ಕೆಎಸ್‌ಆರ್‌ಟಿಸಿ ನೇಮಕಾತಿ ಮುಂದುವರಿಕೆ, ಮೇ 15ರಿಂದ ಆರಂಭ

By Kannadaprabha News  |  First Published May 10, 2024, 11:36 AM IST

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ಈವರೆಗೆ ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆಗೆ ಕೆಎಸ್ಸಾರ್ಟಿಸಿ ಚಾಲನೆ ನೀಡಿದೆ.


ಬೆಂಗಳೂರು (ಮೇ.10): ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ಈವರೆಗೆ ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆಗೆ ಕೆಎಸ್‌ಆರ್‌ಟಿಸಿ ಚಾಲನೆ ನೀಡಿದೆ. ನಾಲ್ಕು ವರ್ಷಗಳ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಯಂತೆ ಚಾಲಕ ಕಂ ನಿರ್ವಾಹಕ ಹುದ್ದೆ ನೇರ ನೇಮಕಾತಿಯ ಮುಂದಿನ ಪ್ರಕ್ರಿಯೆಗೆ ಮೇ 15ರಿಂದ ಮರುಚಾಲನೆ ನೀಡಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಯಲ್ಲಿ ಖಾಲಿ ಇರುವ ಚಾಲಕ ಕಂ ನಿರ್ವಾಹಕ ಹುದ್ದೆಗಳ ಪೈಕಿ ಸದ್ಯ ಎರಡು ಸಾವಿರಕ್ಕೂ ಹೆಚ್ಚಿನ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದೀಗ ಮೇ 15ರಿಂದ ನೇಮಕಾತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ದಾಖಲೆಗಳ ಮತ್ತು ದೇಹದಾರ್ಢ್ಯತಾ ಪರಿಶೀಲನೆ ಮಾಡಲು ನಿರ್ಧರಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಮೇ 8ರಿಂದ ನಿಗಮದ ವೆಬ್‌ಸೈಟ್‌ www.ksrtcjobs.karnataka.gov.inರಲ್ಲಿ ಕರೆಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕಿದೆ. ಆ ಕರೆ ಪತ್ರದಲ್ಲಿ ದಾಖಲೆಗಳ ಮತ್ತು ದೇಹದಾರ್ಢ್ಯತಾ ಪರಿಶೀಲನೆಗೆ ನಿಗದಿ ಮಾಡಲಾಗಿರುವ ದಿನಾಂಕದಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  ಕೇಂದ್ರ ಕಚೇರಿಗೆ ಹಾಜರಾಗುವಂತೆ ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ಜಿಲ್ಲಾಡಳಿತದಿಂದ ಕ್ಲರ್ಕ್ ಮತ್ತು ಡೆಟಾ ಎಂಟ್ರಿ ಆಪರೇಟರ್ ನೇಮಕಾತಿ

Tap to resize

Latest Videos

undefined

ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ಕಾನ್‌ಸ್ಟೇಬಲ್ ನೇಮಕ
ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ನಲ್ಲಿ ಅಗತ್ಯ ಕಾನ್‌ಸ್ಟೇಬಲ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಆಗಾಗ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಗ್ರೂಪ್ ಸಿ ನಾನ್-ಗೆಜೆಟೆಡ್ (ನಾನ್ ಮಿನಿಸ್ಟೀರಿಯಲ್) ಹುದ್ದೆಗಳು ಇವಾಗಿದ್ದು, ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.

ವಿದ್ಯಾರ್ಹತೆ
ಮೆಟ್ರಿಕ್ಯೂಲೇಷನ್ ಅಥವಾ 10ನೇ ತರಗತಿ ಪಾಸ್ ಮಾಡಿರಬೇಕು.

ವಯಸ್ಸಿನ ಅರ್ಹತೆ
ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.

