CDAC Recruitment 2022; ಇಂಜಿನಿಯರ್‌ ಪದವೀಧರರಿಗೆ ಉದ್ಯೋಗ, 14 ಲಕ್ಷ ರು. ವರೆಗೆ ವೇತನ!

By Gowthami KFirst Published Oct 10, 2022, 3:47 PM IST
Highlights

ಸೆಂಟರ್‌ ಫಾರ್‌ ಡೆವಲಪ್ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ (ಸಿಡಿಎಸಿ)ಯಲ್ಲಿ 530 ಪ್ರಾಜೆಕ್ಟ್ ಇಂಜಿನಿಯರ್‌, ಪ್ರಾಜೆಕ್ಟ್ ಅಸೋಸೊಯೇಟ್ಸ್‌ ಸಹಿತ ವಿವಿಧ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಅ.20ರಂದು ಕೊನೆಯ ದಿನವಾಗಿದೆ.

ಬೆಂಗಳೂರು (ಅ.10): ಸೆಂಟರ್‌ ಫಾರ್‌ ಡೆವಲಪ್ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ (ಸಿಡಿಎಸಿ)ಯಲ್ಲಿ 530 ಪ್ರಾಜೆಕ್ಟ್ ಇಂಜಿನಿಯರ್‌, ಪ್ರಾಜೆಕ್ಟ್ ಅಸೋಸೊಯೇಟ್ಸ್‌ ಸಹಿತ ವಿವಿಧ ಪ್ರಮುಖ ಹುದ್ದೆಗಳಿದ್ದು, ಇವುಗಳಿಗೆ ನೇಮಕಾತಿ ನಡೆಸುವ ಸಲುವಾಗಿ ಆಸಕ್ತರಾಗಿರುವ ಹಾಗೂ ಅರ್ಹರಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಸದರಿ ಹುದ್ದೆಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಬಿ.ಇ, ಎಂ.ಟೆಕ್‌ ಹಾಗೂ ಪಿಎಚ್‌ಡಿ ಪದವಿ ವಿದ್ಯಾರ್ಹತೆಯ್ನು ಅಭ್ಯರ್ಥಿಯು ಹೊಂದಿರಬೇಕಿದೆ. ಪ್ರಾಜೆಕ್ಟ್ ಇಂಜಿನಿಯರ್‌ ಹುದ್ದೆ 250 ಇದ್ದು, ಸೀನಿಯರ್‌ ಪ್ರಾಜೆಕ್ಟ್ ಇಂಜಿನಿಯರ್‌ ಹುದ್ದೆ 200 ಹಾಗೂ ಪ್ರಾಜೆಕ್ಟ್ ಮ್ಯಾನೇಜರ್‌ ಹುದ್ದೆ 50 ಇದೆ. ಅರ್ಜಿ ಸಲ್ಲಿಸವ ಅಭ್ಯರ್ಥಿಗೆ ಗರಿಷ್ಠ ಎಂದರೆ 35 ವರ್ಷದೊಳಗಿರಬೇಕಿದ್ದು, ಸರ್ಕಾರಿ ನಿಯಮಾನುಸಾರ ವಯೋ ಸಡಿಲಿಕೆ ಅನ್ವಯವಾಗಲಿದೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಯನ್ನು ಇ-ಮೇಲ್‌ ಮೂಲಕ ಸಂಪರ್ಕಿಸಲಾಗುತ್ತದೆ. ಪ್ರಾಜೆಕ್ಟ್ ಅಸೋಸಿಯೇಟ್ಸ್‌ಗೆ ವಾರ್ಷಿಕವಾಗಿ 3.6 ಲಕ್ಷ ರು. ಇಂದ 5.4 ಲಕ್ಷ ರು. ವರೆಗೆ, ಪ್ರಾಜೆಕ್ಟ್ ಮ್ಯಾನೇಜರ್‌ಗೆ 12.63 ಲಕ್ಷ ರು. ಇಂದ 22.09 ಲಕ್ಷ ರು. ವರೆಗೆ, ಸೀನಿಯರ್‌ ಪ್ರಾಜೆಕ್ಟ್ ಇಂಜಿನಿಯರ್‌ಗೆ 8.49 ಲಕ್ಷ ರು. ಇಂದ 14 ಲಕ್ಷ ರು. ವರೆಗೆ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಅ.20ರಂದು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ತಾಣ https://www.cdac.in/ ಗೆ ಭೇಟಿ ನೀಡಬಹುದು.  

