ನಿಗದಿಗೊಳಿಸಲಾಗಿದೆ. 

ಜುಲೈ 25ರಂದು ಪರೀಕ್ಷೆಯು ನಡೆಯಲಿದೆ ಎಂದು ಪರೀಕ್ಷೆಯನ್ನು ಆಯೋಜಿಸುವ ಮೈಸೂರು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Tap to resize

Latest Videos

ಶಿಕ್ಷಕರ ಅರ್ಹತಾ ಪರೀಕ್ಷೆಗೆ(TET) ಡೇಟ್‌ ಫಿಕ್ಸ್‌..!

ಈ ಮೊದಲು ಏಪ್ರಿಲ್ 11ರಂದು ಕೆ- ಸೆಟ್ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ದೇಶದಲ್ಲಿ ಕರೊನಾ ಸೋಂಕು ಹೆಚ್ಚಾದ ಕಾರಣ ಎರಡನೇ ಹಂತದ ಲಾಕ್​ಡೌನ್​ ಹೇರಲಾಗಿತ್ತು.

ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಿ ವಿಶ್ವವಿದ್ಯಾಲಯವು ಆದೇಶಹೊರಡಿಸಿತ್ತು. ಈಗ ಮತ್ತೆ ದಿನಾಂಕವನ್ನು ನಿಗದಿ ಮಾಡಿ ಮೈಸೂರು ವಿವಿ ಪ್ರಕಟಣೆ ಹೊರಡಿಸಿದೆ.

ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾಲಯದ ವೆಬ್​ಸೈಟನ್ನು ಸಂಪರ್ಕಿಸಬಹುದು : https://kset.uni-mysore.ac.in/

click me!