Karnataka Post Office Recruitment 2023: ಗ್ರಾಮೀಣ ಅಂಚೆ ಸೇವಕರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

By Suvarna NewsFirst Published Jan 31, 2023, 4:02 PM IST
Highlights

ಅಂಚೆ ಕಚೇರಿಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆಪಾಲಕ ಮತ್ತು ಢಾಕ್‌ ಸೇವಕ್‌ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ವಿಭಾಗದಲ್ಲಿ 95 ಖಾಲಿ ಹುದ್ದೆಗಳು ಸೇರಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 273 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. 

ಮಂಗಳೂರು (ಜ.31): ಅಂಚೆ ಕಚೇರಿಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆಪಾಲಕ ಮತ್ತು ಢಾಕ್‌ ಸೇವಕ್‌ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ವಿಭಾಗದಲ್ಲಿ 95 ಖಾಲಿ ಹುದ್ದೆಗಳು ಸೇರಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 273 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.  ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಫೆ.16 ಕೊನೆಯ ದಿನಾಂಕ ಆಗಿರುತ್ತದೆ. ಅರ್ಜಿಗಳನ್ನು https://indiapostgdsonline.gov.in ಮೂಲಕ ಸಲ್ಲಿಸಬೇಕು. ಬೇರೆಯಾವುದೇ ವಿಧಾನದ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಂಗಳೂರು ವಲಯದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದೇ ಮೊದಲ ಬಾರಿಗೆ ಗ್ರಾಮೀಣ ಅಂಚೆ ಸೇವಕರ ನೇಮಕಾತಿಯು ಅಖಿಲ ಭಾರತ ಮಟ್ಟದಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ. ದೇಶಾದ್ಯಂತ ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 40889 ಆಗಿದ್ದು, ಅದರಲ್ಲಿ 3036 ಖಾಲಿ ಹುದ್ದೆಗಳು ಕರ್ನಾಟಕದಲ್ಲಿವೆ ಎಂದರು.

ಶಾಖಾ ಅಂಚೆ ಪಾಲಕ: ಗ್ರಾಮಾಂತರ ಪ್ರದೇಶದಲ್ಲಿ ಮತ್ತು ಕೆಲವು ಪಟ್ಟಣ ಪ್ರದೇಶದಲ್ಲಿ ಶಾಖಾ ಅಂಚೆ ಕಚೇರಿಗಳಿದ್ದು, ಶಾಖಾ ಅಂಚೆ ಪಾಲಕರು ಅದರ ಮುಖ್ಯಸ್ಥರಾಗಿರುತ್ತಾರೆ. ಶಾಖಾ ಅಂಚೆ ಪಾಲಕರು ಅಂಚೆ ಸೇವೆಗಳಿಗೆ ಸಂಬಂಧಿಸಿದಂತೆ ಅಂಚೆ ಇಲಾಖೆಯಿಂದ ನೀಡಲ್ಪಡುವ ಯೋಜನೆಗಳು, ಅಂಚೆ ಸೇವೆಗಳನ್ನು 4- 5 ಗಂಟೆಗಳವರೆಗೆ ಸಾರ್ವಜನಿಕರಿಗೆ ನೀಡುವ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಸಹಾಯಕ ಅಂಚೆಪಾಲಕ: ಇವರ ಮುಖ್ಯ ಉದ್ಯೋಗ ರಿಜಿಸ್ಟರ್ಡ್‌ ಪತ್ರಗಳು/ ಸ್ಪೀಡ್‌ ಪೋಸ್ವ್‌ ಗಳು, ಮನಿ ಆರ್ಡರ್‌ಗಳನ್ನು ಮನೆ ಮನೆಗೆ ಬಟವಾಡೆ ಮಾಡುವ ಜವಾಬ್ದಾರಿ. ಜತೆಗೆ ಹೊಸ ಗ್ರಾಮೀಣ ಅಂಚೆ ಜೀವ ವಿಮೆ ಪಾಲಿಸಿಗಳನ್ನು ಮಾಡಿಸುವುದು, ಇಂಡಿಯಾ ಪೋಸ್ವ್‌ ಪೇಮೆಂಟ್ಸ… ಬ್ಯಾಂಕ್‌ ಖಾತೆಗಳನ್ನು ತೆರೆಯುವುದು, ಮನೆ ಮನೆಗಳಿಗೆ ಬ್ಯಾಂಕಿಗ್‌ ಸೌಲಭ್ಯ ಹೀಗೆ ಹಲವಾರು ಜವಾಬ್ದಾರಿಗಳು ಇರುತ್ತವೆ.

ಢಾಕ್‌ ಸೇವಕ್‌: ಇವರು ಉಪ ಅಂಚೆ ಕಚೇರಿಗಳಲ್ಲಿ ಪ್ಯಾಕರ್‌ ಹುದ್ದೆಗಳನ್ನು ನಿರ್ವಹಿಸಬೇಕಾಗುತ್ತದೆ.

ಭತ್ಯೆಗಳು: ಶಾಖಾ ಅಂಚೆ ಪಾಲಕರಲ್ಲಿ 4 ಗಂಟೆಗಳ ಶಾಖಾ ಅಂಚೆ ಕಚೇರಿಗಳು ಮತ್ತು 5 ಗಂಟೆಗಳ ಶಾಖಾ ಅಂಚೆ ಕಚೇರಿಗಳು ಎಂಬ ಎರಡು ವಿಧಗಳಿದ್ದು, 4 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ 12 ಸಾವಿರ ರು. ಭತ್ಯೆ ಮೂಲ ವೇತನ ಮತ್ತೆ ತುಟ್ಟಿಭತ್ಯೆ ಹಾಗೂ ಇತರೆ ವೇತನಗಳು. 5 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ 14,500 ರು. ಭತ್ಯೆ ಮೂಲ ವೇತನ ಹಾಗೂ ತುಟ್ಟಿಭತ್ಯೆ, ಇತರ ವೇತನಗಳು ಲಭಿಸುತ್ತವೆ.

ಉಪ ಶಾಖಾ ಅಂಚೆ ಪಾಲಕರು ಹಾಗೂ ಢಾಕ್‌ ಸೇವಕ್‌ ಹುದ್ದೆಗಳಲ್ಲಿ 4 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ 10 ಸಾವಿರ ರು. ಭತ್ಯೆ ಮೂಲ ವೇತನ ಮತ್ತೆ ತುಟ್ಟಿಭತ್ಯೆ ಹಾಗೂ ಇತರೆ ವೇತನಗಳು. 5 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ 12 ಸಾವಿರ ಭತ್ಯೆ, ಮತ್ತು ತುಟ್ಟಿಭತ್ಯೆ ಲಭಿಸುತ್ತದೆ.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 05.06.2022ಕ್ಕೆ ಅನ್ವಯ ಆಗುವ ಹಾಗೆ 18ರಿಂದ 40 ವರ್ಷದ ವಯೋಮಿತಿಯೊಳಗಿರಬೇಕು. ಅನುಸೂಚಿತ ಜಾತಿ ಮತ್ತು ಇತರ ವರ್ಗಗಳಿಗೆ 5 ವರ್ಷಗಳ ವಿನಾಯಿತಿ, ಒಬಿಸಿ ಅಂದರೆ ಇತರ ಹಿಂದುಳಿದ ವರ್ಗದವರಿಗೆ 3 ವರ್ಷದ ವಿನಾಯಿತಿ ಅನ್ವಯಿಸುತ್ತದೆ. ವಿಕಲ ಚೇತನರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟವಿಕಲಚೇತನರಿಗೆ ಒಟ್ಟು 13 ವರ್ಷ ಹಾಗೂ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳಿಗೆ ಸಂಬಂಧಪಟ್ಟವಿಕಲಚೇತನರಿಗೆ ವಯೋಮಿತಿಯಲ್ಲಿ 15 ವರ್ಷಗಳ ಸಡಿಲಿಕೆ ಇರುತ್ತದೆ.

Union Bank Recruitment 2023: ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ

ಶೈಕ್ಷಣಿಕ ಅರ್ಹತೆ: ಎಲ್ಲ ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆ ಕಡ್ಡಾಯ. ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಕನಿಷ್ಠ ತೇರ್ಗಡೆ ಅಂಕಗಳನ್ನು ಕೂಡ ಹೊಂದಿರಬೇಕು. ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಒಂದು ವಿಷಯವಾಗಿ ಅದ್ಯಯನ ನಡೆಸಿದವರೂ ಅರ್ಜಿ ಸಲ್ಲಿಸಬಹುದು.

ಫಿಲಿಪ್ಸ್‌ನಿಂದ ಮತ್ತೆ 6 ಸಾವಿರ ಉದ್ಯೋಗಿಗಳ ಕಡಿತ: ದೋಷಪೂರಿತ ಸ್ಲೀಪ್‌ ಡಿವೈಸ್‌ ಹಿಂಪಡೆದ ನೆಪ ಹೇಳಿದ ಸಂಸ್ಥೆ..!

ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿಗಳು https://indiapostgdsonline.gov.in ನಲ್ಲಿ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಯಾವುದೇ ಹತ್ತಿರದ ಅಂಚೆ ಕಚೇರಿಗಳನ್ನು ಅಥವಾ ವಿಭಾಗೀಯ ಕಚೇರಿಯನ್ನು ಸಂಪರ್ಕಿಸಬಹುದು. ಮಂಗಳೂರು ಕಚೇರಿಯ ದೂರವಾಣಿ ಸಂಖ್ಯೆ 0824-2218400 ಎಂದು ಶ್ರೀಹರ್ಷ ತಿಳಿಸಿದರು.

click me!
Last Updated Jan 31, 2023, 4:02 PM IST
click me!