ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆಸಲಾಗುತ್ತಿದ್ದ ಸಂದರ್ಶನವನ್ನು ಆಂಧ್ರಪ್ರದೇಶ ಸರ್ಕಾರ ರದ್ದು ಮಾಡಿದೆ. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಸಹ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ.
ಬೆಂಗಳೂರು, (ನ. 23): ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಗೂ ಅನ್ವಯವಾಗುವಂತೆ ಈ ಬದಲಾವಣೆ ಜಾರಿಗೆ ಬರಲಿದೆ.
ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯ ವೇಳೆ ನಡೆಸುತ್ತಿದ್ದ ಮೌಖಿಕ ಸಂದರ್ಶನವನ್ನು ರದ್ದು ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಈ ಕುರಿತು ಮೌಖಿಕ ಆದೇಶ ಹೊರಡಿಸಿದೆ.
undefined
ಸರ್ಕಾರಿ ಹುದ್ದೆಗೆ ಇನ್ನು ಸಂದರ್ಶನ ಇರಲ್ಲ!
10 ಅಂಕಗಳಿಗೆ ನಡೆಯುತ್ತಿದ್ದ ಮೌಖಿಕ ಪರೀಕ್ಷೆ (ಸಂದರ್ಶನ) ಇನ್ನು ಮುಂದೆ ಇರುವುದಿಲ್ಲ. ಗ್ರೂಪ್ 'ಸಿ' ನಾಗರಿಕ ಸೇವಾ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಮೌಖಿಕ ಪರೀಕ್ಷೆ ನಡೆಸಬಾರದು ಎಂದು ನಿಯಮವನ್ನು ತಿದ್ದುಪಡಿ ಮಾಡಲಾಗಿದೆ. ಆದ್ದರಿದ, ಎಸ್ಐ ನೇಮಕಾತಿ ಮಾಡುವಾಗ ಇನ್ನು ಮುಂದೆ ಮೌಖಿಕ ಪರೀಕ್ಷೆ ನಡೆಸಲಾಗುವುದಿಲ್ಲ.
ಸಂದರ್ಶನ ವೇಳೆ ಅಧಿಕಾರಿಗಳು ಹೆಚ್ಚಿನ ಅಂಕ ಆಮಿಷವೊಡ್ಡಿ ಹಣ ಪೀಕುತ್ತಿದ್ದಾರೆ. ಈ ಭ್ರಷ್ಟಾಚಾರದಿಂದ ಇತರೆ ಅಭ್ಯರ್ಥಿಗಳು ಹುದ್ದೆಯಿಂದ ವಂಚಿತರಾಗುತ್ತಿದ್ದಾರೆ ಎನ್ನುವ ಆರೋಪಗಳು ಮೇಲಿಂದ ಮೇಲೆ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿರುವುದು ಒಳ್ಳೆ ಬೆಳವಣಿಗೆ.
ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಸ್ತುತ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ನಡೆಯುತ್ತಿದೆ. ಕಳೆದ ಭಾನುವಾರ ಲಿಖಿತ ಪರೀಕ್ಷೆ ನಡೆದಿದ್ದು, ಇದಕ್ಕೆ ಮೌಖಿಕ ಪರೀಕ್ಷೆ ನಡೆಸಬಾರದು ಎಂದು ಸೂಚನೆ ನೀಡಲಾಗಿದೆ.