BBMP Recruitment 2023: ಬರೋಬ್ಬರಿ 3673 ಪೌರ ಕಾರ್ಮಿಕ ಭರ್ತಿಗೆ ಅರ್ಜಿ ಆಹ್ವಾನ

By Gowthami K  |  First Published Jan 15, 2023, 5:17 PM IST

ಬಿಬಿಎಂಪಿಯ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಒಟ್ಟು 3,673 ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜ.16ರಿಂದ 30ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.


ಬೆಂಗಳೂರು (ಜ.15): ಬಿಬಿಎಂಪಿಯ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಒಟ್ಟು 3,673 ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜ.16ರಿಂದ 30ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ನೇಮಕಾತಿಯ ಅಧಿಸೂಚನೆಯನ್ನು ಬಿಬಿಎಂಪಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಾಲಿಕೆಯ ಆಯಾ ವಾರ್ಡ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಘನತ್ಯಾಜ್ಯ ನಿರ್ವಹಣೆ) ಅವರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅದೇ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಗೆ ಸಲ್ಲಿಕೆ ಮಾಡಬೇಕು. ಜ.16ರ ಬೆಳಗ್ಗೆ 10ರಿಂದ ಅರ್ಜಿ ವಿತರಣೆ ಮಾಡಲಾಗುತ್ತದೆ. ಜ.30 ಸಂಜೆ 5ರ ಒಳಗೆ ಭರ್ತಿ ಮಾಡಿದ ಅರ್ಜಿ ಹಾಗೂ ಸೂಚಿಸಿದ ದಾಖಲೆಗಳೊಂದಿಗೆ ಸಲ್ಲಿಸಿ ಸ್ವೀಕೃತಿ ಪಡೆಯಲು ಸೂಚಿಸಲಾಗಿದೆ.

ನೇಮಕಾತಿಗೆ ಅಧಿಸೂಚನೆ ಹೊರಡಿಸಲಾದ 3,673 ಹುದ್ದೆಗಳ ಪೈಕಿ 3,243 ಹುದ್ದೆಗಳನ್ನು ಸಾಮಾನ್ಯ ಹುದ್ದೆಗಳಾಗಿದ್ದು, ಉಳಿದ 430 ಹುದ್ದೆಗಳು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

Latest Videos

undefined

ಷರತ್ತು ಸಡಿಲ: ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವ ವಿಶೇಷ ನೇಮಕಾತಿ ಆಗಿರುವುದರಿಂದ ರಾಜ್ಯ ಸರ್ಕಾರ ಈಗಾಗಲೇ ಹಲವು ನೇಮಕಾತಿ ಷರತ್ತುಗಳನ್ನು ಒಂದು ಬಾರಿಗೆ ಸಡಿಲಗೊಳಿಸಲಾಗಿದೆ. ಕಾಯಂಗೊಳಿಸುವ ನೇಮಕಾತಿ ವೇಳೆ ಸರ್ಕಾರದ ಮೀಸಲಾತಿ ನಿಯಮಕ್ಕೆ ಅನುಗುಣವಾಗಿ ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗದ ಪೌರ ಕಾರ್ಮಿಕರು ಲಭ್ಯವಿಲ್ಲದ ಪಕ್ಷದಲ್ಲಿ ಒಂದು ಬಾರಿ ವಿನಾಯಿತಿಯಡಿ ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಬದಲಾಗಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡದ ಪೌರಕಾರ್ಮಿಕರನ್ನು ನೇಮಕ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಹತ್ತಾರು ವರ್ಷದಿಂದ ಗುತ್ತಿಗೆ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದವರ ಅನುಕೂಲಕ್ಕಾಗಿ ನೇಮಕಾತಿ ವಯೋಮಿತಿಯನ್ನು ಗರಿಷ್ಠ 55 ವರ್ಷಕ್ಕೆ ನಿಗದಿ ಪಡಿಸಲಾಗಿದೆ. ವಯಸ್ಸು ದೃಢಿಕರಣಕ್ಕೆ ಅರ್ಜಿ ಸಲ್ಲಿಸುವ ವೇಳೆ ಶೈಕ್ಷಣಿಕ ದಾಖಲೆಗಳು, ಆಧಾರ್‌ ಕಾರ್ಡ್‌, ಮತದಾರ ಗುರುತಿನ ಚೀಟಿ ಹಾಗೂ ಪಡಿತರ ಚೀಟಿಯ ದಾಖಲೆಗಳಲ್ಲಿ ಯಾವುದಾದರೂ ದಾಖಲೆ ಸಲ್ಲಿಸಬೇಕಿದೆ.

