ಕೆಪಿಎಸ್‌ಸಿ ಮತ್ತೊಂದು ಭಾರೀ ಹಗರಣ: ₹80 ಲಕ್ಷಕ್ಕೆ ಪಶುವೈದ್ಯ ಹುದ್ದೆ ಮಾರಾಟ? ವಿಡಿಯೋ ಸಮೇತ ಮದ್ಯವರ್ತಿ ಲಾಕ್!

Published : Jul 23, 2026, 12:43 PM IST
KPSC Scam

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಬೃಹತ್ ಹಗರಣ ಬೆಳಕಿಗೆ ಬಂದಿದೆ. ಒಂದು ಹುದ್ದೆಗೆ 80 ಲಕ್ಷ ರೂ. ವರೆಗೆ ಮಾರಾಟ ಮಾಡಲಾಗಿದ್ದು, ಈ ಅಕ್ರಮಕ್ಕೆ ಸಂಬಂಧಿಸಿದ ಮಧ್ಯವರ್ತಿಯ ವಿಡಿಯೋವೊಂದು ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿ ಮರುಪರೀಕ್ಷೆಗೆ ಆಗ್ರಹಿಸಿದ್ದಾರೆ.

ಬೆಂಗಳೂರು (ಜು.23): ಪ್ರತಿಭಾವಂತ ನಿರುದ್ಯೋಗಿ ಯುವಕರಿಗೆ ಆಸರೆಯಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ (Massive Scam) ಬಯಲಾಗಿದೆ. ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕಾತಿ (Veterinary Officer Recruitment) ಪ್ರಕ್ರಿಯೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದ್ದು, ಒಂದು ಸರ್ಕಾರಿ ಹುದ್ದೆಯನ್ನು ಬರೋಬ್ಬರಿ 80 ಲಕ್ಷ ರೂಪಾಯಿಗಳಿಗೆ (80 Lakh Rupees) ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಶೇ. 60ರಷ್ಟು ಹುದ್ದೆಗಳಲ್ಲಿ ಅಕ್ರಮ!:

ರಾಜ್ಯದಲ್ಲಿ ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ [342 ಸಾಮಾನ್ಯ + 58 ಬ್ಯಾಕ್‌ಲಾಗ್ (Backlog Posts)] ಕಳೆದ ಜನವರಿ 8 ರಂದು ಲಿಖಿತ ಪರೀಕ್ಷೆ (Written Exam) ನಡೆದಿತ್ತು. ಇತ್ತೀಚೆಗಷ್ಟೇ, ಅಂದರೆ ಜುಲೈ 17 ರಂದು ಇದರ ಫಲಿತಾಂಶ (Exam Results) ಹೊರಬಿದ್ದಿತ್ತು. ಆದರೆ, ಫಲಿತಾಂಶ ನೋಡಿದ ನೈಜ ಆಕಾಂಕ್ಷಿಗಳು ದಿಗ್ಭ್ರಮೆಗೊಳಗಾಗಿದ್ದಾರೆ. ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲಿ ಶೇ. 60ರಷ್ಟು ಹುದ್ದೆಗಳಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು (Candidates) ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗಷ್ಟೇ ಅಮಾನತ್ತಾದ ಕೆಪಿಎಸ್‌ಸಿ ಸದಸ್ಯ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ಅವರ ಕೈವಾಡ ಈ ಹಗರಣದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಡಿಯೋದಲ್ಲಿ ಸಿಕ್ಕಿಬಿದ್ದ ಮಧ್ಯವರ್ತಿ!:

ಈ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಪುಷ್ಟಿ ನೀಡುವಂತೆ ಮಧ್ಯವರ್ತಿಗಳ (Middlemen) ಡೀಲಿಂಗ್‌ನ ಎಕ್ಸ್‌ಕ್ಲೂಸಿವ್ ವಿಡಿಯೋವೊಂದು (Exclusive Video) ಲಭ್ಯವಾಗಿದೆ. ಮೊಹಮ್ಮದ್ ಆರಿಫ್ (Mohammed Arif) ಎಂಬ ಮಧ್ಯವರ್ತಿಯು ಕಾಂತಕುಮಾರ್ ಎಂಬುವವರ ಜೊತೆ ಫೋನ್ ಕರೆಯಲ್ಲಿ (Phone Call) ನೇರವಾಗಿ ಹಣಕ್ಕೆ ಡಿಮ್ಯಾಂಡ್ (Direct Cash Demand) ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಒಂದೊಂದು ಪೋಸ್ಟ್‌ಗೂ ಲಕ್ಷ ಲಕ್ಷ ಹಣದ ಚೌಕಾಸಿ ನಡೆದಿರುವುದು ಈ ವಿಡಿಯೋದಿಂದ ಸ್ಪಷ್ಟವಾಗಿದೆ.

ವಿಧಾನಸೌಧ ಠಾಣೆ ಮೆಟ್ಟಿಲೇರಿದ ಅಭ್ಯರ್ಥಿಗಳು:

ಪರೀಕ್ಷೆ ಬರೆದು ಹಗಲಿರುಳು ಕಷ್ಟಪಟ್ಟಿದ್ದ ವೆಟರ್ನರಿ ಡಾಕ್ಟರ್ಸ್ (Veterinary Doctors) ಈಗ ಆಕ್ರೋಶಗೊಂಡಿದ್ದಾರೆ. ಈ ಭಾರೀ ಅಕ್ರಮದ ವಿರುದ್ಧ ಸಿಡಿದೆದ್ದಿರುವ 50ಕ್ಕೂ ಹೆಚ್ಚು ಅಭ್ಯರ್ಥಿಗಳು ನೇರವಾಗಿ ವಿಧಾನಸೌಧ ಪೊಲೀಸ್ ಠಾಣೆಗೆ (Vidhana Soudha Police Station) ಆಗಮಿಸಿ ದೂರು (Complaint) ದಾಖಲಿಸಲು ಮುಂದಾಗಿದ್ದಾರೆ.

ಆಕಾಂಕ್ಷಿಗಳ ಪ್ರಮುಖ ಬೇಡಿಕೆಗಳೇನು?:

ಹಣವಿದ್ದವರಿಗೆ ಮಾತ್ರ ಕೆಪಿಎಸ್‌ಸಿಯಲ್ಲಿ ಕೆಲಸ ಸಿಗುವುದಾದರೆ ನಾವೇಕೆ ಓದಬೇಕು ಎಂದು ಪ್ರಶ್ನಿಸಿರುವ ಅಭ್ಯರ್ಥಿಗಳು, ಈಗ ನಡೆದಿರುವ ಇಡೀ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು (Cancel Recruitment Process) ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಪಾರದರ್ಶಕವಾಗಿ ಮರು ಪ್ರಕ್ರಿಯೆ ಹಾಗೂ ಮರು ಪರೀಕ್ಷೆ (Re-examination) ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ರೋಹಿಣಿ ಸಿಂಧೂರಿ ಕಡತಕ್ಕೆ ಸಿಎಂ ಅಸ್ತು, ವರ್ಷಗಳಿಂದ ಠಿಕಾಣಿ ಹೂಡಿದ್ದ 80% ಗಣಿ ಇಲಾಖೆ ಸಿಬ್ಬಂದಿಗೆ ವರ್ಗಾವಣೆ ಶಾಕ್!
ಕರ್ನಾಟಕ ಲೋಕಾಯುಕ್ತ ನೇಮಕಾತಿ 2026: ಕ್ಲರ್ಕ್, ಟೈಪಿಸ್ಟ್ ಹುದ್ದೆ, ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ!