ಕರ್ನಾಟಕ ಪೊಲೀಸ್ ಇಲಾಖೆಯ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ; ಆಸಕ್ತರಿಗೆ ಸುವರ್ಣವಕಾಶ!

By Suvarna NewsFirst Published May 5, 2020, 3:35 PM IST
Highlights

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕರ್ನಾಕ ಪೊಲೀಸ್ ತಮ್ಮ ಮಹತ್ತರ ಜವಾಬ್ದಾರಿ ನಡುವೆ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರಿಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಇದು ಸುವರ್ಣವಕಾಶವಾಗಿದೆ.
 

ಬೆಂಗಳೂರು(ಮೇ.05): ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲೇ ಹೆಸರುಗಳಿಸಿದೆ. ಖಡಕ್ ಅಧಿಕಾರಿಗಳು, ಸಿಬ್ಬಂದಿಗಳನ್ನು ಹೊಂದಿರುವ ಕರ್ನಾಟಕ ಪೊಲೀಸ್ ಇದೀಗ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಸದ್ಯ ಖಾಲಿ ಇರುವ 4104 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಶೀಘ್ರದಲ್ಲೇ ಈ ಕುರಿತು ಅಧಿಸೂಚನೆ ಪ್ರಕಟವಾಗಲಿದೆ. ಬಳಿಕ ಆಸಕ್ತರು ಅರ್ಜಿ ಸಲ್ಲಿಸಬಹುದು.

KIMSನಲ್ಲಿ ವಿವಿಧ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್,  ಪುರುಷ ಮತ್ತು ಮಹಿಳೆಯರಿಗೆ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಒಟ್ಟು 4104 ಹುದ್ದೆಗಳು ಖಾಲಿ ಇದ್ದು ಇದೀಗ ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಮೇ. 20 ರಂದು ಪೊಲೀಸ್ ಇಲಾಖೆ ನೇಮಕಾತಿ ಕುರಿತು ಅಧಿಸೂಚನೆ ಪ್ರಕಟವಾಗಲಿದೆ. ಹೀಗಾಗಿ ಮೇ.20 ರಿಂದ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. 

 

ಕರ್ನಾಟಕ ಪೊಲೀಸ್ ಸೇವೆಯಲ್ಲಿ ಅವಕಾಶ

ಜನರಿಗೆ ಸೇವೆ ಸಲ್ಲಿಸುವ ಅಭಿಲಾಷೆ ಉಳ್ಳವರಿಗೆ ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನಕ್ಕೆ ಅವಕಾಶವಿದೆ. ಪೊಲೀಸ್ ಕಾನ್ ಸ್ಟೇಬಲ್(ನಾಗರಿಕ) ಪುರುಷ ಮತ್ತು ಮಹಿಳೆ, ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ (ಸಿಎಆರ್/ಡಿಎಆರ್) ಪುರುಷ ಹುದ್ದೆಗಳಿಗೆ ಅವಕಾಶವಿದೆ. pic.twitter.com/DlwuTXMrAP

— Karnataka Varthe (@KarnatakaVarthe)

ತನ್ನೆಲ್ಲಾ ನೌಕರರಿಗೆ ಮಹತ್ವದ ಸುತ್ತೋಲೆ ಹೊರಡಿಸಿದ ಕರ್ನಾಟಕ ಸರ್ಕಾರ..!

ಸರಿಸುಮಾರು 1 ತಿಂಗಳ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರಲಿದೆ. ಈ ಕುರಿತ ಎಲ್ಲಾ ಮಾಹಿತಿಗಳು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಪ್ರಕಟಿಸಲಾಗಿರತ್ತದೆ. ಅರ್ಹತೆ, ವಯಸ್ಸು, ಆಯ್ಕೆಯ ವಿವರ, ಸ್ಥಳ ಕುರಿತು ಮುಂತಾದ ಮಾಹಿಗಳು ಕೂಡ ಅಧಿಸೂಚನೆಯಲ್ಲಿರಲಿದೆ. ಹೀಗಾಗಿ ಆಸಕ್ತರು ಮೇ. 30ರ ತನಕ ಕಾಯಬೇಕಿದೆ. 

click me!