Guest Faculty Provisional Selection List 2022: ಅತಿಥಿ ಉಪನ್ಯಾಸಕರ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

By Suvarna News  |  First Published Feb 1, 2022, 5:38 PM IST

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಒಟ್ಟು 37 ವಿಷಯಗಳಿಗೆ  ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಲಿದ ಅಭ್ಯರ್ಥಿಗಳು  dce.karnataka.gov.in ಗೆ ಭೇಟಿ ನೀಡಿ 


ಬೆಂಗಳೂರು(ಫೆ.1): ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯು (Department of College Education) 2021-22ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ (Guest Faculty) ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಸೀಟು ಹಂಚಿಕೆ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ವೆಬ್‌ಸೈಟ್‌ dce.karnataka.gov.in ಗೆ ಭೇಟಿ ನೀಡಿ ಪ್ರಾವಿಷನಲ್ ಅಲಾಟ್‌ಮೆಂಟ್‌ ಪರಿಶೀಲನೆ ನಡೆಸಬಹುದು.

ಕಾಲೇಜು ಶಿಕ್ಷಣ ಇಲಾಖೆಯು  ಕೌನ್ಸಿಲಿಂಗ್ ನಡೆಸಿ ಜನವರಿ 30ರಂದು 14 ವಿಷಯಗಳಿಗೆ ಮೊದಲು ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಿತ್ತು. ಜನವರಿ 31 ರಂದು 23 ವಿಷಯಗಳಿಗೆ ತಾತ್ಕಾಲಿಕ ಹಂಚಿಕೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೀಗೆ ಒಟ್ಟು  37 ವಿಷಯಗಳಿಗೆ ಸಂಬಂಧಿಸಿ ಇದೀಗ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. 

Tap to resize

Latest Videos

undefined

ತಾತ್ಕಾಲಿಕ ಸೀಟು ಹಂಚಿಕೆ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ವಿಷಯ, ಕಾಲೇಜು ಐಡಿ, ಕಾಲೇಜು ಹೆಸರು ಹಾಗೂ ಗೆಸ್ಟ್‌ ಫ್ಯಾಕಲ್ಟಿ ಐಡಿಯನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿನ ಅಭ್ಯರ್ಥಿಗಳು ತಾವು ಆಯ್ಕೆಯಾದ ಕಾಲೇಜಿಗೆ ಭೇಟಿ ನೀಡಿ, ಎಲ್ಲ ಅಗತ್ಯ ಮೂಲ ದಾಖಲೆಗಳನ್ನು ನೀಡಿ ಪರಿಶೀಲನೆ ಮಾಡಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಮಾತ್ರವೇ ಆಯ್ಕೆಯನ್ನು ಖಚಿತಪಡಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಚೆಕ್‌ ಮಾಡಲು ಈ ಲಿಂಕ್ ಗಳನ್ನು ಕ್ಲಿಕ್ ಮಾಡಿ 

Education Budget 2022: ಶಿಕ್ಷಣಕ್ಕೆ ಸಿಕ್ಕಿದ್ದು ಮಹತ್ವದ ಕೊಡುಗೆ, ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ

ಪರೀಕ್ಷಾ ಪೇ ಚರ್ಚಾ 2022  ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಗೆ ಎರಡೇ ದಿನ ಬಾಕಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (prime minister narendra modi ) ಅವರು ನಡೆಸಿಕೊಡುವ ವಾರ್ಷಿಕ ಕಾರ್ಯಕ್ರಮದ ಪ್ರಸಕ್ತ ವರ್ಷದ ಪರೀಕ್ಷಾ ಪೇ ಚರ್ಚಾ 2022ಗೆ (Pariksha Pe Charcha 2022) ಆನ್‌ಲೈನ್‌ ನೋಂದಣಿ ಪ್ರಕ್ರಿಯೆಯನ್ನು ಫೆಬ್ರವರಿ 3ರವರೆಗೆ ವಿಸ್ತರಣೆ ಮಾಡಲಾಗಿದೆ. ಇನ್ನೆರಡೇ ದಿನ ಬಾಕಿ ಇದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಲಾಗುವ ಪರೀಕ್ಷಾ ಪೇ ಚರ್ಚಾದಲ್ಲಿ ವಿದ್ಯಾರ್ಥಿಗಳು (Students) ಪರೀಕ್ಷೆಯ ಬಗೆಗೆ ಇರುವ ಒತ್ತಡ ಮತ್ತು ಆತಂಕವನ್ನು ದೂರ ಮಾಡಿಕೊಳ್ಳುವ ಕುರಿತು ಮಾತನಾಡಬಹುದು.

ಪಿಎಂ ಮೋದಿಯೊಂದಿಗಿನ ಐದನೇ ಆವೃತ್ತಿಯ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ಇದಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ ನಡೆಯಯಲಿದೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ (PMO) ತಿಳಿಸಿದೆ. ಬೋರ್ಡ್ ಪರೀಕ್ಷೆಗೆ (Board Exam) ತಯಾರಿ ನಡೆಸುತ್ತಿರುವ ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ದ್ವಿತೀಯ ಪಿಯುಸಿ ವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

Youth Sector Budget 2022: Aatmanirbhar Bharatನಡಿ 16 ಲಕ್ಷ ಉದ್ಯೋಗ, 5 ವರ್ಷದಲ್ಲಿ 60 ಲಕ್ಷ ಉದ್ಯೋಗ ಸೃಷ್ಠಿಯ ಗುರಿ

ಪರೀಕ್ಷಾ ಪೆ ಚರ್ಚಾ 2022 ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ:
- mygov.in ವೆಬ್ ಸೈಟ್ ಗೆ ತೆರಳಬೇಕು
- ಹೋಮ್ ಪೇಜ್ ನಲ್ಲಿ ಇರುವ What's New ವಿಭಾಗಕ್ಕೆ ತೆರಳಿ
-  ಪರೀಕ್ಷಾ ಪೆ ಚರ್ಚಾ 2022 ಎಂದಿರುವ ಚಿತ್ರದ ಮೇಲೆ ಕ್ಲಿಕ್ ಮಾಡಿ, register now ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಪರೀಕ್ಷಾ ಪಡೆ ಚರ್ಚಾಗಾಗಿ ನೋಂದಾಯಿಸಲು ವಿವರಗಳನ್ನು ಭರ್ತಿ ಮಾಡಿ ಮತ್ತು ಅದನ್ನು ಸಲ್ಲಿಸಿ

ಹೆಚ್ಚಿನ ವಿವರಗಳಿಗೆ https://innovateindia.mygov.in/ppc-2022/ ಲಿಂಕ್ ಕ್ಲಿಕ್ ಮಾಡಿ.

click me!