KPSC Group C Answer Key: ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಬಿಡುಗಡೆ, ಆಕ್ಷೇಪಣೆ ಸಲ್ಲಿಸಲು ಜನವರಿ 11 ಕೊನೆ ದಿನ

By Suvarna News  |  First Published Jan 6, 2022, 6:12 PM IST

ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳಿಗೆ ಡಿಸೆಂಬರ್ 19, 2021 ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಜನವರಿ 11,2022 ಸಂಜೆ 05-30 ಗಂಟೆಯೊಳಗೆ ಸಲ್ಲಿಸಲು ಕೋರಲಾಗಿದೆ. 


ಬೆಂಗಳೂರು(ಜ.6): ಕರ್ನಾಟಕ ಲೋಕಸೇವಾ ಆಯೋಗವು (KPSC ) ಗ್ರೂಪ್ ಸಿ ತಾಂತ್ರಿಕೇತರ (Group C Non Technical) ಹುದ್ದೆಗಳಿಗೆ ಡಿಸೆಂಬರ್ 19, 2021 ರಂದು ನಡೆಸಿದ್ದ   ಸ್ಪರ್ಧಾತ್ಮಕ ಪರೀಕ್ಷೆಯ (competitive exams) ಕೀ ಉತ್ತರಗಳನ್ನು (Answer Key) ಬಿಡುಗಡೆ ಮಾಡಿದೆ. ಸದರಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಚೆಕ್‌ ಮಾಡಿಕೊಳ್ಳಬಹುದು. ಗ್ರೂಪ್ ಸಿ ವಿವಿಧ ತಾಂತ್ರಿಕೇತರ ಹುದ್ದೆಗಳ ಪತ್ರಿಕೆ-1, ಪತ್ರಿಕೆ-2 ಪರೀಕ್ಷೆ ಸರಿಯುತ್ತರಗಳ P, Q, R, S, T, U ಬುಕ್‌ಲೆಟ್‌ ಸೀರೀಸ್‌ಗಳಿಗೆ ಪ್ರತ್ಯೇಕವಾಗಿ ಕೀ ಉತ್ತರಗಳನ್ನು ಅಭ್ಯರ್ಥಿಗಳು ಚೆಕ್‌ ಮಾಡಬಹುದು. ಕೀ ಉತ್ತರಗಳಿಗೆ ಸಂಬಂಧಿಸಿದಂತೆ  ಯಾವುದೇ ಆಕ್ಷೇಪಣೆಗಳಿದ್ದಲ್ಲಿ (objections) ಜನವರಿ 11,2022 ಸಂಜೆ 05-30 ಗಂಟೆಯೊಳಗೆ ಸಲ್ಲಿಸಲು ಕೋರಲಾಗಿದೆ.

ಅಭ್ಯರ್ಥಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು - 560001. ಈ ವಿಳಾಸಕ್ಕೆ ಮಾತ್ರ ತಲುಪುವಂತೆ ಆಕ್ಷೇಪಣೆಗಳನ್ನು ಕಳುಹಿಸಿಕೊಡಬಹುದು.  

Tap to resize

Latest Videos

undefined

ಕೆಪಿಎಸ್ಸಿ ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳ ಕೀ ಉತ್ತರ ವೀಕ್ಷಿಸಲು ಅಧಿಕೃತ ವೆಬ್ ತಾಣ http://kpsc.kar.nic.in/ ಗೆ ಭೇಟಿ ನೀಡಿ. ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳ ಕೀ ಉತ್ತರಗಳ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಮುಂದಿನ ಪೇಜ್ ನಲ್ಲಿ ಕ್ರ.ಸಂಖ್ಯೆ ಜೊತೆಗೆ ಕೀ-ಉತ್ತರಗಳು ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.

SEBI RECRUITMENT 2022: ಆಫೀಸರ್ ಗ್ರೇಡ್​ ಎ ಹುದ್ದೆಗೆ ಅರ್ಜಿ ಆಹ್ವಾನಿಸಿದ ಭದ್ರತೆ ಮತ್ತು ವಿನಿಮಯ ಮಂಡಳಿ

ಇತರೆ ಸೂಚನೆಗಳು: ಆಕ್ಷೇಪಣೆಯೊಂದಿಗೆ ಸ್ವತಃ ದೃಢೀಕರಿಸಿದ ಪ್ರವೇಶ ಪತ್ರವನ್ನು ಪರಿಶೀಲನೆಗಾಗಿ ಲಗತ್ತಿಸತಕ್ಕದ್ದು. ಅಗತ್ಯ ಆಕರ ಗ್ರಂಥಗಳ ವಿವರಗಳು, ಪ್ರತಿಗಳನ್ನು ಲಗತ್ತಿಸಬೇಕು. ಪ್ರತಿ ಕೀ ಉತ್ತರಕ್ಕೆ ಆಕ್ಷೇಪಣೆಗೆ ರೂ.50 ಅನ್ನು ಐಪಿಒ ಅಥವಾ ಡಿಡಿ ಮೂಲಕ 'ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ' ಇವರ ಹೆಸರಿಗೆ ಸಂದಾಯ ಮಾಡಬೇಕು. ಒಂದು ವೇಳೆ ನಿಗದಿತ ಶುಲ್ಕ ಪಾವತಿ ಮಾಡದಿದ್ದಲ್ಲಿ ಆಕ್ಷೇಪಣೆ ಸಲ್ಲಿಕೆ ಆಗುವುದಿಲ್ಲ.

CSIR UGC NET 2021 CORRECTION WINDOW: ಜನವರಿ 9 ರವರೆಗೆ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಿದ NTA

ಕೆಪಿಎಸ್‌ಸಿ (Karnataka Public Service Commission)523 ವಿವಿಧ ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಸೆಪ್ಟೆಂಬರ್ 19,2020ರೊಳಗೆ ಅರ್ಜಿಯನ್ನು ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಪದವಿ ವಿದ್ಯಾರ್ಹತೆ ಮತ್ತು ಪದವಿ ಪೂರ್ವ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿತ್ತು.

CCI Recruitment 2022: ಭಾರತೀಯ ಸ್ಪರ್ಧಾ ಆಯೋಗದಲ್ಲಿ 2 ಲಕ್ಷದವರೆಗೆ ವೇತನದ ಉದ್ಯೋಗ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿರಬೇಕು. ಹಿಂದುಳಿದ ವರ್ಗಗಳಿಗೆ ಗರಿಷ್ಟ 38 ವರ್ಷ ಮತ್ತು ಪ.ಜಾ/ಪ.ಪಂ/ಪ್ರವರ್ಗ-1ರ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು ಎಂದು ನೇಮಕಾತಿ ಅಧಿಸೂಚನೆಯಲ್ಲಿ ಹೇಳಲಾಗಿತ್ತು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,400/-ರಿಂದ 70,850/-ರೂ ವೇತನ ದೊರೆಯಲಿದೆ.

BCWD NEET JEE Pre Examination Coaching 2022: ಉಚಿತ ನೀಟ್‌, ಜೆಇಇ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

click me!