ಎಂಜಿನಿಯರಿಂಗ್ ಪದವೀಧರರಿಗೆ ಸೇನೆಯಲ್ಲಿ ಅವಕಾಶ, ಆಸಕ್ತಿ ಇದ್ದೋರು ಅಪ್ಲೈ ಮಾಡಿ

By Suvarna News  |  First Published Mar 16, 2021, 5:17 PM IST

ಭಾರತೀಯ ಸೇನೆಯ ಪರ್ಮೆನೆಂಟ್ ಕಮಿಷನ್‌ಗಾಗಿ ಇಂಡಿಯನ್ ಮಿಲಿಟರಿ ಅಕಾಡೆಮಿ ಜುಲೈನಲ್ಲಿ ಆರಂಭಿಸಲಿರುವ 133ನೇ ಟೆಕ್ನಿಕಲ್ ಗ್ರಾಜ್ಯುಯೇಟ್ ಕೋರ್ಸ್‌ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಂಜನಿಯರಿಂಗ್ ಪದವೀಧರರು ಹಾಗೂ ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಬಹುದಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನವಾಗಿದೆ. ಈ ಸಂಬಂಧ ಭಾರತೀಯ ಸೇನೆ ಅಧಿಸೂಚನೆ ಕೂಡ ಹೊರಡಿಸಿದೆ.


ಭಾರತೀಯ ಸೇನೆಯ ಡೆಹ್ರಾಡೂನ್‌ನ ಶಾಶ್ವತ ಆಯೋಗ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ)ಯಲ್ಲಿ ಜುಲೈ 2021 ರಿಂದ ಪ್ರಾರಂಭವಾಗುವ 133ನೇ ತಾಂತ್ರಿಕ ಪದವಿ ಕೋರ್ಸ್ (ಟಿಜಿಸಿ -133) ಗೆ ಭಾರತೀಯ ಸೇನೆಯು ಅರ್ಜಿಗಳನ್ನ ಆಹ್ವಾನಿಸಿದೆ. ಆನ್‌ಲೈನ್ (joinindianarmy.nic.in) ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆ ದಿನಾಂಕವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳ ತರಬೇತಿಯ ಅವಧಿ 49 ವಾರಗಳು ಆಗಿರಲಿವೆ. ಈ ಸಂಬಂಧ ಭಾರತೀಯ ಸೇನೆ ಅಧಿಸೂಚನೆ ಕೂಡ ಹೊರಡಿಸಿದೆ.

ಎಂಜಿನಿಯರಿಂಗ್ ಓದಲು ಮ್ಯಾಥ್ಸ್, ಫಿಜಿಕ್ಸ್ ಕಡ್ಡಾಯವಲ್ಲ!

Tap to resize

Latest Videos

undefined

ಒಟ್ಟು 40 ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭಾರತೀಯ ಸೇನೆ ಭರ್ತಿ ಮಾಡಿಕೊಳ್ಳುತ್ತಿದೆ. ಈ 40 ಖಾಲಿ ಹುದ್ದೆಗಳ ಪೈಕಿ ಸಿವಿಲ್/ಬಿಲ್ಡಿಂಗ್  ಕನ್ಸ್‌ಟ್ರಕ್ಷನ್ ಟೆಕ್ನಾಲಜಿ – 11, ಆರ್ಕಿಟೆಕ್ಚರ್ – 1, ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ – 4, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ಕಂಪ್ಯೂಟರ್ ಟೆಕ್ನಾಲಜಿ/ಇನ್ಫೋ ಟೆಕ್/ ಎಂ.ಎಸ್‌ಸಿ ಕಂಪ್ಯೂಟರ್ ಸೈನ್ಸ್-9, ಇನ್ಫಾರ್ಮೇಷನ್ ಟೆಕ್ನಾಲಜಿ (ಐಟಿ)- 3, ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಷನ್ – 2, ಟೆಲಿಕಮ್ಯೂನಿಕೇಷನ್ ಇಂಜಿನಿಯರಿಂಗ್ - 1, ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್- 1, ಸ್ಯಾಟಲೈಟ್ ಕಮ್ಯೂನಿಕೇಷನ್- 1, ಏರೋನಾಟಿಕಲ್/ ಏರೋಸ್ಪೇಸ್/ ಏವಿಯಾನಿಕ್ಸ್- 3, ಆಟೋ ಮೊಬೈಲ್ ಇಂಜಿನಿಯರಿಂಗ್ - 1 , ಟೆಕ್ಸ್‌ಟೈಲ್ ಇಂಜಿನಿಯರಿಂಗ್ – 1 ಹುದ್ದೆಗಳಿಗೆ ಭಾರತೀಯ ಸೇನೆ ನೇಮಕಾತಿ ಪ್ರಕ್ರಿಯೆಗಳನ್ನು ಆಱಂಭಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಭಾರತೀಯ ಸೇನೆ ನಿಗದಿ ಪಡಿಸಿದ ಶೈಕ್ಷಣಿಕ ಅರ್ಹತೆಗಳನ್ನು ಪೂರೈಸಬೇಕಾಗಿರುತ್ತದೆ. ಅಭ್ಯರ್ಥಿಗಳು  ಇಂಜಿನಿಯರಿಂಗ್ ಪದವಿ ಕೋರ್ಸ್‌ನಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಇಷ್ಟು ಮಾತ್ರವಲ್ಲದೆ, ಇಂಜಿನಿಯರಿಂಗ್ ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗಾಗಿ, ಎಂಜಿನಿಯರಿಂಗ್ ಪದವಿ ಪೂರ್ತಿಗೊಳಿಸಿದವರು ಮತ್ತು ಅಂತಿಮ ವರ್ಷದಲ್ಲಿರುವ ಇಬ್ಬರೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಎಂದು ಭಾವಿಸಬಹುದಾಗಿದೆ.  

