
ಮುಂಬೈ(ಜು.22): ಟೀಂ ಇಂಡಿಯಾ ಆಲ್‌ರೌಂಡರ್ ಯುವರಾಜ್ ಸಿಂಗ್ ಹಾಗೂ ವೇಗಿ ಇರ್ಫಾನ್ ಪಠಾಣ್ ಇಬ್ಬರು ಅತ್ಯುತ್ತಮ ಗೆಳೆಯರು. ಸೌರವ್ ಗಂಗೂಲಿ ನಾಯಕತ್ವದ ಟೀಂ ಇಂಡಿಯಾದಲ್ಲಿ ಯುವಿ ಹಾಗೂ ಪಠಾಣ್ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡವರು.
2007 ಟಿ20 ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಹಾಗೂ ಇರ್ಫಾನ್ ಪಠಾಣ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ ಸದ್ಯ ಇಬ್ಬರೂ ಕೂಡ ಟೀಂ ಇಂಡಿಯಾಲ್ಲಿ ಇಲ್ಲ. ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗರಾಗಿರೋ ಯುವಿ ಹಾಗೂ ಇರ್ಫಾನ್ ಇತ್ತೀಚೆಗೆ ಭೇಟಿಯಾಗಿದ್ದಾರೆ.
ಭೇಟಿ ಬಳಿಕ ಇರ್ಫಾನ್ ಪಠಾಣ್ ಸಾಮಾಜಿಕ ಜಾಲತಾಣದಲ್ಲಿ ಫೋಟ್ ಅಪ್‌ಲೋಡ್ ಮಾಡಿದ್ದಾರೆ. ಯುವಿ ಹಾಗೂ ಪಠಾಣ್ ಬೇಟಿ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.
ಇರ್ಫಾನ್ ಈ ಹಿಂದೆ ಹುಡುಗಿ ಹೆಸರನ್ನ ಯುವಿಗೆ ಸಂದೇಶ ಕಳುಹಿಸಿದ ಹಾಸ್ಯ ಘಟನೆಯನ್ನ ಅಭಿಮಾನಿಗಳು ನೆನಪಿಸಿದ್ದಾರೆ. ಹೀಗಾಗಿ ಇರ್ಫಾನ್ ಪಠಾಣ್ ಜೊತೆಗೆ ಎಚ್ಚರಿಕೆಯಿಂದರಬೇಕು ಎಂದು ಅಭಿಮಾನಿಗಳು ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ. ಅಭಿಮಾನಿಯೊರ್ವ ಟ್ವೀಟ್‌ಗೆ ಪಠಾಣ್ ಕೂಡ ನಗುವಿನ ಪ್ರತಿಕ್ರಿಯೆ ನೀಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.