3,500 ಪೇದೆ ಹುದ್ದೆಗೆ 3.5 ಲಕ್ಷ ಜನ ಪರೀಕ್ಷೆ..!

By Kannadaprabha News  |  First Published Oct 25, 2021, 7:40 AM IST

* ಪೊಲೀಸ್‌ ಪೇದೆ ಹುದ್ದೆ ಪರೀಕ್ಷೆ ಸುಸೂತ್ರ
* 3533 ಪೇದೆ ಹುದ್ದೆಗೆ ಪರೀಕ್ಷೆ ಬರೆದ 3.50 ಲಕ್ಷ ಅಭ್ಯರ್ಥಿಗಳು
* ರಾಜ್ಯಾದ್ಯಂತ 639 ಕೇಂದ್ರಗಳಲ್ಲಿ ನಡೆದ ಪರೀಕ್ಷೆ
 


ಬೆಂಗಳೂರು(ಅ.25):  ರಾಜ್ಯ ಪೊಲೀಸ್‌ ಇಲಾಖೆಯ(Police Department) 3,533 ನಾಗರಿಕ ಪೊಲೀಸ್‌ ಕಾನ್ಸ್‌ಟೇಬಲ್‌(Police Constable) ಹುದ್ದೆಗಳ ನೇಮಕ ಸಂಬಂಧ ಭಾನುವಾರ ಸುಗಮವಾಗಿ ಲಿಖಿತ ಪರೀಕ್ಷೆ ನಡೆಸಲಾಯಿತು.

ಬೆಳಗ್ಗೆ 12 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ನಗರದ 76 ಪರೀಕ್ಷಾ ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ 639 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ(Written Test) ಜರುಗಿತು. ಸುಮಾರು 3.50 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು(Candidates) ಪರೀಕ್ಷೆ(Exam) ಬರೆದರು. ಬೆಂಗಳೂರು(Bengaluru)ನಗರದಲ್ಲಿ 76 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 43,800 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದರು. ಪರೀಕ್ಷೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಅಭ್ಯರ್ಥಿಗಳು ಬೆಳಗ್ಗೆ 11.30ರ ಸುಮಾರಿಗೆ ಪರೀಕ್ಷಾ ಕೇಂದ್ರಗಳ ಬಳಿ ಜಮಾಯಿಸಿದ್ದರು.

Tap to resize

Latest Videos

undefined

4135 ಪ್ರೊಬೇಷನರಿ ಆಫೀಸರ್, ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕ ಪ್ರಕ್ರಿಯೆ ಆರಂಭಿಸಿದ IBPS

ಪರೀಕ್ಷಾ ಕೇಂದ್ರಗಳ ಬಳಿ ಯಾವುದೇ ಅಕ್ರಮಗಳಿಗೆ(Illegal) ಅವಕಾಶವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಪರೀಕ್ಷಾ ಕೇಂದ್ರ(Examination Center) ಪವೇಶಕ್ಕೂ ಮುನ್ನ ಪೊಲೀಸರು(Police) ಅಭ್ಯರ್ಥಿಗಳನ್ನು ತಪಾಸಣೆ ಮಾಡಿ ಬಳಿಕ ಒಳಬಿಟ್ಟರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದರು. ಒಂದೂವರೆ ತಾಸಿನ ಲಿಖಿತ ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರದ ಸುತ್ತಮುತ್ತ ಅನ್ಯ ವ್ಯಕ್ತಿಗಳ ಸಂಚಾರ ನಿರ್ಬಂಧಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭಾರಿ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಗಮಿಸಿದರು.
 

click me!