IIMB Recruitment ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ನಲ್ಲಿ ಹುದ್ದೆ

By Kannadaprabha News  |  First Published May 17, 2024, 11:40 AM IST

ಬೆಂಗಳೂರಿನ ಐಐಎಂಬಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿದೆ.


ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ (ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು) ನಲ್ಲಿ ಕೆಸಲ ಮಾಡಲು ಆಸಕ್ತಿ ಇರುವವರಿಗೆ ಇಲ್ಲೊಂದ ಸುವರ್ಣ ಅವಕಾಶ ಇದೆ. ಉದ್ಯೋಗ ಹುಡುಕುತ್ತಿರುವ ನಿರುದ್ಯೋಗ ಯುವಕ ಯವತಿಯರಿಗೆ ಬೆಂಗಳೂರಿನಲ್ಲಿ ಈಗ ಉದ್ಯೋಗ ಅವಕಾಶಗಳಿವೆ. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಬೆಂಗಳೂರಿನಲ್ಲಿ (IIMB) ಒಟ್ಟು 3 ಕೇಸ್ ರೈಟರ್​ ಹುದ್ದೆಗಳು ಖಾಲಿ ಇವೆ. ಆಸಕ್ತರು ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿದೆ.

ಸಂಸ್ಥೆ ಹೆಸರು: ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್

Tap to resize

Latest Videos

undefined

ಹುದ್ದೆ: ಕೇಸ್ ರೈಟರ್​ ಹುದ್ದೆ -3

ಮಾಸಿಕ ವೇತನ: ರು. 40,000

KPSC Recruitment 2024 ಜಲಸಂಪನ್ಮೂಲ, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ನೇಮಕಾತಿ

ಶೈಕ್ಷಣಿಕ ಅರ್ಹತೆ: ಪತ್ರಿಕೋದ್ಯಮ/ ಕಮ್ಯುನಿಕೇಶನ್/ ಇಂಗ್ಲಿಷ್​/ಬ್ಯುಸಿನೆಸ್/ಮ್ಯಾನೇಜ್​ಮೆಂಟ್ ಸ್ಟಡೀಸ್​​ನಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು

ವಯಸ್ಸಿನ ಮಿತಿ: ಐಐಎಂಬಿ ನೇಮಕಾತಿ ಅಧಿಸೂಚನೆ ಅನ್ವಯ, ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ.

ಅನುಭವ: ಕೇಸ್​ ರೈಟಿಂಗ್​​ನಲ್ಲಿ ಕನಿಷ್ಠ 2 ವರ್ಷ ಅನುಭವ

ಮಂಗಳೂರು: ಜೂ.7 8ಕ್ಕೆ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲಿ ಆಯ್ಕೆ ಆಗುವವರಿಗೆ ನಂತರ ಸಂದರ್ಶನ ನಡೆಸಲಾಗುವುದು. ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ನಿಗದಿ ಮಾಡಿಲ್ಲ ಎಂದು ಐಐಎಂಬಿ ತಿಳಿಸಿದೆ.

ಉದ್ಯೋಗ ಸ್ಥಳ:  ಬೆಂಗಳೂರು

ಅರ್ಜಿ ವಿಧಾನ: ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಇಲ್ಲಿ ನೀಡಲಾಗಿರುವ https://www.iimb.ac.in/job-opportunities ಲಿಂಕ್ ಮೂಲಕ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ: ಲಿಂಕ್‌ ನಲ್ಲಿ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಂಡು ಓದಬಹುದು.

 

click me!