ಡಿಆರ್‌ಡಿಒ ಇಂಜಿನಿಯರ್‌ಗಳಿಗೆ ಅಚ್ಚರಿಯ ಕರೆ! ಬೆಂಗಳೂರಿನಲ್ಲಿರುವ CABS ವಿಭಾಗದ ಹುದ್ದೆಗಳಿಗೆ ಅರ್ಜಿ ಆಹ್ವಾನ

Published : Jan 16, 2026, 11:09 AM IST
DRDO Recruitment

ಸಾರಾಂಶ

ಬೆಂಗಳೂರಿನ DRDO CABS ಸಂಸ್ಥೆಯು 10 ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇಂಜಿನಿಯರಿಂಗ್ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ಮಾಸಿಕ ₹37,000 ಸಂಬಳ ನೀಡಲಾಗುತ್ತದೆ. ವಾಕ್-ಇನ್ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಎಂಜಿನಿಯರಿಂಗ್ ಮುಗಿಸಿ ಒಂದು ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಲ್ಲಿ ವೃತ್ತಿಜೀವನ ಆರಂಭಿಸಲು ಕಾಯುತ್ತಿದ್ದೀರಾ? ಹಾಗಿದ್ದಲ್ಲಿ, ನಿಮಗೊಂದು ಭರ್ಜರಿ ಸುದ್ದಿ. ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಭಾಗವಾಗಿರುವ ಬೆಂಗಳೂರಿನ ‘ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್’ (CABS) ಈಗ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

ಸಂಸ್ಥೆಯ ಹೆಸರು : ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ ( DRDO CABS)

ಹುದ್ದೆಯ ವಿವರಗಳು : ಜೂನಿಯರ್ ರಿಸರ್ಚ್ ಫೆಲೋ

ಒಟ್ಟು ಹುದ್ದೆಗಳ ಸಂಖ್ಯೆ : 10

ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ

ವಿದ್ಯಾರ್ಹತೆ:

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BE/ B.Tech ಅಥವಾ ME/ M.Tech ಪೂರ್ಣಗೊಳಿಸಿರಬೇಕು.

ವಯೋಮಿತಿ:

ಡಿ.31-2025ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 28 ವರ್ಷ ಮೀರಬಾರದು.

ವಯೋಮಿತಿ ಸಡಿಲಿಕೆ:

ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷ

ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ

ಸಂಬಳ:

ಅಭ್ಯರ್ಥಿಗಳಿಗೆ ಮಾಸಿಕ 37,000 ರು.ವೇತನ ನೀಡಲಾಗುತ್ತದೆ. 

ಆಯ್ಕೆ ವಿಧಾನ:

ವಾಕ್-ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು DRDO ಅಧಿಕೃತ ವೆಬ್‌ಸೈಟ್ drdo.gov.in ಗೆ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.

ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ,

ಇ-ಮೇಲ್ ಐಡಿ: jrf.rectt.cabs[at]gov.inಗೆ ದಿನಾಂಕ ಜನವರಿ 22-2026 ರ ಒಳಗೆ ಕಳುಹಿಸಿಕೊಡಿ.\B

ಪ್ರಮುಖ ದಿನಾಂಕಗಳು:

ಅಧಿಸೂಚನೆ ಪ್ರಕಟವಾದ ದಿನಾಂಕ: ಜನವರಿ 13-2026

ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 22-2026

ವಾಕ್-ಇನ್ ಸಂದರ್ಶನದ ದಿನಾಂಕ: 25-ಫೆಬ್ರವರಿ 2026 ಮತ್ತು 26-ಫೆಬ್ರವರಿ-2026

PREV
Read more Articles on
click me!

Recommended Stories

ಶಿಡ್ಲಘಟ್ಟ ಪೌರಾಯುಕ್ತೆಗೆ ರೌಡಿ ದರ್ಪ ತೋರಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನಿಂದ ಕ್ಷಮೆ ಕೇಳಿಸಿದ ಸುವರ್ಣ ನ್ಯೂಸ್!
ಕೆಎಸ್‌ಸಿಸಿಎಫ್ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ, 34 ಸಹಾಯಕ ಹುದ್ದೆಗಳಿಗೆ ನೇಮಕಾತಿ!