ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್

By Web Desk  |  First Published Jun 5, 2019, 4:11 PM IST

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ  2019-20ನೇ ಸಾಲಿನ,  2020-21 ಹಾಗೂ 2021-22ನೇ ಸಾಲಿನ ವರೆಗೆ ಒಟ್ಟು 877 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ಸಿಕ್ಕಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ.


ಬೆಂಗಳೂರು, (ಜೂನ್ 05) : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕಿದೆ. 

ಪೊಲೀಸ್ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದ್ದು,  2019 ರಿಂದ 2022ರ ತನಕ ಒಟ್ಟು 877 ಹುದ್ದೆಗಳ ಭರ್ತಿಗೆ ಮಾಡಲಾಗುತ್ತದೆ.  ಈ ಬಗ್ಗೆ ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಅಧಿಕೃತವಾಗಿ ತಿಳಿಸಿದ್ದಾರೆ.

Tap to resize

Latest Videos

undefined

ಸರ್ಕಾರಿ, ಖಾಸಗಿ ಜಾಬ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು ಸೂಚಿಸಿದ್ದೇನೆ.

ಸಾರ್ವಜನಿಕ ಸೇವೆ ಸಲ್ಲಿಸಲು ಉಪಯುಕ್ತವಾದ ಈ ಸದಾವಕಾಶವನ್ನು ಸದ್ಬಳಿಕೆ ಮಾಡಿಕೊಳ್ಳಲು ಕರ್ನಾಟಕದ ಯುವಕರನ್ನು ಪ್ರೋತ್ಸಾಹಿಸುತ್ತೇನೆ. pic.twitter.com/YItYNUSkWS

— M B Patil (@MBPatil)

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಭರ್ತಿ ಮಾಡಲಾಗುತ್ತದೆ. 2019-20ನೇ ಸಾಲಿನಲ್ಲಿ 292 ಹುದ್ದೆ ಭರ್ತಿಯಾಗಲಿದೆ.

ಕರ್ನಾಟಕ ಪೊಲೀಸ್ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಿದೆ. ಅಭ್ಯರ್ಥಿಗಳಿಗೆ ವಿದ್ಯಾರ್ಹತೆ, ವೇತನ ಮುಂತಾದ ವಿವರಗಳು ನೇಮಕಾತಿ ಆದೇಶದಲ್ಲಿ ಪ್ರಕಟವಾಗಲಿದೆ. 

ಯಾವ-ಯಾವ ಹುದ್ದೆಗಳು
 * ಪಿಎಸ್‌ಐ (ಸಿವಿಲ್) 556
 * ಆರ್‌ಎಸ್‌ಐ (ಸಿಎಆರ್/ಡಿಎಆರ್) 120 
* ಎಸ್‌ಪಿಎಲ್. ಆರ್‌ಎಸ್‌ಐ (ಕೆಎಸ್‌ಆರ್‌ಪಿ) 120 
* ಪಿಎಸ್‌ಐ (ವೈರ್‌ಲೆಸ್) 26 
* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 51
 * ಪಿಎಸ್‌ಐ (ಸಿಐಡಿ) 4

2091-20ನೇ ಸಾಲಿನ ಹುದ್ದೆಗಳ ವಿವರ
* ಪಿಎಸ್‌ಐ (ಸಿವಿಲ್) 200
* ಆರ್‌ಎಸ್‌ಐ (ಸಿಎಆರ್/ಡಿಎಆರ್) 40 
* ಎಸ್‌ಪಿಎಲ್. ಆರ್‌ಎಸ್‌ಐ (ಕೆಎಸ್‌ಆರ್‌ಪಿ) 40
* ಪಿಎಸ್‌ಐ (ವೈರ್‌ಲೆಸ್) 5
* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 5
* ಪಿಎಸ್‌ಐ (ಸಿಐಡಿ) 2 
* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 7
* ಪಿಎಸ್‌ಐ (ವೈರ್‌ಲೆಸ್) 0

2020-21ನೇ ಸಾಲಿನ ಹುದ್ದೆಗಳ ವಿವರ
* ಪಿಎಸ್‌ಐ (ಸಿವಿಲ್) 200
* ಆರ್‌ಎಸ್‌ಐ (ಸಿಎಆರ್/ಡಿಎಆರ್) 40 
* ಆರ್‌ಎಸ್‌ಐ (ಸಿಎಆರ್/ಡಿಎಆರ್) 40 
* ಪಿಎಸ್‌ಐ (ವೈರ್‌ಲೆಸ್) 5

2021-22ನೇ ಸಾಲಿನ ಹುದ್ದೆಗಳ ವಿವರ
* ಪಿಎಸ್‌ಐ (ಸಿವಿಲ್) 156
* ಆರ್‌ಎಸ್‌ಐ (ಸಿಎಆರ್/ಡಿಎಆರ್) 40 
* ಎಸ್‌ಪಿಎಲ್. ಆರ್‌ಎಸ್‌ಐ (ಕೆಎಸ್‌ಆರ್‌ಪಿ) 40
* ಪಿಎಸ್‌ಐ (ವೈರ್‌ಲೆಸ್) 16
* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 39 
* ಪಿಎಸ್‌ಐ (ಸಿಐಡಿ) 2

click me!