ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 1,048 ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುತ್ತಿದ್ದು, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ನವೆಂಬರ್ 30ರಂದು ಕೊನೆಯ ದಿನವಾಗಿದೆ.
ಬೆಂಗಳೂರು (ನ.7): ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ಹುದ್ದೆಗಳು ಇದ್ದು, ಇವುಗಳಿಗೆ ಹೊಸ ಅಭ್ಯರ್ಥಿಗಳ ನೇಮಕ ಮಾಡುವ ಸಲುವಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆರೋಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿಯಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ನೇಮಕಾತಿ ವಿವರಗಳಾದ ಆಯ್ಕೆ ವಿಧಾನ, ಬೇಕಾದ ದಾಖಲೆಗಳು, ಅರ್ಜಿ ಸಲ್ಲಿಕೆ ವಿವರ, ವೇತನ ಪಾವತಿ, ವಯೋಮಿತಿ ಹಾಗೂ ವಿದ್ಯಾರ್ಹತೆ ಸಹಿತ ಮುಖ್ಯ ಮಾಹಿತಿಗಳನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ https://karunadu.karnataka.gov.in/hfw/pages/home.aspx ಗೆ ಭೇಟಿ ನೀಡಲು ಕೋರಲಾಗಿದೆ.
ಇಲಾಖೆಯ ಹುದ್ದೆಗಳ ವಿವರ: ರಾಜ್ಯ ಆರೋಗ್ಯ ಇಲಾಖೆಯಲ್ಲಿ 1,048 ಹುದ್ದೆಗಳು ಖಾಲಿ ಇದೆ. ಹುದ್ದೆಗಳು ಸಮುದಾಯ ಆರೋಗ್ಯ ಅಧಿಕಾರಿಗಳದ್ದಾಗಿದೆ. ಈ ಪೈಕಿ ದಕ್ಷಿಣ ಕನ್ನಡದಲ್ಲಿ 39 ಹುದ್ದೆಗಳು, ಹಾಸನದಲ್ಲಿ 326 ಹುದ್ದೆ,, ಚಿಕ್ಕಮಗಳೂರಿನಲ್ಲಿ 51 ಹುದ್ದೆ, ರಾಮನಗರದಲ್ಲಿ 154 ಹುದ್ದೆ, ತುಮಕೂರಿನಲ್ಲಿ 99 ಹುದ್ದೆ, ಶಿವಮೊಗ್ಗದಲ್ಲಿ 72 ಹುದ್ದೆ, ವಿಜಯಪುರದಲ್ಲಿ 53 ಹುದ್ದೆ, ಮಂಡ್ಯದಲ್ಲಿ 11 ಹುದ್ದೆ, ಚಿಕ್ಕಬಳ್ಳಾಪುರದಲ್ಲಿ 22 ಹುದ್ದೆ, ಬೆಂಗಳೂರು ನಗರದಲ್ಲಿ 32 ಹುದ್ದೆ, ಬೆಳಗಾವಿಯಲ್ಲಿ 20 ಹುದ್ದೆ, ಬಳ್ಳಾರಿಯಲ್ಲಿ 17 ಹುದ್ದೆ, ಬೆಂಗಳೂರು ಗ್ರಾಮಾಂತರದಲ್ಲಿ 9 ಹುದ್ದೆಗಳ ಸಹಿತ ರಾಜ್ಯಾದ್ಯಂತ ಹಲವಾರು ಹುದ್ದೆಗಳು ಇದೆ. ಇತರೆ ಜಿಲ್ಲೆಗಳಲ್ಲಿ ಎಷ್ಟುಖಾಲಿ ಹುದ್ದೆಗಳಿವೆ ಎಂಬ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ವಯೋಮಿತಿನ ಹಾಗೂ ವಿದ್ಯಾರ್ಹತೆ: ಸಾಮಾನ್ಯವಾಗಿ ಎಲ್ಲಾ ಸರ್ಕಾರಿ ಹುದ್ದೆಗಳಿಗೆ ನಿಗದಿ ಮಾಡದಿಂತೆ, ಆರೋಗ್ಯ ಇಲಾಖೆಯ ಹುದ್ದೆಗಳಿಗೂ ನಿಗದಿ ಮಾಡಲಾಗಿದೆ. ಸಾಮಾನ್ಯ ಅಭ್ಯರ್ಥಿಗೆ ಕನಿಷ್ಟ18 ವರ್ಷವಾಗಿರಬೇಕಿದ್ದು, ಗರಿಷ್ಟ35 ವರ್ಷದೊಳಗಿರಬೇಕು. ಒಬಿಸಿ ವರ್ಗದ ಅಭ್ಯರ್ಥಿಗೆ 3 ವರ್ಷ ವಯೋ ಸಡಿಲಿಕೆ ನೀಡಲಾಗಿದ್ದು, ಎಸ್‌ಸಿ/ಎಸ್‌ಟಿ, ಪ್ರವರ್ಗ 1 ಅಭ್ಯರ್ಥಿಗೆ 40 ವರ್ಷದವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಯು ಕನಿಷ್ಟನರ್ಸಿಂಗ್‌ನಲ್ಲಿ ಬಿ.