15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ, ಪರೀಕ್ಷೆ ದಿನಾಂಕವೂ ಪ್ರಕಟ

Published : Mar 18, 2022, 06:18 PM ISTUpdated : Mar 18, 2022, 06:19 PM IST
15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ, ಪರೀಕ್ಷೆ ದಿನಾಂಕವೂ ಪ್ರಕಟ

ಸಾರಾಂಶ

* ಶಿಕ್ಷಕರ ಹುದ್ದೆ ಕನಸು ಕಂಡಿದ್ದ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ * ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ  * ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ

ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್‌ ನ್ಯೂಸ್,  ಬೆಂಗಳೂರು

ಬೆಂಗಳೂರು, (ಮಾ.19): ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ಇದೆ‌. ಓದಿರುವವರಿಗೆ ಉದ್ಯೋಗಗಳ ಕೊರತೆ ಇದೆ‌. ಈ ಎರಡು ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗಿರುವ ಶಿಕ್ಷಣ ಇಲಾಖೆ (Karnataka Education) ಭರ್ಜರಿ‌ ಸಿಹಿ ಸುದ್ದಿ ನೀಡಿದೆ‌. ಶಿಕ್ಷಣ ಗುಣಮಟ್ಟ ಏರಿಸಲು ಹಾಗೂ ವಿದ್ಯಾವಂತರಿಗೆ ಉದ್ಯೋಗಾವಕಾಶ ಒದಗಿಸಲು ಪಣತೊಟ್ಟಿರುವ ಸರ್ಕಾರ ಬಿಗ್ ಗಿಫ್ಟ್ ನೀಡಲು ಮುಂದಾಗಿದ್ದು,  15 ಸಾವಿರ ಶಿಕ್ಷಕರ ನೇಮಕಾತಿ (Teachers Recruitment) ಮಾಡಿಕೊಳ್ಳಲು ಮಾರ್ಚ್ 21 ಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಲಿದೆ.

ಒಂದುಕಡೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದಿದ್ದು,‌ ಮಕ್ಕಳ ಭವಿಷ್ಯ ಕುಂಠಿತ ಒಂದ್ಕಡೆಯಾದ್ರೆ, ಇನ್ನೊಂದೆಡೆ ವಿದ್ಯೆಯಿದ್ದರು, ಉದ್ಯೋಗ ಧಕ್ಕದೆ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆಯು ಹೆಚ್ಚಿದೆ‌. ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಶಿಕ್ಷಣ ಇಲಾಖೆ, ಸಾಕಷ್ಟು ಬದಲಾವಣೆ ಮಾಡಿ ಸರ್ಕಾರಿ ಶಿಕ್ಷಕರ ಸ್ಥಾನಕ್ಕೆ ಅರ್ಜಿ ಆಹ್ವಾನಿಸಲು ಮುಂದಾಗಿದೆ.

Government Jobs: ಕರ್ನಾಟಕದಲ್ಲಿ 2,52,902 ಸರ್ಕಾರಿ ಹುದ್ದೆ ಖಾಲಿ: ಬೊಮ್ಮಾಯಿ

ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿ) 15,000 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಮಾಡಲು ಶಿಕ್ಷಣ ಸಚಿವ ಬಿಸಿ ನಾಗೇಶ್(BC Nagesh) ಇಂದು(ಶುಕ್ರವಾರ)‌ ಚಾಲನೆ ನೀಡಿದರು. ಪ್ರಸುತ್ತ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗಕ್ಕೆ 5000 ಹುದ್ದೆಗಳು ಸೇರಿ ಒಟ್ಟು 15,000 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ. ಶಿಕ್ಷಕರ ಕೊರತೆ ನೀಗಿಸಲು ಜೊತೆಗೆ ಈ ವಿಶೇಷವಾಗಿ  ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬಿಎಡ್ , ಟಿಇಟಿ ಮಾಡಿದ್ದರೆ ಹಾಗೂ ಮಂಗಳ ಮುಖಿಯರಿಗೂ ಪ್ರತಿ ಪ್ರವರ್ಗದಲ್ಲಿ ಶೇ. 1 ರಷ್ಟು ಸಿಇಟಿ ಪರೀಕ್ಷೆಗೆ ಅವಕಾಶ ಇರಲಿದೆ.‌

ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯುವ ವಿಧಾನ
* ಮಾರ್ಚ್ 21ರಂದು ನೇಮಕಾತಿ ಅಧಿಸೂಚನೆ 
* ಅಭ್ಯರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶ
* ಮಾರ್ಚ್  23 ರಿಂದ ಏಪ್ರಿಲ್ 22ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ
* ನೇಮಕಾತಿ ಪರೀಕ್ಷೆ ಮೇ 21- 22 ಎರಡು ದಿನ ನಡೆಯಲಿದೆ
* ಆಂಗ್ಲಭಾಷೆ, ಗಣಿತ ಮತ್ತು ವಿಜ್ಞಾನ - ಜೀವವಿಜ್ಞಾನ, ಸಮಾಜಪಾಠಗಳು ಶಿಕ್ಷಕರ ಹುದ್ದೆಗಳಿಗೆ ಅವಕಾಶ 
* ಒಟ್ಟು 400 ಅಂಕಗಳಿಗೆ ಪರೀಕ್ಷೆ

*ಜನರಲ್ ನಾಲೆಡ್ಜ್ 150, ವಿಷಯವಾರು 150, ಯಾವ ಭಾಷೆಗೆ ಟೀಚ್ ಮಾಡ್ತಾರೆ ಆ ವಿಷಯ -100
*ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬಿಎಡ್ , ಟಿಇಟಿ ಮಾಡಿದ್ದರೆ ಪರೀಕ್ಷೆಗೆ ಅವಕಾಶ

* ಮಂಗಳ ಮುಖಿಯರಿಗೂ ಪ್ರತಿ ಪ್ರವರ್ಗದಲ್ಲಿ ಶೇ. 1 ರಷ್ಟು  ಸಿಇಟಿ ಪರೀಕ್ಷಗೆ ಅವಕಾಶ

6 ರಿಂದ 8 ತಿಂಗಳ ಒಳಗೆ ಶಿಕ್ಷಕರ ಹುದ್ದೆ ಭರ್ತಿ

ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಯಲ್ಲಿ ನಡೆಯಲಿದೆ ಪರೀಕ್ಷೆ

ಇನ್ನೂ ಕೋವಿಡ್ ಕಾರಣಕ್ಕೆ ಈ ಸಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ, ವರ್ಗ, ಪ್ರವರ್ಗ-1, ವಿಕಲಚೇತನರಿಗೆ ಈ ಹಿಂದೆ 45 ವರ್ಷ ಇದ್ದ ವಯೋಮಿತಿಯನ್ನ 47ಕ್ಕೆ ಏರಿಸಲಾಗಿದೆ. ಇನ್ನು ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ 43 ವರ್ಷ ಇದ್ದಿದ್ದು 45ಕ್ಕೆ ಹಾಗೂ ಸಾಮಾನ್ಯ ವರ್ಗದವರು 40 ವರ್ಷದಿಂದ 42 ವರ್ಷಕ್ಕೆ ಏರಿಕೆ ಮಾಡಲಾಗಿದೆ.

ಅಲ್ಲದೆ ಜೀವವಿಜ್ಞಾನ ಶಿಕ್ಷಕ (Biological Science): ಹುದ್ದೆಗೆ ಅವಕಾಶ ಇದ್ದು, ಬಿ.ಎಸ್.ಸಿ. ಪದವಿಯಲ್ಲಿ ರಸಾಯನಶಾಸ್ತ್ರ ಕಡ್ಡಾಯವಾಗಿದ್ದು, ಈ ವಿಷಯದೊಂದಿಗೆ ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ತಳಿಶಾಸ್ತ್ರ, ಸೂಕ್ಷ್ಮಜೀವಿಶಾಸ್ತ್ರ ಜೈವಿಕ ತಂತ್ರಜ್ಞಾನ/ಪರಿಸರ ವಿಜ್ಞಾನ/ ರೇಷ್ಮೆ ಕೃಷಿ ವಿಷಯಗಳನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಹೊಸದಾಗಿ ಅವಕಾಶ ನೀಡಲಾಗಿದೆ. ಹಾಗೇ ಗಣಿತ ಮತ್ತು ವಿಜ್ಞಾನ ಶಿಕ್ಷಕ ಹುದ್ದೆಗೆ ನಿಗದಿಪಡಿಸಲಾಗಿದ್ದ ವಿಷಯ ಸಮೂಹಕ್ಕೆ ಹೆಚ್ಚುವರಿ ವಿಷಯಗಳ ಸೇರ್ಪಡೆ ಮಾಡಲಾಗಿದೆ.‌ ಒಟ್ನಲ್ಲಿ‌ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಗೆ  ಮುಂದಾಗಿದ್ದು, ಮಕ್ಕಳಿಗೆ ಶಿಕ್ಷಣ ಭದ್ರ ಬುನಾದಿ ಆಗಲಿದೆ.
 

PREV
Read more Articles on
click me!

Recommended Stories

ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!
ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?