ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಕೊಹ್ಲಿ ಸೈನ್ಯಕ್ಕೆ ಶಾಕ್!

By Suvarna NewsFirst Published Jul 22, 2018, 7:16 PM IST
Highlights

ಏಕದಿನ ಸರಣಿ ಸೋಲಿನ ಬಳಿಕ ಟೆಸ್ಟ್ ಸರಣಿಯಲ್ಲಿ ಶುಭಾರಂಭದ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ಆತಂಕ ಶುರುವಾಗಿದೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಸೈನ್ಯದ ಆತಂಕಕ್ಕೆ ಕಾರಣವೇನು? ಇಲ್ಲಿದೆ .

ಲಂಡನ್(ಜು.22): ಏಕದಿನ ಸರಣಿ ಸೋಲಿನ ಬಳಿಕ ವಿಶ್ರಾಂತಿಗೆ ಜಾರಿದ್ದ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿಗಾಗಿ ಅಭ್ಯಾಸ ಆರಂಭಿಸಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ.

ಆರಂಭಿಕ 3 ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ಈಗಾಗಲೇ ತಂಡ ಪ್ರಕಟಿಸಲಾಗಿದೆ. ಆರಂಭಿಕ 3 ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಿರೋ ತಂಡದಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾಗೆ ಸ್ಥಾನ ನೀಡಲಾಗಿದೆ. ಆದರೆ ಬುಮ್ರಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡೋದು ಅನುಮಾನವಾಗಿದೆ.

ಇಂಜುರಿಯಿಂದಾಗಿ ಏಕದಿನ ಸರಣಿಯಿಂದ ಹೊರಗುಳಿದ ಬುಮ್ರಾ ಶಸ್ತ್ರಿ ಚಿಕಿತ್ಸೆ ಮಾಡಲಾಗಿದೆ. ಬುಮ್ರಾ ಹೆಬ್ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆದರೆ ಈ ಶಸ್ತ್ರಚಿಕಿತ್ಸೆ ಯಶಸ್ವಿ ಚಿಕಿತ್ಸೆಯಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ ಎಂದು ಡೆಕ್ಕನ್ ಕ್ರೋನಿಕಲ್ ವರದಿ ಮಾಡಿದೆ.

ಇದನ್ನು ಓದಿ:  ಟೀಂ ಇಂಡಿಯಾಗೆ ಹಿನ್ನಡೆಯಾಗುತ್ತಾ ಭುವನೇಶ್ವರ್ ಇಂಜುರಿ ?

ಶಸ್ತ್ರ ಚಿಕಿತ್ಸೆಯಿಂದ ಇತ್ತ ಬಿಸಿಸಿಐ ಕೂಡ ತೃಪ್ತಿಗೊಂಡಿಲ್ಲ. ಸರಣಿ ಆರಂಭಕ್ಕೂ ಮುನ್ನ ಚೇತರಿಸಿಕೊಳ್ಳಬೇಕಿದ್ದ ಜಸ್‌ಪ್ರೀತ್ ಬುಮ್ರಾಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡೋದು ಅನುಮಾನವಾಗಿದೆ.

ಬುಮ್ರಾ ಅನುಪಸ್ಥಿತಿ ಟೀಂ ಇಂಡಿಯಾಗೆ ಕಾಡಲಿದೆ. ಈಗಾಗಲೇ ಭುವನೇಶ್ವರ್ ಕುಮಾರ್ ಕೂಡ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಟೀಂ ಇಂಡಿಯಾಗೆ ಪ್ರಮುಖ ಇಬ್ಬರು ವೇಗಿಗಳ ಅನುಪಸ್ಥಿತಿಯಲ್ಲಿ ಕಠಿಣ ಸವಾಲು ಎದುರಾಗಲಿದೆ.

click me!