ಕೆಪಿಎಸ್​​ಸಿ ಪರೀಕ್ಷೆ: ಈ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯವಕಾಶ...!

Published : Aug 21, 2020, 10:12 PM IST
ಕೆಪಿಎಸ್​​ಸಿ ಪರೀಕ್ಷೆ: ಈ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯವಕಾಶ...!

ಸಾರಾಂಶ

ಪರೀಕ್ಷೆ ಬರೆಯಲಿರುವ ಅಂಧ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

ಬೆಂಗಳೂರು, (ಆ.21): ಗೆಜೆಟೆಡ್ ಪ್ರೊಬೆಷನರ್ 106 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಗಸ್ಟ್ 24 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.

ಹೈಕೋರ್ಟ್ ನ್ಯಾಯಾಲಯದ ಆದೇಶದ ಮೇರೆಗೆ ಈ ಪರೀಕ್ಷೆಗೆ ಅಂಧ / ದೃಷ್ಟಿಮಾಂದ್ಯ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರತಿ ಒಂದು ಗಂಟೆಗೆ 20 ನಿಮಿಷ ಹೆಚ್ಚುವರಿ ಸಮಯವನ್ನು ನೀಡಲಾಗುತ್ತಿದೆ ಕೆಪಿಎಸ್​ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ನಿಗದಿಯಂತೆ KAS ಪೂರ್ವಭಾವಿ ಪರೀಕ್ಷೆ: ಕೆಪಿಎಸ್‌ಸಿ ಸ್ಪಷ್ಟನೆ...! 

ಅಂಧ ಅಭ್ಯರ್ಥಿಗಳು ಲಿಪಿಕಾರರನ್ನು ತಾವೇ ಕರೆದುಕೊಂಡು ಬರಬೇಕೆಂದು ತಿಳಿಸಲಾಗಿದೆ. ಒಂದು ವೇಳೆ ಯಾವುದೇ ಅಭ್ಯರ್ಥಿ ಲಿಪಿಕಾರರನ್ನು ಕರೆದುಕೊಂಡು ಬರಲು ಸಾಧ್ಯವಾಗದಿದ್ದಲ್ಲಿ ಅಂತವರು ಆಯೋಗಕ್ಕೆ ಎಸ್​ಎಂಎಸ್​​ ಮೂಲಕ ತಿಳಿಸಿದಲ್ಲಿ ಲಿಪಿಕಾರರನ್ನು ಒದಗಿಸಲು ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೆಪಿಎಸ್​ಸಿ ಹೇಳಿದೆ.

PREV
click me!

Recommended Stories

ನಿಮ್ಹಾನ್ಸ್ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿ 2026, ನಿಮ್ಮ ಭವಿಷ್ಯ ಬದಲಿಸುವ ಅವಕಾಶ
ಪಿಡಿಓಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ? ಇನ್ನು ಮುಂದೆ ಇವರು 'ಗ್ರೂಪ್-ಬಿ' ಅಧಿಕಾರಿಗಳು!