ಕೆ-ಸೆಟ್ ಪರೀಕ್ಷೆಗೆ ದಿನಾಂಕ ಪ್ರಕಟ: ಆಲ್‌ ದಿ ಬೆಸ್ಟ್

By Suvarna News  |  First Published Aug 25, 2020, 8:53 PM IST

ಉಪನ್ಯಾಸಕರ ಹುದ್ದೆ ಆಯ್ಕೆ ಸಂಬಂಧ ನಡೆಸುವ ” ಕೆ- ಸೆಟ್ ” ಪರೀಕ್ಷೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಕಡೆಗೂ ದಿನಾಂಕ ಫಿಕ್ಸ್ ಮಾಡಲಾಗಿದೆ.


ಬೆಂಗಳೂರು, (ಆ.25) : ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ (ಕೆ-ಸೆಟ್) ಪರೀಕ್ಷೆಗೆ ದಿನಾಂಕವನ್ನು ಪ್ರಕಟಿಸಲಾಗಿದೆ.

ಇದೇ  ಸೆಪ್ಟೆಂಬರ್ 20ರಂದು ರಾಜ್ಯಾಧ್ಯಂತ ಪರೀಕ್ಷೆ ನಡೆಯಲಿದೆ. ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರು ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿದ್ದರು. 

Tap to resize

Latest Videos

undefined

ರಾಷ್ಟ್ರೀಯ ನೇಮಕಾತಿ ಏಜೆನ್ಸಿಗೆ ಒಪ್ಪಿಗೆ ನೀಡಿದ ಬೆನ್ನಲ್ಲೇ ಉದ್ಯೋಗಕಾಂಕ್ಷಿಗಳಿಗೆ ಸಿಹಿ ಸುದ್ದಿ

ಇದೀಗ ಸರ್ಕಾರ ಕೆ-ಸೆಟ್ ಪರೀಕ್ಷೆ ನಿಗದಿ ಸಂಬಂಧ ಕುಲಪತಿಗಳ ಪತ್ರಕ್ಕೆ ಪ್ರತಿ ಸ್ಪಂದಿಸಿದ್ದು, ಸೆಪ್ಟೆಂಬರ್ 20ರ ಭಾನುವಾರ ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿದೆ.

ಈ ಹಿನ್ನಲೆಯಲ್ಲಿ ಉಪನ್ಯಾಸಕರ ಹುದ್ದೆ ಆಯ್ಕೆ ಸಂಬಂಧ ನಡೆಸುವಂತ ಕೆ-ಸೆಟ್ ಪರೀಕ್ಷೆಯ ದಿನಾಂಕ ಪ್ರಕಟವಾಗಿದ್ದು, ದಿನಾಂಕ 20-09-2020ರ ಭಾನುವಾರದಂದು ರಾಜ್ಯಾಧ್ಯಂತ ಪರೀಕ್ಷೆ ನಡೆಯಲಿದೆ.

click me!