ಎಸ್‌ಸಿ ಪದವಿ ಪಡೆದಿರಬೇಕಿದ್ದು, ಇಲ್ಲವಾದಲ್ಲಿ ಬೇಸಿಕ್ ಬಿ.ಎಸ್‌ಸಿ ನರ್ಸಿಂಗ್ ಪದವಿ ಪಡೆದಿರಬೇಕಿದೆ. ನರ್ಸಿಂಗ್‌ಗೆ ತತ್ಸಮಾನವಾದ ವಿದ್ರ್ಯಾಹತೆ ಹೊಂದಿರುವವರೂ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಗಳ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ, ಅಯ್ಕೆ ವಿಧಾನ: ಅಭ್ಯರ್ಥಿಯು ಮೊದಲು ಕರ್ನಾಟಕ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್‌ಗೆ ತೆರಳಬೇಕು. ಅಲ್ಲಿ ನೋಂದಣಿಯಾಗಿ ಬಳಿಕ ಆನ್‌ಲೈನ್ ಅರ್ಜಿ ನಮೂನೆಯನ್ನು ಸರಿಯಾದ ಮಾಹಿತಿಗಳಿಂದ ಭರ್ತಿಗೊಳಿಸಬೇಕಿದೆ. ಅರ್ಜಿಯ ಜೊತೆಗೆ ಆಧಾರ್‌ಕಾರ್ಡು, ಸದರಿ ಹುದ್ದೆಗಳಿಗೆ ಸಂಬಂಧಿಸಿದ ಪದವಿ ಅಂಕಪಟ್ಟಿಗಳು, ಎಸ್‌ಎಸ್‌ಎಲ್ ಹಾಗೂ ಪಿಯುಸಿ ಅಂಕಪಟ್ಟಿ, ಮೀಸಲಾತಿ/ಜಾತಿ ಪ್ರಮಾಣ ಪತ್ರ, ಇತರೆ ಯಾವುದೇ ಪ್ರಮುಖ ದಾಖಲೆಗಳು ಇದ್ದಲ್ಲಿ ಅವುಗಳದ್ದೆಲ್ಲವನ್ನೂ ನಕಲಿ ಪ್ರತಿಗಳನ್ನಾಗಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
VSSC Recruitment 2022: 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ
ಅಭ್ಯರ್ಥಿಯ ವೇತನ ಶ್ರೇಣಿ: ಕರ್ನಾಟಕ ಆರೋಗ್ಯ ಇಲಾಖೆಯ ನೇಮಕಾತಿ ಮಾನದಂಡದ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳ ವೇತನವನ್ನು ನಿಗದಿ ಮಾಡಲಾಗಿದೆ. ಅಂತೆಯೆ, ಮಾಸಿಕವಾಗಿ ತಲಾ ಅಭ್ಯರ್ಥಿಗೆ 22,000 ರುಪಾಯಿಯಿಂದ 24,200 ರುಪಾಯಿವರೆಗೆ ನೀಡಲಾಗುತ್ತದೆ. ಕಾರ್ಯಕ್ಷಮತೆ ಆಧರಿಸಿ ಪ್ರೋತ್ಸಾಹಕವಾಗಿ ಹೆಚ್ಚುವರಿಯಾಗಿ 8,000 ಹೆಚ್ಚು ವೇತನ ನೀಡಲಾಗುತ್ತದೆ. ಹುದ್ದೆಗಳಿಗೆ, ಇತರ ಹೆಚ್ಚುವರಿ ವಿವರಗಳಿಗೆ ಅಧಿಸೂಚನೆಯನ್ನು ಪರಿಶೀಲಿಸಲು ನೇಮಕಾತಿ ವಿಭಾಗವು ತಿಳಿಸಿದೆ.
IOCL RECRUITMENT 2022: ತಂತ್ರಜ್ಞ ಮತ್ತು ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ
ಇತರೆ ಅರ್ಹತೆಗಳು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕದ ನಿವಾಸಿಗಳೇ ಆಗಿರಬೇಕು. ಈ ಕುರಿತು ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ವಾಸವಿರುವ ದಾಖಲೆಯನ್ನು ಅರ್ಜಿ ಜೊತೆಗೆ ಲಗತ್ತಿಬಸಬೇಕಿದೆ. ಕನ್ನಡ ಬರೆಯಲು ಹಾಗೂ ಓದುವುದರ ಜೊತೆಗೆ ಕಂಪ್ಯೂಟರ್ ಜ್ಞಾನವೂ ಇರಬೇಕಿದೆ.
*ಆರ್ಜಿ ಸಲ್ಲಿಕೆ ನವೆಂಬರ್ 30ರಂದು ಕೊನೆಯ ದಿನವಾಗಿದೆ.
*ಹೆಚ್ಚಿನ ಮಾಹಿತಿಗಾಗಿ https://karunadu.karnataka.gov.in/hfw/pages/home.aspx
*ಸಾಮಾನ್ಯ ಅಭ್ಯರ್ಥಿಗೆ 550 ಅರ್ಜಿ ಶುಲ್ಕ
* ಕಾರ್ಯಕ್ಷಮತೆ ಆಧರಿಸಿ ವೇತನದೊಂದಿಗೆ ವಿಶೇಷ ಭತ್ಯೆ