KSP Constable Recruitment 2022: ವಿವಿಧ ಹುದ್ದೆಗಳಿಗೆ ತೃತೀಯ ಲಿಂಗಿಗಳಿಗೂ ಸೇರಿ ನೇಮಕಾತಿ

By Gowthami K  |  First Published Oct 13, 2022, 1:49 PM IST

 ರಾಜ್ಯ ಪೊಲೀಸ್​ ಇಲಾಖೆಯಲ್ಲಿ  ಖಾಲಿ ಇರುವ ವಿವಿಧ ವಿಭಾಗಕ್ಕೆ  ಪೊಲೀಸ್​ ಕಾನ್ಸ್​ಟೇಬಲ್ ಹುದ್ದೆಗಳ ನೇಮಕಾತಿಗೆ  ಅಧಿಸೂಚನೆ ಪ್ರಕಟಿಸಲಾಗಿದೆ.  ಅಧಿಸೂಚನೆ  ಸಂಖ್ಯೆ 6 ರಲ್ಲಿ  1,137 ಹುದ್ದೆಗಳು,  ಅಧಿಸೂಚನೆ  ಸಂಖ್ಯೆ 7ರಲ್ಲಿ 3064  ಹುದ್ದೆಗಳು,  ಅಧಿಸೂಚನೆ  ಸಂಖ್ಯೆ 9ರಲ್ಲಿ ಕಲ್ಯಾಣ ಕರ್ನಾಟಕಕ್ಕೆ 420 ಹುದ್ದೆಗಳಿವೆ.


ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯಲ್ಲಿ  ಖಾಲಿ ಇರುವ ವಿವಿಧ ವಿಭಾಗಕ್ಕೆ  ಪೊಲೀಸ್​ ಕಾನ್ಸ್​ಟೇಬಲ್ ಹುದ್ದೆಗಳ ನೇಮಕಾತಿಗೆ  ಅಧಿಸೂಚನೆ ಪ್ರಕಟಿಸಲಾಗಿದೆ. ಅಧಿಸೂಚನೆ  ಸಂಖ್ಯೆ 6 ರ ಪ್ರಕಾರ ಪೊಲೀಸ್‌ ಕಾನ್ಸ್ಟೇಬಲ್‌ ಸಿವಿಲ್‌, ಸೇವಾನಿರತ ಮತ್ತು ಬ್ಯಾಕ್‌ಲಾಗ್‌ ಸೇರಿದಂತೆ 1,137 ಹುದ್ದೆಗಳ ನೇರ ನೇಮಕಕ್ಕೆ ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 21 ಕೊನೆಯ ದಿನಾಗಿದೆ.
ಒಟ್ಟು 1,137ಹುದ್ದೆಗಳ  ವಿವರ ಇಂತಿದೆ
ಪೊಲೀಸ್​ ಕಾನ್ಸ್​ಟೇಬಲ್ ಸಿವಿಲ್ ಹುದ್ದೆಗಳು:
ಪುರುಷ -683 ಹುದ್ದೆಗಳು
ಮಹಿಳೆ-229 ಹುದ್ದೆಗಳು
ಪುರುಷ ತೃತೀಯ ಲಿಂಗಿ -22 ಹುದ್ದೆಗಳು
ಮಹಿಳಾ ತೃತೀಯ ಲಿಂಗಿ - 10 ಹುದ್ದೆಗಳು
ಸೇವಾನಿರತ ಪೊಲೀಸ್​ ಕಾನ್ಸ್​ಟೇಬಲ್ ಸಿವಿಲ್ ಹುದ್ದೆಗಳು:
ಪುರುಷ - 134 ಹುದ್ದೆಗಳು
ಮಹಿಳೆ- 57 ಹುದ್ದೆಗಳು
ಪುರುಷ ತೃತೀಯ ಲಿಂಗಿ - 1 ಹುದ್ದೆ 
ಮಹಿಳಾ ತೃತೀಯ ಲಿಂಗಿ - 1 ಹುದ್ದೆ 

ನೇಮಕಾತಿ ಅಧಿಸೂಚನೆ ಸಂಖ್ಯೆ 7 ರ ಪ್ರಕಾರ ಸಶಸ್ತ ಪೊಲೀಸ್  ಕಾನ್ಸ್​ಟೇಬಲ್ (ಸಿಎಆರ್/ಡಿಎಆರ್) ಸಾಮಾನ್ಯ ಪುರುಷ ಮತ್ತು ಪುರುಷ ತೃತೀಯ ಲಿಂಗಿಗಳಿಗೆ  ಒಟ್ಟು 3064 ಹುದ್ದೆಗಳ ಭರ್ತಿಗೆ ಅಧಿಸೂಚನೆ  ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ.
ನೇಮಕಾತಿ ಅಧಿಸೂಚನೆ ಸಂಖ್ಯೆ ಸಂಖ್ಯೆ 9 ರ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ   ಖಾಲಿ ಇರುವ   ಸಶಸ್ತ ಪೊಲೀಸ್  ಕಾನ್ಸ್​ಟೇಬಲ್ (ಸಿಎಆರ್/ಡಿಎಆರ್) ಸಾಮಾನ್ಯ ಪುರುಷ ಮತ್ತು ಪುರುಷ ತೃತೀಯ ಲಿಂಗಿಗಳಿಗೆ  ಒಟ್ಟು 420 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ.

Latest Videos

undefined

ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ತಾಣ https://ksp-recruitment.in/ ಅಥವಾ https://ksp.karnataka.gov.in/ ಅನ್ನು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ನೇಮಕಾತಿ  ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು    ಮಾನ್ಯತೆ ಪಡೆದ  ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪಿಯುಸಿ ಉತ್ತೀರ್ಣರಾಗಿರಬೇಕು. 

ವಯೋಮಿತಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು 25 ವರ್ಷಗಳು ಮೀರಿರಬಾರದು. ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಒಬಿಸಿ ಅಭ್ಯರ್ಥಿಗಳಿಗೆ  2 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಬುಡಕಟ್ಟು ಜನಾಂಗದಲ್ಲಿ ವಾಸಿಸುತ್ತಿರುವ ಅಭ್ಯರ್ಥಿಗಳಾಗಿದ್ದರೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. 

NHAI Recruitment 2022; ಕರ್ನಾಟಕ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ

ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ  ಪ್ರವರ್ಗ 1 ಅಭ್ಯರ್ಥಿಗಳು 200 ರೂ ಅರ್ಜಿ ಶುಲ್ಕ ಪಾತಿಸಬೇಕು ಮತ್ತು ಸಾಮಾನ್ಯ, ಪ್ರವರ್ಗ -2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು 400 ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಅಥವಾ ಚಲನ್ ಮೂಲಕ ಪಾವತಿ ಮಾಡಬೇಕು.

NCERT RECRUITMENT 2022: ಖಾಲಿ ಇರುವ 292 ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ:  ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. 
 

click me!