ಅನೇಕ ವರ್ಷಗಳಿಂದ ಬಿಬಿಎಂಪಿ ವಿವಿಧ ಭಾಗದಲ್ಲಿ ಖಾಲಿ ಇರುವ 1,032 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.
ಬೆಂಗಳೂರು (ಜು.3): ಅನೇಕ ವರ್ಷಗಳಿಂದ ಸಹಾಯಕ ಎಂಜಿನಿಯರ್, ಉಪನ್ಯಾಸಕರು ಸೇರಿದಂತೆ ಬಿಬಿಎಂಪಿ ವಿವಿಧ ಭಾಗದಲ್ಲಿ ಖಾಲಿ ಇರುವ 1,032 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ, ಸಹಾಯಕ ಎಂಜಿನಿಯರ್, ಪರಿಸರ ಎಂಜಿನಿಯರ್, ಉಪನ್ಯಾಸಕರು, ಮುಖ್ಯ ಶಿಕ್ಷಕರು, ಕಿರಿಯ ಕಾನೂನು ಅಧಿಕಾರಿ, ಕಿರಿಯ ಎಂಜಿನಿಯರ್, ನೆಟ್‌ವರ್ಕ್ ಎಂಜಿನಿಯರ್, ಕಂದಾಯ ನಿರೀಕ್ಷಕರು ಸೇರಿದಂತೆ ವಿವಿಧ ವಿಭಾಗದಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
undefined
ಅಲಾರಂ ಹೊಡೆದಾಗಲ್ಲೆಲ್ಲಾ ಏಳ್ಬೇಕು, ತಿಂಗಳಿಗೆ ಭರ್ತಿ 26 ಲಕ್ಷ ಸಂಬಳ !
ಬಿಬಿಎಂಪಿಗೆ 12,827 ಹುದ್ದೆಗಳು ಮಂಜೂರು ಆಗಿದ್ದರೂ, 7,369 ಹುದ್ದೆಯಲ್ಲಿರುವ ಅಧಿಕಾರಿ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 8,063 ಹುದ್ದೆ ಖಾಲಿಯಿವೆ. ಎರವಲು ಸೇವೆ ಮೇಲೆ ಕಾಮಗಾರಿ ವಿಭಾಗದಲ್ಲಿ 340 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದ ಮೇಲೆ 22,105 ಮಂದಿ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಈ ಪೈಕಿ ಸುಮಾರು 18 ಸಾವಿರ ಪೌರಕಾರ್ಮಿಕರನ್ನು ನೇರ ವೇತನದಡಿ ನೇಮಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತಾವನೆ ಸಲ್ಲಸಿದ 1032 ಹುದ್ದೆ ವಿವರ
ಗ್ರೂಪ್‘ಬಿ’ ಟೆಕ್ನಿಕಲ್ 107 ಹುದ್ದೆಗಳು. ನಾನ್ ಟೆಕ್ನಿಕಲ್ 24 ಹುದ್ದೆಗಳು
ಗ್ರೂಪ್ ‘ಸಿ’ ಟೆಕ್ನಿಕಲ್ 200 ಹುದ್ದೆಗಳು. ನಾನ್ ಟೆಕ್ನಿಕಲ್ 701 ಹುದ್ದೆಗಳು
ಒಟ್ಟು ಟೆಕ್ನಿಕಲ್ 307 ಹುದ್ದೆಗಳು ಮತ್ತು ನಾನ್ ಟೆಕ್ನಿಕಲ್ 725 ಹುದ್ದೆಗಳು
IAF Agniveer Recruitment 2022; ಅಗ್ನಿಪಥಕ್ಕೆ 2 ಲಕ್ಷ ಅರ್ಜಿ, ಜು.5ರಂದು ಪ್ರಕ್ರಿಯೆ ಅಂತ್ಯ
ಅದರಲ್ಲೂ 370 ಸಿಬ್ಬಂದಿ ನೇಮಕವಾಗಬೇಕಾದ ಕಂದಾಯ ಇಲಾಖೆಗಳಲ್ಲಿ ಕೊರತೆ ಇದೆ. ತೋಟಗಾರಿಕೆ ಇಲಾಖೆಯಲ್ಲಿ ಇನ್ನೂ 757 ಹುದ್ದೆಗಳು ಭರ್ತಿಯಾಗಬೇಕಿದ್ದು, ಆರೋಗ್ಯದಲ್ಲಿ 658 ಹುದ್ದೆಗಳು ಮತ್ತು ಎಂಜಿನಿಯರಿಂಗ್ ಸೆಲ್‌ನಲ್ಲಿ 3,673 ಹುದ್ದೆಗಳು ಭರ್ತಿಯಾಗಿಲ್ಲ,'' ಎಂದು ವಿವರಿಸಿದರು. ಕೊರತೆ ನೀಗಿಸಲು ಹಲವರನ್ನು ಬಿಬಿಎಂಪಿಗೆ ನಿಯೋಜಿಸಲಾಗುತ್ತಿದೆ; 340 ನೌಕರರು ಡೆಪ್ಯೂಟೇಶನ್‌ನಲ್ಲಿದ್ದಾರೆ ಮತ್ತು 22,105 ಹೊರಗುತ್ತಿಗೆ ಸಿಬ್ಬಂದಿಯ ಭಾಗವಾಗಿದ್ದಾರೆ. ಅಧಿಕಾರಿಗಳು ಬಿ.ಎಂ ಮಾತನಾಡಿ, ಸಿಬ್ಬಂದಿ ಕೊರತೆಯಿಂದ ಪಾಲಿಕೆ ಕಾಮಗಾರಿ ಮೇಲೆ ಪರಿಣಾಮ ಬೀರುತ್ತಿದೆ.
