Rozgar Mela: ರಾಜ್ಯದಲ್ಲಿ 1000 ಯುವಕರಿಗೆ ಕೇಂದ್ರ ನೌಕರಿ

By Kannadaprabha NewsFirst Published Oct 23, 2022, 12:43 PM IST
Highlights

ದೇಶದ ಅತಿದೊಡ್ಡ ರೋಜಗಾರ್‌ ಮೇಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಮೋದಿ ‘ರೋಜಗಾರ್‌ ಮೇಳ’ದಲ್ಲಿ ನೇಮಕ ಪತ್ರ. ನಯಾಪೈಸೆ ಕೊಡದೆ ಕೆಲಸ ಪಡೆದಿದ್ದೀರಿ ಎಂದ ಜೋಶಿ

ಬೆಂಗಳೂರು (ಅ.23): ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದುಕೊಂಡಿರುವವರು ತಮ್ಮ ಸೀಮಿತ ಅಧಿಕಾರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಲೆದಾಟ ತಪ್ಪಿಸಿ ನಿಗದಿತ ಕಾಲಾವಧಿಯೊಳಗೆ ಕೆಲಸ ಮಾಡಿಕೊಡಲು ಪಣ ತೊಡಬೇಕೆಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಕಿವಿಮಾತು ಹೇಳಿದರು. ಶನಿವಾರ ದೇಶದ ಅತಿದೊಡ್ಡ ರೋಜಗಾರ್‌ ಮೇಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಇದರ ಅಂಗವಾಗಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಉದ್ಯೋಗ ಮೇಳ’ದಲ್ಲಿ ರಾಜ್ಯದ ಕೇಂದ್ರ ಸರ್ಕಾರಿ ಕಚೇರಿಗಳಿಗೆ ನೇಮಕವಾಗಿರುವ 1000 ಹೊಸ ಉದ್ಯೋಗಿಗಳ ಪೈಕಿ ಕೆಲವರಿಗೆ ಸಾಂಕೇತಿಕವಾಗಿ ‘ಉದ್ಯೋಗ ಪ್ರಮಾಣ ಪತ್ರ’ ವಿತರಿಸಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀವು ಯಾರಿಗೂ ಒಂದು ನಯಾ ಪೈಸೆ ದುಡ್ಡು ನೀಡದೆಯೇ ನಿಮ್ಮ ಸ್ವಂತ ಪ್ರತಿಭೆಯಿಂದ ಕೆಲಸ ಗಿಟ್ಟಿಸಿಕೊಂಡಿದ್ದೀರಿ. ಇಂತಹ ಸಂದರ್ಭದಲ್ಲಿ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಎಷ್ಟೆಲ್ಲಾ ಸಹಾಯ ಮಾಡಬಹುದೋ, ಅದನ್ನು ನಿಗದಿತ ಕಾಲಾವಧಿಯೊಳಗೆ ಮಾಡಬೇಕು. ಅವರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ಕೊರೋನಾ ಬಂದ ಮೇಲೆ ಆರ್ಥಿಕತೆ ಕುಸಿಯಿತು. ಇದರಿಂದ ಸುಧಾರಿಸಿಕೊಳ್ಳುವ ಅವಧಿಗೆ ಉಕ್ರೇನ್‌ ಮತ್ತು ರಷ್ಯಾದಲ್ಲಿ ಯುದ್ಧ ನಡೆದ ಪರಿಣಾಮ ಕಚ್ಚಾ ತೈಲ, ಅನಿಲ ಆಮದು ಆಗಲಿಲ್ಲ. ಇದು ವಿದ್ಯುತ್‌ ಉತ್ಪಾದನೆಯ ಮೇಲೂ ಪರಿಣಾಮ ಬೀರಿತು. ಇದರಿಂದಾಗಿ ಕಲ್ಲಿದ್ದಲಿನ ದರ ಕೂಡ ಹೆಚ್ಚಾಯಿತು. ಇದೆಲ್ಲಾ ಮುಗಿದ ಬಳಿಕ ದೇಶದ ಅರ್ಥಿಕತೆಯಲ್ಲಿ ಚೇತರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ವಿಶ್ವದ ನಂಬರ್‌ ಸ್ಥಾನದಲ್ಲಿ ಭಾರತ ನಿಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

Latest Videos

ಈ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ 17 ಇಲಾಖೆಗಳಿಗೆ ಆಯ್ಕೆಯಾಗಿರುವ 28 ಅಭ್ಯರ್ಥಿಗಳಿಗೆ ಉದ್ಯೋಗ ಪ್ರಮಾಣ ಪತ್ರವನ್ನು ನೀಡಿ ಅಭಿನಂದನೆ ತಿಳಿಸಿದರು. ಈ ಸಂದರ್ಭದಲ್ಲಿ ಸಚಿವ ಅಶ್ವತ್‌ನಾರಾಯಣ್‌, ಸಂಸದರಾದ ಪಿ.ಸಿ.ಮೋಹನ್‌, ತೇಜಸ್ವಿ ಸೂರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ 1,747 ಕೋಟಿ ಹೂಡಿಕೆಗೆ ಅಸ್ತು, 4,900 ಉದ್ಯೋಗ ಸೃಷ್ಟಿ, ಸಚಿವ ನಿರಾಣಿ

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನೇಮಕಾತಿ ಮಿಷನ್‌ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಗೊಂಡಿರುವ ನೌಕರರಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೇಮಕಾತಿ ಆದೇಶವನ್ನು ವಿತರಿಸಿದರು.

 KMF Recruitment 2022: ಕೆಎಂಎಫ್ ನಲ್ಲಿ ವಿವಿಧ 487 ಹುದ್ದೆಗಳಿಗೆ ನೇಮಕಾತಿ

ಉದ್ಯೋಗ ಮೇಳದಲ್ಲಿ ಭಾರತ ಬಹುದೊಡ್ಡ ಹೆಜ್ಜೆ ಇಟ್ಟಿದೆ. ಸ್ಟಾರ್ಚ್‌ಅಪ್‌ನಲ್ಲೂ ಬಹಳಷ್ಟುನಮ್ಮ ದೇಶ ಮುಂದಿದೆ. ಅದರಲ್ಲೂ ಬೆಂಗಳೂರು ಐಟಿ ಹಬ್‌ ಆಗುತ್ತಿದೆ. ನಮಗೆ ಬೇಕಾಗಿರುವುದಕ್ಕಿಂತ ಹೆಚ್ಚು ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ಬ್ರಿಟಿಷರು ನಮ್ಮನ್ನು ಇಲಿಗಳು ಆಡಿಸುವವರು, ಇಲಿಗಳನ್ನು ತಿನ್ನುವವರು ಅಂತ ಒಂದು ಕಾಲದಲ್ಲಿ ಹೇಳುತ್ತಿದ್ದರು. ಇಂದು ಆರ್ಥಿಕ ವ್ಯವಸ್ಥೆಯಲ್ಲಿ ನಾವು ಇಂಗ್ಲೆಂಡನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನದಲ್ಲಿ ಇದ್ದೇವೆ ಎಂದರು.

click me!