ನಿಗಮ ಮಂಡಳಿ ಪರೀಕ್ಷೆಗೆ ಕಠಿಣ ವಸ್ತ್ರಸಂಹಿತೆ ಜಾರಿ; ಹಿಜಾಬ್‌ ಧರಿಸಿದ್ರೆ ತಪಾಸಣೆಗೆ 1 ಗಂಟೆ ಮುಂಚೆ ಬರಬೇಕು!

By Kannadaprabha News  |  First Published Oct 21, 2023, 5:35 AM IST

ಕಿಯೋನಿಕ್ಸ್‌ ಸೇರಿದಂತೆ ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿನ 670 ಖಾಲಿ ಹುದ್ದೆಗಳ ನೇರ ನೇಮಕಾತಿಗೆ ಅ.28 ಮತ್ತು 29ರಂದು ಪರೀಕ್ಷೆ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದ್ದು, ಪರೀಕ್ಷೆಗೆ ಡ್ರೆಸ್‌ ಕೋಡ್‌ ಸಂಬಂಧ ಮಾರ್ಗಸೂಚಿ ಪ್ರಕಟಿಸಿದೆ.


 ಬೆಂಗಳೂರು (ಅ.21): ಕಿಯೋನಿಕ್ಸ್‌ ಸೇರಿದಂತೆ ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿನ 670 ಖಾಲಿ ಹುದ್ದೆಗಳ ನೇರ ನೇಮಕಾತಿಗೆ ಅ.28 ಮತ್ತು 29ರಂದು ಪರೀಕ್ಷೆ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದ್ದು, ಪರೀಕ್ಷೆಗೆ ಡ್ರೆಸ್‌ ಕೋಡ್‌ ಸಂಬಂಧ ಮಾರ್ಗಸೂಚಿ ಪ್ರಕಟಿಸಿದೆ.

ಪ್ರಮುಖವಾಗಿ ಹಿಜಾಬ್‌ ಧರಿಸಿ ಬರುವ ಅಭ್ಯರ್ಥಿಗಳು ಪರೀಕ್ಷಾ ಅವಧಿ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ತಪಾಸಣೆಗೆ ಒಳಗಾಗಬೇಕು ಎಂದು ಸೂಚಿಸಿದೆ. ಮಹಿಳಾ ಅಭ್ಯರ್ಥಿಗಳು ಕಸೂತಿ, ಹೂವು, ಬ್ರೂಚ್‌ಗಳಿರುವ, ತುಂಬುತೋಳಿನ ವಸ್ತ್ರ, ಜೀನ್ಸ್‌ ಪ್ಯಾಂಟ್‌ ಧರಿಸುವಂತಿಲ್ಲ. ನಿಯಮಾನುಸಾರ ಯಾವುದೇ ರೀತಿಯ ಲ್ಲೂ ಮುಜುಗರವಾಗದಂತಹ ಅರ್ಧತೋಳಿನ ವಸ್ತ್ರ ಧರಿಸಿ ಪರೀಕ್ಷೆಗೆ ಬರಬೇಕು. 

Tap to resize

Latest Videos

undefined

ಪುರುಷ ಅಭ್ಯರ್ಥಿಗಳು ಕೂಡ ಅರ್ಧತೋಳಿನ ಅಂಗಿ ಮತ್ತು ಸರಳ ಪ್ಯಾಂಟ್‌ (ಜೇಬುಗಳಿರದ ಅಥವಾ ಕಡಿಮೆ ಜೇಬುಗಳಿರುವ) ಮತ್ತು ಧರಿಸಿ ಬರಬೇಕು. ಪೂರ್ಣ ತೋಳಿನ ಅಂಗಿ, ಕುರ್ತಾ ಪೈಜಾಮ, ಜೀನ್ಸ್‌ ಪ್ಯಾಂಟ್‌, ಇತರೆ ಕಸೂತಿ ಬಟ್ಟೆಗಳನ್ನು ಧರಿಸುವಂತಿಲ್ಲ.

ಮುಕ್ತ ವಿವಿಯಲ್ಲಿ ನಿವೃತ್ತರಾವದರಿಗೆ ಹುದ್ದೆ: ಆರೋಪ

ಇನ್ನು ಯಾರೂ ಕೂಡ ಶೂ, ಸಾಕ್ಸ್‌ ಧರಿಸಿ ಬರುವಂತಿಲ್ಲ. ತೆಳುವಾದ ಚಪ್ಪಲಿ ಧರಿಸುವುದು ಕಡ್ಡಾಯ. ಕಿವಿಯೋಲೆ, ಉಂಗುರ, ಸರ ಸೇರಿದಂತೆ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವಂತಿಲ್ಲ ಎಂದು ಸೂಚಿಸಲಾಗಿದೆ.

ಉಳಿದಂತೆ ಯಾವುದೇ ರೀತಿಯ ಮೊಬೈಲ್‌, ಕೈ ಗಡಿಯಾರ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ವಸ್ತುಗಳನ್ನು ತರುವಂತಿಲ್ಲ. ಬ್ಲೂಟೂತ್‌ ತರುವುದನ್ನು ತಡೆಯಲು ಬಾಯಿ, ಕಿವಿ, ತಲೆ ಮುಚ್ಚುವ ಯಾವುದೇ ವಸ್ತ್ರ, ಸಾಧನ ಧರಿಸಿ ಬರುವಂತಿಲ್ಲ ಎಂದು ತಿಳಿಸಿದೆ.

ನಿರುದ್ಯೋಗಿಗಳಿಗೆ ಸಂತಸ ಸುದ್ದಿ ನೀಡಿದ ಸಚಿವ ಚೆಲುವರಾಯಸ್ವಾಮಿ

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ?:

ಕಿಯೋನಿಕ್ಸ್‌ನ 26 ಹುದ್ದೆ, ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ 72, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 186, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ 386 ಹುದ್ದೆಗಳಿಗೆ ಈ ನೇಮಕ ನಡೆಯುತ್ತಿದೆ. ಪರೀಕ್ಷಾ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

click me!