ಸೆಂಟ್ರಲ್ ಸಿಲ್ಕ್ ಬೋರ್ಡ್ನಲ್ಲಿ ಖಾಲಿ ಇರುವ 66 ಸೈಂಟಿಸ್ಟ್ ಬಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 17 ಕೊನೆಯ ದಿನವಾಗಿದೆ.
ಬೆಂಗಳೂರು (ಅ.29): ಸೆಂಟ್ರಲ್ ಸಿಲ್ಕ್ ಬೋರ್ಡ್ನಲ್ಲಿ ಖಾಲಿ ಇರುವ 66 ಸೈಂಟಿಸ್ಟ್ ಬಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 17 ಕೊನೆಯ ದಿನವಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಸೈಂಟಿಸ್ಟ್ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂಸ ಹುದ್ದೆಗೆ ಅನುಸಾರವಾಗಿ ಸೈನ್ಸ್/ಅಗ್ರಿಕಲ್ಚರ್ ಸೈನ್ಸ್ನಲ್ಲಿ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಮಾಡಿರಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ https://www.india.gov.in/official-website-central-silk-board ಗೆ ಭೇಟಿ ನೀಡಿ.
ವಯೋಮಿತಿ: ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿ ಖಾಲಿ ಇರುವ ಸೈಂಟಿಸ್ಟ್ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನವೆಂಬರ್ 17, 2022ಕ್ಕೆ ಸರಿಯಾಗುವಂತೆ 35 ವರ್ಷ ಮೀರಿರಬಾರದು. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
undefined
ಅರ್ಜಿ ಶುಲ್ಕ: ಎಸ್ಸಿ/ಎಸ್ಟಿ/ PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. UR/EWS/OBC ಅಭ್ಯರ್ಥಿಗಳಿಗೆ 1000 ರೂ. ಶುಲ್ಕ ಪಾವತಿಸಬೇಕು. ಆನ್‌ಲೈನ್ ಮೂಲಕವೇ ಅರ್ಜಿ ಶುಲ್ಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಎನ್ಟಿಎ ಐಸಿಎಆರ್(ಪಿಎಚ್ಡಿ) ಜೆಆರ್ಎಫ್/ಎಸ್ಆರ್ಎಫ್-2022 ಪರೀಕ್ಷೆ, ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ ವಿವರ: ಸೆಂಟ್ರಲ್ ಸಿಲ್ಕ್ ಬೋರ್ಡ್ನಲ್ಲಿ ಖಾಲಿ ಇರುವ 66 ಸೈಂಟಿಸ್ಟ್ ಬಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಮಾಸಿಕ 56,100 ರೂ ನಿಂದ 1,77,500 ರೂ.
SBI CBO Recruitment 2022: ಎಸ್‌ಬಿಐನಲ್ಲಿ 1422 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೆಎಂಎಫ್ ನಲ್ಲಿ ವಿವಿಧ 487 ಹುದ್ದೆಗಳಿಗೆ ನೇಮಕಾತಿ: ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ಖಾಲಿ ಇರುವ ವಿವಿಧ 487 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡೆಪ್ಯೂಟಿ ಡೈರೆಕ್ಟರ್, ಜೂನಿಯರ್ ಟೆಕ್ನಿಷಿಯನ್ ಸೇರಿ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 19, 2022 ಕೊನೆಯ ದಿನವಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ: KMF ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು CA ಅಥವಾ ICWA, M.V.Sc, ಸ್ನಾತಕೋತ್ತರ ಪದವಿ, MBA, MBBS, B.Sc, M.Tech ಅನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕರ್ನಾಟಕ ಹಾಲು ಒಕ್ಕೂಟದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು 19-Nov-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು. SC/ST/Cat-I ಅಭ್ಯರ್ಥಿಗಳಿಗೆ 5 ವರ್ಷ. ಮತ್ತು Cat-2A/2B/3A & 3B ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಕರ್ನಾಟಕದಲ್ಲಿ 1,747 ಕೋಟಿ ಹೂಡಿಕೆಗೆ ಅಸ್ತು, 4,900 ಉದ್ಯೋಗ ಸೃಷ್ಟಿ, ಸಚಿವ ನಿರಾಣಿ
ಅರ್ಜಿ ಶುಲ್ಕ: SC/ST/Cat-I/PWD ಅಭ್ಯರ್ಥಿಗಳು: ರೂ.500/-
ಎಲ್ಲಾ ಇತರ ಅಭ್ಯರ್ಥಿಗಳು: ರೂ.1000/-
ಆಯ್ಕೆ ಪ್ರಕ್ರಿಯೆ: ಕರ್ನಾಟಕ ಹಾಲು ಒಕ್ಕೂಟದ ನೇಮಕಾತಿ ಅಧಿಸೂಚನೆಯ ಪ್ರಕಾರ ಲಿಖಿತ ಪರಿಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಜಿ ಸಲ್ಲಿಸಬಹುದು.