ಇದೀಗ ಕೆರೆಗಳ ಸರ್ವೆ ಕಾರ್ಯವನ್ನು ವಿಶೇಷ ತಹಶೀಲ್ದಾರ್‌ಗೆ ವಹಿಸಲು ಬಿಬಿಎಂಪಿ ಮುಂದಾಗಿದೆ. ಸಿವಿಕ್ ಏಜೆನ್ಸಿಯ ವ್ಯಾಪ್ತಿಯಲ್ಲಿ 201 ಕೆರೆಗಳಿವೆ. 201 ಜಲಮೂಲಗಳ ಪೈಕಿ 19 ಸರೋವರಗಳನ್ನು ಬತ್ತಿ ಹೋದ ಕೆರೆಗಳೆಂದು ಪರಿಗಣಿಸಲಾಗಿದೆ. ಸುಮಾರು 161 ಕೆರೆಗಳನ್ನು ಮಿಶ್ರ ಅತಿಕ್ರಮಣ ಜಲಮೂಲಗಳಾಗಿ ವರ್ಗೀಕರಿಸಲಾಗಿದೆ. 161 ಕೆರೆಗಳ ಪೈಕಿ 26 ಸರ್ಕಾರಿ ಸಂಸ್ಥೆಗಳಿಂದ ಒತ್ತುವರಿಯಾಗಿದ್ದು, ಆರು ಕೊಳಚೆ ಪ್ರದೇಶಗಳಾಗಿವೆ ಮತ್ತು 129 ಭಾಗಶಃ ಒತ್ತುವರಿಯಾಗಿದೆ.
ಬಿಬಿಎಂಪಿಗೆ ಜು.31ರ ಡೆಡ್‌ಲೈನ್: ನಗರದ ದಾಸರಹಳ್ಳಿ ವಲಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಜು. 31 ರೊಳಗೆ ಪೂರ್ಣಗೊಳಿಸುವಂತೆ ಬಿಬಿಎಂಪಿಗೆ ಹೈಕೋರ್ಚ್ ನಿರ್ದೇಶಿಸಿದೆ.
ದಾಸರಹಳ್ಳಿ ವಲಯದಲ್ಲಿ ಹದಗೆಟ್ಟರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಅಶ್ವತ್‌್ಥ ನಾರಾಯಣ ಚೌಧರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ ಹಾಜರಾಗಿ, ದಾಸರಹಳ್ಳಿ ವಲಯದಲ್ಲಿ ಕೆಟ್ಟಸ್ಥಿತಿಯಲ್ಲಿರುವ ರಸ್ತೆಗಳ ಅಭಿವೃದ್ಧಿಗೆ ಕಾರ್ಯ ಯೋಜನೆ ರೂಪಿಸಲಾಗಿದೆ. ಅದರ ಪ್ರಕಾರ ಮೇ 30ರೊಳಗೆ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಆದರೆ, ಮಳೆ ಮತ್ತಿತರ ಕಾರಣಗಳಿಂದ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಲು ಸಾಧ್ಯವಾಗಿಲ್ಲ. ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪೂರ್ಣಗೊಳಿಸಲು 45 ದಿನ ಕಾಲಾವಕಾಶ ನೀಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಅದಕ್ಕೆ ನ್ಯಾಯಪೀಠ, ಅಷ್ಟುಸಮಯಾವಕಾಶ ನೀಡಲು ಸಾಧ್ಯವಿಲ್ಲ. ಒಂದು ತಿಂಗಳು ಕಾಲಾವಕಾಶ ನೀಡಲಾಗುವುದಷ್ಟೇ. ಜು.31ರೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ, ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು