ಅಂತಾರಾಷ್ಟ್ರೀಯ ಕ್ರಿಕೆಟ್‍‌ಗೆ ಯುವರಾಜ್ ಶೀಘ್ರದಲ್ಲೇ ನಿವೃತ್ತಿ?

By Web Desk  |  First Published May 20, 2019, 9:25 AM IST

ಟೀಂ ಇಂಡಿಯಾ ಹಿರಿಯ ಆಲ್ರೌಂಡರ್, ವಿಶ್ವಕಪ್ ಹೀರೋ ಪ್ರತಿಯೊಬ್ಬರಿಗೂ ಮಾದರಿ, ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವು ಬದುಕಿನ  ನಡೆವೆ ಹೋರಾಟ ನಡೆಸಿ ಮತ್ತೆ ತಂಡಕ್ಕೆ  ಕಮ್‌ಬ್ಯಾಕ್ ಮಾಡಿದ  ಹೋರಾಟಗಾರ. ಇದೀಗ  ಯುವಿ ನಿವೃತ್ತಿ ನಿರ್ಧಾರ ಮಾಡಿದ್ದಾರೆ.


ನವದೆಹಲಿ(ಮೇ.20): ಟೀಂ ಇಂಡಿಯಾ ಕ್ರಿಕೆಟ್‌ನಿಂದ ದೂರ ಉಳಿದಿರುವ ಯುವರಾಜ್ ಸಿಂಗ್, ಈ ಬಾರಿ ಐಪಿಎಲ್ ಟೂರ್ನಿಯಲ್ಲೂ ಹೆಚ್ಚಿನ ಅವಕಾಶ ಪಡೆದಿಲ್ಲ. ಇದೀಗ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡೋ ಮಾತು ಕಷ್ಟ ಅನ್ನೋದು ಯುವಿ ಅರಿತಿದ್ದಾರೆ.  ಹೀಗಾಗಿ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ನಿವೃತ್ತಿ ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳಿಗೆ ಎದುರಾಗಲಿದೆ ಶಾಕ್- ಕುಂಬ್ಳೆ ಎಚ್ಚರಿಕೆ!

Latest Videos

ಭಾರತದ ದಿಗ್ಗಜ ಕ್ರಿಕೆಟಿಗ ಯುವರಾಜ್‌ ಸಿಂಗ್‌, ಐಸಿಸಿ ಮಾನ್ಯತೆ ಹೊಂದಿರುವ ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಗಂಭೀರ ಚಿಂತನೆ ನಡೆಸಿದ್ದಾರೆ. ಭಾರತ ತಂಡದ ಪರ ಆಡಲು ಮತ್ತೆ ಅವಕಾಶ ಸಿಗುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಯುವರಾಜ್‌ಗೆ ಐಪಿಎಲ್‌ನಲ್ಲೂ ಅಷ್ಟಾಗಿ ಅವಕಾಶಗಳನ್ನು ಪಡೆಯುತ್ತಿಲ್ಲ.

ಇದನ್ನೂ ಓದಿ: ಕೊಹ್ಲಿ ಕಾಲೆಳೆದ ಹಾಡ್ಜ್‌ ವಿರುದ್ಧ ನೆಟ್ಟಿಗರ ಆಕ್ರೋಶ!

 ಕೆನಡಾ, ಐರ್ಲೆಂಡ್‌, ನೆದರ್‌ಲೆಂಡ್ಸ್‌ನಲ್ಲಿ ಆರಂಭಗೊಂಡಿರುವ ಟಿ20 ಲೀಗ್‌ಗಳಲ್ಲಿ ಯುವರಾಜ್‌ರಂತಹ ದಿಗ್ಗಜ ಆಟಗಾರರಿಗೆ ಹೆಚ್ಚಿನ ಬೆಲೆ ಸಿಗಲಿದೆ. ಹೀಗಾಗಿ ಆ ಲೀಗ್‌ಗಳಲ್ಲಿ ಆಡಲು ಅನುಮತಿ ನೀಡುವಂತೆ ಬಿಸಿಸಿಐ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.

click me!