2 ವರ್ಷ ಕನಿಷ್ಠ ಸೇವೆ ಕಡ್ಡಾಯ: ಕನಿಷ್ಠ ಎರಡು ವರ್ಷ ಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸಿದ ಪೌರಕಾರ್ಮಿಕರು ಕಾಯಂಗೊಳಿಸುವ ನೇಮಕಾತಿ ವೇಳೆ ಅರ್ಜಿ ಸಲ್ಲಿಸಲ್ಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸುವ ವೇಳೆ ಕಡ್ಡಾಯವಾಗಿ ನೇರ ವೇತನ ಪಾವತಿ ಅಡಿ ಸಂಬಳ ಪಡೆದ ದಾಖಲಾತಿ, ಪಿಎಫ್‌, ಇಎಸ್‌ಐ ದಾಖಲಾತಿ, ಏಜೆನ್ಸಿ ಮೂಲಕ ವೇತನ ಪಡೆದ ದಾಖಲಾತಿಯನ್ನು ಸಲ್ಲಿಸಬೇಕು. ನೇಮಕಾತಿ ವೇಳೆ ಹೆಚ್ಚಿನ ಅವಧಿ ಸೇವೆ ಸಲ್ಲಿಸಿದ ಪೌರಕಾರ್ಮಿಕರನ್ನು ಪರಿಗಣಿಸಬೇಕು. ಸೇವಾವಧಿ ಒಂದೇ ಇದ್ದರೆ ಹೆಚ್ಚಿನ ವಯಸ್ಸು ಪರಿಗಣಿಸಬೇಕು. ಒಂದು ವೇಳೆ ಹುಟ್ಟಿದ ದಿನಾಂಕ ಮತ್ತು ಸೇವಾವಧಿ ಒಂದೇ ಆಗಿದ್ದರೆ ಲಾಟರಿ ಮೂಲಕ ಆಯ್ಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಕನ್ನಡ ಭಾಷೆ ಮಾತನಾಡಬೇಕು.

SOUTH CENTRAL RAILWAY RECRUITMENT 2023: ಬರೋಬ್ಬರಿ 4103 ಹುದ್ದೆಗಳಿಗೆ  ದಕ್ಷಿಣ ಮಧ್ಯ ರೈಲ್ವೆ ನೇಮಕಾತಿ

ಪೌರಕಾರ್ಮಿಕರ ಕಾಯಂಗೆ ಯಾವುದೇ ಶೈಕ್ಷಣಿಕ ಅರ್ಹತೆ ನಿಗದಿ ಪಡಿಸಿಲ್ಲ. ಆದರೆ, ಕನ್ನಡ ಭಾಷೆ ಮಾತನಾಡುವುದಕ್ಕೆ ತಿಳಿದಿರಬೇಕು. ಜತೆಗೆ ದೈಹಿಕ ದೃಢತೆಯು ಇರಬೇಕು. ಈ ಬಗ್ಗೆ ಸರ್ಕಾರಿ ಆಸ್ಪತ್ರೆಯಿಂದ ವೈದ್ಯಕೀಯ ಪ್ರಮಾಣ ಸಲ್ಲಿಕೆ ಮಾಡಬೇಕೆಂಬ ನಿಯಮ ವಿಧಿಸಲಾಗಿದೆ.

BMRCL RECRUITMENT 2023: ನಮ್ಮ ಮೆಟ್ರೋದಲ್ಲಿ ಹಲವು ಹುದ್ದೆಗಳು, 1,65,000 ರೂ ವರೆಗೂ ವೇತನ

ನೇಮಕಾತಿಗೆ ಸಮಿತಿ ರಚನೆ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಕಾಯಂಗೊಳಿಸುವುದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ 10 ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಪೌರಕಾರ್ಮಿಕರಿಗೆ .17 ಸಾವಿರದಿಂದ .28,950 ರವರೆಗೆ ವೇತನ ನಿಗದಿ ಪಡಿಸಲಾಗಿದೆ.

click me!