DHFWS Chikkaballapur Recruitment 2022: ಮೆಡಿಕಲ್ ಆಫೀಸರ್ ಸೇರಿ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

Published : Jan 16, 2022, 04:09 PM ISTUpdated : Jan 16, 2022, 04:27 PM IST
DHFWS Chikkaballapur Recruitment 2022: ಮೆಡಿಕಲ್ ಆಫೀಸರ್ ಸೇರಿ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಮೆಡಿಕಲ್ ಆಫೀಸರ್, ಸ್ಟಾಫ್ ನರ್ಸ್ ಸೇರಿ ಒಟ್ಟು 28 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು(ಜ.16): ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ((District Health and Family Welfare Society Chikkaballapur -DHFWS)) ಅಗತ್ಯವಿರುವ ವಿವಿಧ  ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೆಡಿಕಲ್ ಆಫೀಸರ್ (Medical Officer), ಸ್ಟಾಫ್ ನರ್ಸ್ (Staff Nurse) ಸೇರಿ ಒಟ್ಟು 28 ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 18  ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ  ಜಿಲೆಲಯ ಅಧಿಕೃತ ವೆಬ್‌ತಾಣ https://chikkaballapur.nic.in/en/ ಗೆ ಭೇಟಿ ನೀಡಲು ಕೋರಲಾಗಿದೆ. 

ಹುದ್ದೆಗಳ ವಿವರ: 
ಮೆಡಿಕಲ್ ಆಫೀಸರ್ - 3 ಹುದ್ದೆಗಳು
ಸ್ಟಾಫ್ ನರ್ಸ್ (ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ) - 22 ಹುದ್ದೆಗಳು
ಆಯುಷ್‌ MO RBSK - 2 ಹುದ್ದೆಗಳು
ತಾಲೂಕು ಆಶಾ ಮೆಂಟರ್ ಬ್ಲಾಕ್ ಕಮ್ಯೂನಿಟಿ Mobilizer (ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ) - 1 ಹುದ್ದೆ

ಶೈಕ್ಷಣಿಕ ಅರ್ಹತೆ ಮತ್ತು ಅನುಭವ: 
ಮೆಡಿಕಲ್ ಆಫೀಸರ್ ಹುದ್ದೆಗೆ ಎಂಬಿಬಿಎಸ್ (MBBS) ಜೊತೆಗೆ 5 ವರ್ಷ ಅನುಭವ ಹೊಂದಿರಬೇಕು.
ಸ್ಟಾಫ್ ನರ್ಸ್ ಹುದ್ದೆಗೆ GNM ಶೈಕ್ಷಣಿಕ ಅರ್ಹತೆ ಜೊತೆಗೆ 2 ವರ್ಷ ಕೆಲಸದ ಅನುಭವ ಹೊಂದಿರಬೇಕು.
Ayush MO RBSK ಹುದ್ದೆಗೆ BAMS ಉತ್ತೀರ್ಣರಾಗಿ ಇಂಟರ್ನ್ಶಿಪ್ ಅನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು. ಕೆ.ಎಂ.ಸಿ (ಕರ್ನಾಟಕ ಮೆಡಿಕಲ್ ಕೌನ್ಸಿಲ್) ನೋಂದಣಿಯನ್ನು ಹೊಂದಿರತಕ್ಕದ್ದು.
Taluk ASHA Mentor Block Community Mobilizer ~ GNM/ Bsc/Diploma in Nursing ಜೊತೆಗೆ 2 ವರ್ಷ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ: ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ  ಖಾಲಿ ಇರುವ ವಿವಿಧ  ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

BSF Recruitment 2022: ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಗಡಿ ಭದ್ರತಾ ಪಡೆ

ವೇತನ: ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ  ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ  ಆಯಾಯ ಹುದ್ದೆಗಳಿಗೆ ಅನುಸಾರವಾಗಿ ವೇತನ ಸಿಗಲಿದೆ.
ಮೆಡಿಕಲ್ ಆಫೀಸರ್  ಹುದ್ದೆಗೆ ಆಯ್ಕೆಯಾದವರಿಗೆ  ಮಾಸಿಕ 50,000ರೂ.
ಸ್ಟಾಫ್ ನರ್ಸ್  ಹುದ್ದೆಗೆ ಆಯ್ಕೆಯಾದವರಿಗೆ  ಮಾಸಿಕ  13,225 ರೂ. ಜೊತೆಗೆ 13% ಇಪಿಎಫ್ ದೊರೆಯಲಿದೆ
ಆಯುಷ್‌ MO RBSK  ಹುದ್ದೆಗೆ ಆಯ್ಕೆಯಾದವರಿಗೆ  ಮಾಸಿಕ 25,000ರೂ.
ತಾಲೂಕು ಆಶಾ ಮೆಂಟರ್ ಬ್ಲಾಕ್ ಕಮ್ಯೂನಿಟಿ Mobilizer  ಹುದ್ದೆಗೆ ಆಯ್ಕೆಯಾದವರಿಗೆ  ಮಾಸಿಕ 11,500ರೂ. ವೇತನ ನಿಗದಿಯಾಗಿದೆ.

ಅರ್ಜಿ ಸಲ್ಲಿಕೆಯ ವಿಧಾನ:
ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್‌ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿ) ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 18, 2022. ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ  ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು  ಜನವರಿ 20, 2022ರಂದು ವರ್ಜಿನಲ್ ಸರ್ಟಿಫಿಕೇಟ್ ಮತ್ತು ಅದರ ಒಂದು ಜೆರಾಕ್ಸ್ ಪ್ರತಿ ಜೊತೆಗೆ  ಅಭ್ಯರ್ಥಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳೊಂದಿಗೆ  ಚಿಕ್ಕಬಳ್ಳಾಪುರ ಜಿಲ್ಲಾ  ಆರ್‌ಸಿಎಚ್ ಅಧಿಕಾರಿಗಳ ಕಚೇರಿಗೆ ಸಂಜೆ 5 ಗಂಟೆಯೊಳಗೆ ದಾಖಲಾತಿ ಪರಿಶೀಲನೆಗೆ ಭೇಟಿ ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

PREV
Read more Articles on
click me!

Recommended Stories

ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?
ಸೋಶಿಯಲ್ ಮೀಡಿಯಾದಿಂದ ದೂರವಿದ್ದು 10 ಸರ್ಕಾರಿ ನೌಕರಿ ಪಡೆದು ಸ್ಫೂರ್ತಿಯಾದ ಸಾಧಕ!