ಬಹುನಿರೀಕ್ಷಿತ 7ನೇ ವೇತನ ಆಯೋಗ ಇಂದು ಘೋಷಣೆ

By Kannadaprabha News  |  First Published Nov 7, 2022, 9:04 AM IST
  • ಆಯೋಗದ ಶಿಫಾರಸಿನಿಂದ 13.5 ಲಕ್ಷ ಹಾಲಿ, ಮಾಜಿ ನೌಕರರಿಗೆ ಲಾಭ
  • ವೇತನ ಏರಿಕೆಯಿಂದ ಸರ್ಕಾರಕ್ಕೆ ವಾರ್ಷಿಕ 12,500 ಕೋಟಿ ರು. ಹೊರೆ?
  • ಫೆಬ್ರವರಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿ ಹಣ ತೆಗೆದಿರಿಸುವ ಸಾಧ್ಯತೆ

ಬೆಂಗಳೂರು: ಏಳನೇ ವೇತನ ಆಯೋಗ ರಚಿಸಬೇಕೆಂಬ ಸರ್ಕಾರಿ ನೌಕರರ ಬಹಳ ದಿನಗಳ ಬೇಡಿಕೆಯಂತೆ ರಾಜ್ಯ ಸರ್ಕಾರ ಇಂದು ಆಯೋಗ ರಚಿಸಿ ಆದೇಶ ಹೊರಡಿಸುವ ಸಾಧ್ಯತೆ ಇದೆ.
ವೇತನ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆಯೇ ಪ್ರಕಟಿಸಿದ್ದರು. ಈಗ ಆಯೋಗ ರಚಿಸುವ ಸಂಬಂಧ ಮುಖ್ಯಮಂತ್ರಿಗಳು ಭಾನುವಾರ ಸಭೆ ನಡೆಸಿ ಅಂತಿಮಗೊಳಿಸಿದ್ದು, ಇಂದು ಅಧಿಕೃತವಾಗಿ ಘೋಷಿಸುವ ಸಂಭವವಿದೆ.

ನೂತನ ವೇತನ ಆಯೋಗದ ಶಿಫಾರಸಿನಿಂದ 13.5 ಲಕ್ಷ ಮಂದಿಗೆ ಅನುಕೂಲವಾಗಲಿದೆ. 6 ಲಕ್ಷ ಸರ್ಕಾರಿ ನೌಕರರು (government employees), ನಿಗಮ-ಮಂಡಳಿ, ಪ್ರಾಧಿಕಾರಿಗಳ 3 ಲಕ್ಷ ಮತ್ತು ಪಿಂಚಣಿ ಪಡೆಯುತ್ತಿರುವ 4.5 ಲಕ್ಷ ನಿವೃತ್ತರಿಗೆ 7ನೇ ವೇತನ ಆಯೋಗ ಅನ್ವಯವಾಗಲಿದ್ದು, ವರ್ಷಕ್ಕೆ ಸರ್ಕಾರವು (state government) ಹೆಚ್ಚುವರಿಯಾಗಿ ಸುಮಾರು 12,500 ಕೋಟಿ ರು. ವೆಚ್ಚ ಮಾಡಬೇಕಾದ ನಿರೀಕ್ಷೆ ಇದೆ.ಇದೇ ಮೊದಲ ಬಾರಿಗೆ ಐದು ವರ್ಷದೊಳಗೇ ಮತ್ತೊಂದು ವೇತನ ಆಯೋಗ (pay commission) ರಚನೆಯಾಗುತ್ತಿರುವುದು ಐತಿಹಾಸಿಕವಾಗಿದೆ. ಆಯೋಗದಿಂದ ಶೇ.40ರಷ್ಟು ವೇತನ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ

Latest Videos

undefined

.ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್

1-7-2022ರಿಂದ ಅನ್ವಯವಾಗುವಂತೆ ಕಾಲ್ಪನಿಕ ಸೌಲಭ್ಯ, 1-1-2023ರಿಂದ ಆರ್ಥಿಕವಾಗಿ ಸೌಲಭ್ಯ ನೀಡಬೇಕು, ಶೇ.40ರಷ್ಟುವೇತನ ಹೆಚ್ಚಳ ಮಾಡಬೇಕು ಎಂದು ಸರ್ಕಾರಿ ನೌಕರರು ಬೇಡಿಕೆ ಮಂಡಿಸಿದ್ದಾರೆ. ಬಸವರಾಜ ಬೊಮ್ಮಾಯಿ (Basavaraja Bommai) ಅವರು ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ (budget) 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಅನುಷ್ಠಾನಕ್ಕಾಗಿ ಹಣ ಮೀಸಲಿಡುವ ಸಾಧ್ಯತೆ ಇದೆ.

ಸರ್ಕಾರಿ ಉದ್ಯೋಗಿಗಳೇ ಗಮನಿಸಿ, 7ನೇ ವೇತನ ಆಯೋಗದಡಿಯಲ್ಲಿ ದೊರೆತ ಸಂಬಳ ಬಾಕಿಗಿದೆ ತೆರಿಗೆ ಪರಿಹಾರ

click me!