ಪರೀಕ್ಷೆ ಮೂಲಕ 822 ಹುದ್ದೆಗಳಿಗೆ ಯುಪಿಎಸ್‌ಸಿಯಿಂದ ನೇಮಕಾತಿ

ಆದರೆ, ಇಂಜಿನಿಯರಿಂಗ್ ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುವ ಅಭ್ಯರ್ಥಿಗಳು ಜುಲೈ / 2021 ರೊಳಗೆ ಇಂಜಿನಿಯರಿಂಗ್ ಪದವಿಯ ಎಲ್ಲಾ ಸೆಮಿಸ್ಟರ್ / ವರ್ಷಗಳ ಪರೀಕ್ಷೆಯಲ್ಲಿ ಪಾಸ್  ಆಗಿರುವ ಮಾರ್ಕ್‌ಶೀಟ್‌ಗಳನ್ನು ಸಲ್ಲಿಸಬೇಕು.ಜೊತೆಗೆ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ನಲ್ಲಿ ತರಬೇತಿ ಪಡೆದ 12 ವಾರಗಳ ಎಂಜಿನಿಯರಿಂಗ್ ಪದವಿ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಒಂದು ವೇಳೆ ಅಭ್ಯರ್ಥಿಗಳು ಐಎಂಎ ಪದವಿ ಪ್ರಮಾಣಪತ್ರ ಸಲ್ಲಿಸಲು ವಿಫಲವಾದರೆ, ಐಎಂಎಯಲ್ಲಿನ ತರಬೇತಿ ವೆಚ್ಚವನ್ನು ಹೆಚ್ಚುವರಿ ಬಾಂಡ್ ಬೇಸಿಸ್‌ನಲ್ಲಿ ಸೇರಿಸಿಕೊಂಡು ಸ್ಟೈಫಂಡ್ ಮತ್ತು ಪೇ ಮತ್ತು ಭತ್ಯೆಗಳನ್ನು ಪಾವತಿಸಲಾಗುತ್ತದೆ.

01 ಜುಲೈ 2021 ರಂತೆ 20 ರಿಂದ 27 ವರ್ಷಗಳು. (02 ಜುಲೈ 1994 ಮತ್ತು 01 ಜುಲೈ 2001 ರ ನಡುವೆ ಜನಿಸಿದ ಅಭ್ಯರ್ಥಿಗಳು, ಎರಡೂ ದಿನಾಂಕಗಳನ್ನು ಒಳಗೊಂಡಂತೆ).

ಅರ್ಜಿ ಸಲ್ಲಿಸುವುದು ಹೇಗೆ?: www.joinindianarmy.nic.in ವೆಬ್‌ಸೈಟ್‌ನಲ್ಲಿ ಮಾತ್ರ ಆನ್‌ಲೈನ್‌ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಆಫೀಸರ್ ಎಂಟ್ರಿ ಅಪ್ಲೈ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿ. ಬಳಿಕ ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ. ಬಳಿಕ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿದ ನಂತರ ಆನ್‌ಲೈನ್ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ ಸಬ್ ಮಿಟ್ ಮಾಡಿ. ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನಾಂಕವಾಗಿದೆ ಎಂಬುದನ್ನು ಅಭ್ಯರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಾಗಿ ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿದರೆ ಒಳ್ಳೆಯದು.

ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸದಲಗಾದಲ್ಲಿ ಹೊಸ ಕೇಂದ್ರೀಯ ವಿದ್ಯಾಲಯ

click me!