ಅಗ್ನಿವೀರರಿಗೆ ಅ.16ರಂದು ಸಾಮಾನ್ಯ ಪ್ರವೇಶ ಪರೀಕ್ಷೆ
ಕಳೆದ ಆಗಸ್ಟ್‌ನಲ್ಲಿ ಹಾಸನದಲ್ಲಿ ನಡೆದಿದ್ದ ಅಗ್ನಿಪಥ ನೇಮಕಾತಿ ಶಿಬಿರದಲ್ಲಿ ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ಅ.16ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಪತ್ರಿಕಾ ಪ್ರಕಟಣೆ ನೀಡಿದೆ. ಅಭ್ಯರ್ಥಿಗಳು ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನ ಗೇಟ್‌ ನಂ 2 ರಲ್ಲಿ ಅಕ್ಟೋಬರ್‌ 16ರಂದು ನಸುಕಿನ 4 ಗಂಟೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅಭ್ಯರ್ಥಿಗಳು ಕರಿ ಅಥವಾ ನೀಲಿ ಶಾಯಿಯ ಪೆನ್ನು ಮತ್ತು ಯಾವುದೇ ಗುರುತುಗಳಿಲ್ಲದ ಕ್ಲಿಪ್‌ ಬೋರ್ಡ್‌ ತರುವಂತೆ ಸೂಚಿಸಲಾಗಿದೆ.

ಹೊಸಬರಿಗೆ ನೀಡಿದ್ದ ಆಫರ್‌ ಲೆಟರ್‌ ಹಿಂಪಡೆದ ಟೆಕ್‌ ಕಂಪನಿಗಳು

ಅತಿಥಿ ಉಪನ್ಯಾಸಕರ ನೇಮಕಾತಿ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ ಪೂರ್ಣಕಾಲಿಕ ಹಾಗೂ ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅ.13 ಮತ್ತು 14ರಂದು ಬೆಳಗ್ಗೆ 11ಗಂಟೆಗೆ ಆಡಳಿತ ಭವನದ ಸಿಂಡಿಕೇಟ್‌ ಸಭಾಭವನದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್  https://www.kswu.ac.in/ ಸಂಪರ್ಕಿಸಬಹುದು ಎಂದು ಕುಲಸಚಿವ ಪ್ರೊ. ಬಿ.ಎಸ್‌. ನಾವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Central Bank of India Recruitment: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ
ಚಿಕ್ಕಮಗಳೂರು: ಎನ್‌.ಆರ್‌.ಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿಯ ಮಾಗುಂಡಿ ವೃತ್ತದಲ್ಲಿ ಖಾಲಿ ಇರುವ ಗ್ರಾಮ ಸಹಾಯಕರ ಹುದ್ದೆಯ ನೇಮಕಾತಿಗೆ ಸ್ಥಳೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನರಸಿಂಹರಾಜಪುರ ತಾಲೂಕು ಕಚೇರಿಯಿಂದ ನಿಗದಿತ ಅರ್ಜಿಯನ್ನು ಪಡೆದುಕೊಂಡು ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಅ.31ರೊಳಗೆ ಕಚೇರಿಗೆ ಸಲ್ಲಿಸಬೇಕು. ಅರ್ಜಿದಾರರಿಗೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು, ಗ್ರಾಮ ಸಹಾಯಕ, ತಳವಾರ, ತೋಟಿಗಳು, ನೀರುಗಂಟಿ, ವಾಲಿಕ​ರ್‍ಸ್, ಮಹ​ರ್‍ಸ್, ಬರ್‌ಕ​ರ್‍ಸ್, ತಳಾರಿಸ್‌, ನೀರಾಡಿಗಳು, ಬಲೂತಿದಾ​ರ್‍ಸ್, ವೆಟ್ಸಿ, ಉರ್‌ಗಾನಿಸ್‌್ಸ, ಕುಳುವಾಡಿಕೆ ವೃತ್ತಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಕುಟುಂಬ ವರ್ಗದವರಿಗೆ ಹಾಗೂ ಸ್ಥಳೀಯ ಕಚೇರಿಯಲ್ಲಿ ಈ ಮೊದಲು ಕೆಲಸ ನಿರ್ವಹಿಸಿದ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು ಅರ್ಜಿಯೊಂದಿಗೆ ಜನ್ಮ ದಿನಾಂಕ ದೃಢೀಕರಣಕ್ಕೆ ವರ್ಗಾವಣೆ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವಾಸಸ್ಥಳ ದೃಢೀಕರಣ, ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಪಡಿತರ ಚೀಟಿ, ವ್ಯಾಸಂಗ ಪೂರೈಸಿದ ಬಗ್ಗೆ ದಾಖಲೆ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಸ್ವಯಂಘೋಷಣಾ ಪ್ರಮಾಣಪತ್ರ (ಸ್ಟ್ಯಾಂಪ್‌ ಪೇಪರ್‌ 20 ರು.), ವಂಶವೃಕ್ಷ (ಉಪ ತಹಸೀಲ್ದಾರ್‌ರಿಂದ) ಹಾಗೂ ಚಾರಿತ್ರ್ಯದ ಬಗ್ಗೆ ಪೊಲೀಸ್‌ ವರದಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 8660838900 ಇಲ್ಲಿಗೆ ಸಂಪರ್ಕಿಸಬಹುದು ಎಂದು ನರಸಿಂಹರಾಜಪುರ ತಹಸೀಲ್ದಾರ್‌ ಪ್ರಕಟಣೆ ತಿಳಿಸಿದೆ.

click me!