ನಿಗಮ ಮಂಡಳಿ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯ ಹುದ್ದೆವಾರು ಅಂಕ ಪಟ್ಟಿ ಪ್ರಕಟ, ಈಗಲೇ ಚೆಕ್‌ ಮಾಡಿ

By Kannadaprabha News  |  First Published Apr 24, 2024, 11:16 AM IST

ಆರು ನಿಗಮ-ಮಂಡಳಿಗಳ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಪಡೆದಿರುವ ಅಂಕಗಳ ಆಧಾರದಲ್ಲಿ 725 ಹುದ್ದೆವಾರು ತಾತ್ಕಾಲಿಕ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.


ಬೆಂಗಳೂರುv (ಏ.24): ಎಂಎಸ್ಐಎಲ್, ಕಿಯೋನಿಕ್ಸ್ ಸೇರಿದಂತೆ ಆರು ನಿಗಮ-ಮಂಡಳಿಗಳ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಪಡೆದಿರುವ ಅಂಕಗಳ ಆಧಾರದಲ್ಲಿ 725 ಹುದ್ದೆವಾರು ತಾತ್ಕಾಲಿಕ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ರಾತ್ರಿ ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ  https://cetonline.karnataka.gov.in/kea/ ಭೇಟಿ ನೀಡಿ.

ಸಿಇಟಿ ಎಡವಟ್ಟು, ತಜ್ಞರ ಸಮಿತಿ ರಚನೆ ಮಾಡಿ ತನಿಖೆಗೆ ಸರ್ಕಾರ ಆದೇಶ

Tap to resize

Latest Videos

undefined

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (41 ಹುದ್ದೆ), ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (386), ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (186), ಎಂಎಸ್ಐಎಲ್ (72), ಕಿಯೋನಿಕ್ಸ್ (26), ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ (14) ವಿವಿಧ ವೃಂದದ ಒಟ್ಟು 725 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಈ ತಾತ್ಕಾಲಿಕ ಅಂಕ ಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ ಇದೇ 29ರೊಳಗೆ ಇ-ಮೇಲ್ (kea2023exam@gmail.com) ಮೂಲಕ ಸಲ್ಲಿಸಬಹುದು ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಅಂಬಾನಿಗಿರುವ ವಿದೇಶಿ ಆಸ್ತಿಗಳ ಪಟ್ಟಿ, ಭಾರತದ ಮನೆಗಿಂತಲೂ ಹೆಚ್ಚು ದುಬ ...

ಸಿಇಟಿ-ಕೃಷಿ ಕೋಟಾ ಕ್ಲೇಮಿಗೆ ಅವಕಾಶ: 2024ನೇ ಸಾಲಿನ ಸಿಇಟಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಕೃಷಿಕರ ಕೋಟಾದ ಕ್ಲೇಮ್ ಗಳನ್ನು ತಮ್ಮ ಆನ್ ಲೈನ್ ಅರ್ಜಿಯಲ್ಲಿ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೊಂದು ಅವಕಾಶ ನೀಡಿದೆ.ಏ.23ರಂದು ಮಧ್ಯಾಹ್ನ 2ಗಂಟೆಯಿಂದ ಏ.24ರ ಮಧ್ಯರಾತ್ರಿ12ಗಂಟೆವರೆಗೆ ಅವಕಾಶ ಇರುತ್ತದೆ ಎಂದು ತಿಳಿಸಿದೆ.

click me!