ಪಿಎಸ್‌ಐ ನೇಮಕಕ್ಕೆ ಸಂದರ್ಶನ ರದ್ದು!

By Kannadaprabha NewsFirst Published May 17, 2020, 8:00 AM IST
Highlights

ಪಿಎಸ್‌ಐ ನೇಮಕಕ್ಕೆ ಸಂದರ್ಶನ ರದ್ದು| ದೈಹಿಕ, ಲಿಖಿತ, ವೈದ್ಯಕೀಯ ಪರೀಕ್ಷೆ ಮಾತ್ರ

ಬೆಂಗಳೂರು(ಮೇ.17): ಸಿಬ್ಬಂದಿಗೆ ಕೊರತೆ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವ ರಾಜ್ಯ ಪೊಲೀಸ್‌ ಇಲಾಖೆ, ಪ್ರಸಕ್ತ ಸಾಲಿನಲ್ಲಿ ಖಾಲಿ ಇರುವ 556 ಸಬ್‌ ಇನ್ಸ್‌ಪೆಕ್ಟರ್‌ (ಸಿವಿಲ್‌ ಪಿಎಸ್‌ಐ) ಹುದ್ದೆಗಳ ಭರ್ಜಿಗೆ ಅರ್ಜಿ ಆಹ್ವಾನಿಸಿದ್ದು, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸಂದರ್ಶನ ರದ್ದುಪಡಿಸಲಾಗಿದೆ.

ಈ ಬಾರಿಯ ನೇಮಕಾತಿ ಪ್ರಕ್ರಿಯೆಯಲ್ಲಿ ದೈಹಿಕ, ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಮಾತ್ರ ಇರಲಿದ್ದು, ಈ ಹಿಂದೆ 10 ಅಂಕಕ್ಕೆ ನಡೆಸಲಾಗುತ್ತಿದ್ದ ಸಂದರ್ಶನವನ್ನು ಪ್ರಸಕ್ತ ವರ್ಷದಿಂದ ರದ್ದುಪಡಿಸಲಾಗಿದೆ.

ಈ ಹುದ್ದೆಗಳ ಪೈಕಿ ರಾಜ್ಯದ 431 ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿಯಲ್ಲಿ 125 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಸೇವಾನಿರತ ಪೊಲೀಸರು ಹಾಗೂ ಹೊಸ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬರುವ ಜೂ.1 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಜೂ.31 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಪದವಿ ಹಾಗೂ ತತ್ಸಮಾನ ವಿದ್ಯಾರ್ಹತೆಯುಳ್ಳ ಕನಿಷ್ಠ 21 ವರ್ಷ ಪೂರೈಸಿದ ಅಭ್ಯರ್ಥಿಗಳು ಅರ್ಹತೆ ಹೊಂದಿದ್ದಾರೆ. ಸಾಮಾನ್ಯ ಅಭ್ಯರ್ಥಿಗಳಿಗೆ 28 ವರ್ಷ ಹಾಗೂ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಹಾಗೆಯೇ ಸೇವಾ ನಿರತ ಸಾಮಾನ್ಯ ಅಭ್ಯರ್ಥಿಗಳಿಗೆ 35 ಹಾಗೂ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ಇದೆ.

ಈ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಗೆ 080-22943346 ಅಥವಾ ಡಿಡಿಡಿ.ksp.ಜಟv. ಸಂಪರ್ಕಿಸಬಹುದು ಎಂದು ಇಲಾಖೆ ಹೇಳಿದೆ.

ಹುದ್ದೆಗಳ ವಿವರ ಹೀಗಿದೆ:

ಕರ್ನಾಟಕ- 431 ಹುದ್ದೆಗಳು

ಪಿಎಸ್‌ಐ (ಪುರುಷ)- 278, (ಮಹಿಳೆ) -91

ಸೇವಾ ನಿರತರಿಗೆ ಪಿಎಸ್‌ಐ (ಪುರುಷ)- 46, (ಮಹಿಳೆ) -16

ಕಲ್ಯಾಣ ಕರ್ನಾಟಕ ಮೀಸಲಾತಿ-125 ಹುದ್ದೆಗಳು

ಪಿಎಸ್‌ಐ (ಪುರುಷ ಸ್ಥಳೀಯ)- 68, ಮಹಿಳೆ (ಸ್ಥಳೀಯ)-26.

ಸೇವಾನಿರತರಿಗೆ ಪಿಎಸ್‌ಐ (ಪುರುಷ ಸ್ಥಳೀಯ)-12, ಮಹಿಳೆ ಸ್ಥಳೀಯ-3.

ಪಿಎಸ್‌ಐ (ಪುರುಷ, ಪರ ಸ್ಥಳೀಯ)-10, ಮಹಿಳೆ ಪರಸ್ಥಳೀಯ-4

ಸೇವಾನಿರತರಿಗೆ ಪಿಎಸ್‌ಐ (ಪುರುಷ ಪರ ಸ್ಥಳೀಯ)-2

click me!