ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಯುವರಾಜ್ ಸಿಂಗ್ ವಿಶೇಷ ಮನವಿ!

By Web Desk  |  First Published Sep 24, 2019, 5:56 PM IST

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ  ಯುವರಾಜ್ ಸಿಂಗ್ ತಂಡದ ಮ್ಯಾನೇಜ್ಮೆಂಟ್ ಬಳಿ ವಿಶೇಷ ಮನವಿ ಮಾಡಿದ್ದಾರೆ. ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿ ಮುಗಿದ ಬೆನ್ನಲ್ಲೇ ಯುವಿ ಮನವಿ ಬಿಸಿಸಿಐ ಹಾಗೂ ಟೀಂ ಮ್ಯಾನೇಜ್ಮೆಂಟ್‌‌ಗೆ ಹೊಸ ಹುರುಪು ನೀಡಿದೆ.


ನವದೆಹಲಿ(ಸೆ.24): ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಪ್ರದರ್ಶನದ ಪರಾಮರ್ಶೆಗಳು ನಡೆಯುತ್ತಿದೆ. ಭಾರತದ ಮಧ್ಯಮ ಕ್ರಮಾಂಕದ ಸಮಸ್ಯೆ ಇನ್ನೂ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಟೀಂ ಇಂಡಿಯಾ ಮಿಡ್ಲ್ ಆರ್ಡರ್‌ನಲ್ಲಿ ಕಮಾಲ್ ಮಾಡಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂಡದ ಮ್ಯಾನೇಜ್ಮೆಂಟ್ ಬಳಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಯುವರಾಜ್ ಸಿಂಗ್ 6,6,6,6,6,6 ಬಾರಿಸಿ 12 ವರ್ಷ..!

Latest Videos

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ವಿಕೆಟ್ ಕೀಪರ್ ರಿಷಬ್ ಪಂತ್ ಮೇಲೆ ಒತ್ತಡ ಹೇರಬಾರದು. ಧೋನಿ ಬಳಿಕ ಭಾರತ ತಂಡ ಮತ್ತೊರ್ವ ಖಾಯಂ ವಿಕೆಟ್ ಕೀಪರ್ ಕಂಡುಕೊಳ್ಳಬೇಕಿದೆ. ಇದಕ್ಕಾಗಿ ರಿಷಬ್ ಪಂತ್ ಮೇಲೆ ಹೆಚ್ಚಿನ ಒತ್ತಡ ಸಲ್ಲದು. ಪಂತ್ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್. ಆದರೆ ಪಂತ್‌ಗೆ ನೈಜ ಆಟ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ ಎಂದು ಯುವಿ ಹೇಳಿದ್ದಾರೆ. 

ಇದನ್ನೂ ಓದಿ: ಪಂತ್‌ಗೆ ಖಡಕ್‌ ಎಚ್ಚ​ರಿಕೆ ಕೊಟ್ಟ ರವಿ ಶಾಸ್ತ್ರಿ!

ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಪಂತ್ ಮೇಲೆ ಒತ್ತಡ ಹಾಕವುದನ್ನು ನಿಲ್ಲಿಸಬೇಕು. ಪಂತ್ ಬೆನ್ನಿಗೆ ನಿಂತು ಬೆಂಬಲ ವ್ಯಕ್ತಪಡಿಸಿದರೆ, ಭವಿಷ್ಯದಲ್ಲಿ ಭಾರತಕ್ಕೆ ವಿಕೆಟ್ ಕೀಪರ್ ಸಮಸ್ಯೆ ಎದುರಾಗುವುದಿಲ್ಲ ಎಂದು ಯುವಿ ಹೇಳಿದ್ದಾರೆ.  ಸೌತ್ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಹಾಗೂ ಬ್ಯಾಟಿಂಗ್ ಕೋಚ್ ವಿಕ್ರಮ ರಾಥೋರ್ ಪಂತ್‌ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. 

ಇದನ್ನೂ ಓದಿ: ರಿಷಭ್ ಪಂತ್ ಕಳಪೆ ಬ್ಯಾಟಿಂಗ್; ಅಭಿಮಾನಿಗಳಿಂದ ಕ್ಲಾಸ್!

ಪಂತ್ ಏಕದಿನ ಬ್ಯಾಟಿಂಗ್ ಸರಾಸರಿ 22.9 ಹಾಗೂ ಟಿ20 ಬ್ಯಾಟಿಂಗ್ ಸರಾಸರಿ 20.31.  ವೆಸ್ಟ್ ಇಂಡೀಸ್ ಪ್ರವಾಸದಲ್ಲಿನ ಏಕದಿನ ಪಂದ್ಯದ 2 ಇನ್ನಿಂಗ್ಸ್‌ಗಳಲ್ಲಿ  20 ರನ್ ಸಿಡಿಸಿದ ಪಂತ್ ನಿರಾಸೆ ಅನುಭವಿಸಿದ್ದರು. ಇನ್ನು ಸೌತ್ ಆಫ್ರಿಕಾ ವಿರುದ್ಧದ 2 ಟಿ20 ಪಂದ್ಯದಲ್ಲಿ ಪಂತ್ ಅಬ್ಬರಿಸಲೇ ಇಲ್ಲ. ಮೊಹಾಲಿ ಪಂದ್ಯದಲ್ಲಿ 4 ರನ್ ಹಾಗೂ ಬೆಂಗಳೂರು ಪಂದ್ಯದಲ್ಲಿ 19 ರನ್ ಸಿಡಿಸಿದರು.
 

click me!