ವೇತನ ಬಡ್ತಿ ಒಂದು ಜೋಕ್, ಸಂಬಳ ಹೆಚ್ಚಬೇಕಂದ್ರೆ ಉದ್ಯೋಗ ಬದಲಿಸಿ; ಇಂಜಿನಿಯರ್ ಪೋಸ್ಟ್ ವೈರಲ್

ಇತರೆ:
ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ದೈಹಿಕ ಸಾಮರ್ಥ್ಯ: ಎತ್ತರ: ೧೭೦ ಸೆ.ಮೀ ಎದೆಯ ಸುತ್ತಳತೆ ೮೦-೮೫ ಸೆಂ. ಮೀ

ಆಯ್ಕೆ ಪ್ರಕ್ರಿಯೆಗಳು: ದೈಹಿಕ ಸಾಮರ್ಥ್ಯ ಪರೀಕ್ಷೆ /ಸಹಿಷ್ಣುತಾ ಪರೀಕ್ಷೆ /ಲಿಖಿತ ಪರೀಕ್ಷೆ / ಮೂಲ ದಾಖಲೆಗಳ ಪರಿಶೀಲನೆ /ಪ್ರಾಯೋಗಿಕ ಪರೀಕ್ಷೆ / ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.

ಐಟಿಬಿಪಿ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆಯ ಪಠ್ಯಕ್ರಮ ಎಸ್‌ಎಸ್‌ಎಲ್‌ಸಿ ಹಂತದ ಪಠ್ಯಕ್ರಮದ ಜತೆಗೆ ಪ್ರಚಲಿತ ವಿದ್ಯಮಾನಗಳನ್ನು ಹೊಂದಿರುತ್ತದೆ.

ಪಠ್ಯಕ್ರಮ:
ಸಾಮಾನ್ಯ ಜ್ಞಾನ, ಗಣಿತಶಾಸ್ತ್ರ, ಜನರಲ್ ಹಿಂದಿ, ಜನರಲ್ ಇಂಗ್ಲಿಷ್‌, ವ್ಯಾಪಾರ-ಸಂಬಂಧಿತ (ಟ್ರೇಡ್ ರಿಲೇಟೆಡ್) ಸಿದ್ಧಾಂತದ ಪ್ರಶ್ನೆಗಳು ಇದ್ದು ೧೦೦ ವಸ್ತುನಿಷ್ಠ ಮಾದರಿ ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ ೧

ಅಂಕ ಇರುತ್ತದೆ. ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ. ಪರೀಕ್ಷೆಯ ಅವಧಿ ೨ ಗಂಟೆ, ಪರೀಕ್ಷೆಯು ಆಫ್‌ಲೈನ್‌ನಲ್ಲಿ ನಡೆಸಲಾಗುತ್ತದೆ.

ಪಠ್ಯಕ್ರಮವು ಪರೀಕ್ಷೆಯ ಪ್ರಮುಖ ಭಾಗವಾಗಿದೆ, ಐಟಿಬಿಪಿ ಕಾನ್‌ಸ್ಟೇಬಲ್‌ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಪಠ್ಯಕ್ರಮ ಮತ್ತು ಅಧ್ಯಯನ ಮಾಡಬೇಕಾದ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ದೈಹಿಕ ಸಾಮರ್ಥ್ಯ ಪರೀಕ್ಷೆ
7.30 ನಿಮಿಷದಲ್ಲಿ 1.6 ಕಿ.ಮೀ ಓಟವನ್ನು ಪೂರೈಸಬೇಕು
ಲಾಂಗ್ ಜಂಪ್: ಮೂರು ಅವಕಾಶಗಳಲ್ಲಿ 11 ಅಡಿ ಹೈಜಂಪ್: ಮೂರು ಅವಕಾಶಗಳಲ್ಲಿ 3.5 ಅಡಿ
ವೇತನ ಶ್ರೇಣಿ: ರು.21,700-69100 (7ನೇ ವೇತನ ಆಯೋಗದ ಪ್ರಕಾರ ಲೆವೆಲ್ 3 ಪೇ ಮೆಟ್ರಿಕ್ಸ್ ಸಂಭಾವನೆ) ವೇತನವು ಕಾಲಾನುಸಾರ ವ್ಯತ್ಯಾಸವಾಗಲಿದೆ.

 

click me!