ಮುಗಿಯಿತೇ ಟೀಂ ಇಂಡಿಯಾದ ಆಟಗಾರನ ವರ್ಣರಂಜಿತ ಕ್ರಿಕೆಟ್ ಬದುಕು..?

Published : Sep 09, 2017, 03:25 PM ISTUpdated : Apr 11, 2018, 12:44 PM IST
ಮುಗಿಯಿತೇ ಟೀಂ ಇಂಡಿಯಾದ ಆಟಗಾರನ ವರ್ಣರಂಜಿತ ಕ್ರಿಕೆಟ್ ಬದುಕು..?

ಸಾರಾಂಶ

ಯುವರಾಜ್ ಸಿಂಗ್ ಸ್ಪೂರ್ತಿದಾಯಕ ವೃತ್ತಿಬದುಕು ಅಂತ್ಯಗೊಳ್ಳುವುದತ್ತ ಸಾಗಿದೆ ಎನ್ನುವ ಚರ್ಚೆಗೆ ಮತ್ತಷ್ಟು ಇಂಬು ನೀಡುವಂತ ಪ್ರಸಂಗ ನಡೆದಿದೆ.

ಬೆಂಗಳೂರು(ಸೆ.09): ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಟೀಂ ಇಂಡಿಯಾ ಪರ ಮಹತ್ವದ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ತೆರೆಮರೆಗೆ ಸರಿಯುವ ಕಾಲ ಬಂದಿದೆಯೇ ಎಂಬ ಅನುಮಾನ ದಟ್ಟವಾಗತೊಡಗಿದೆ.

ಹೌದು, ಯುವರಾಜ್ ಸಿಂಗ್ ಸ್ಪೂರ್ತಿದಾಯಕ ವೃತ್ತಿಬದುಕು ಅಂತ್ಯಗೊಳ್ಳುವುದತ್ತ ಸಾಗಿದೆ ಎನ್ನುವ ಚರ್ಚೆಗೆ ಮತ್ತಷ್ಟು ಇಂಬು ನೀಡುವಂತ ಪ್ರಸಂಗ ನಡೆದಿದೆ. ಬಿಸಿಸಿಐ, ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯಕ್ಕಾಗಿ 14 ಮಂದಿ ಆಟಗಾರರ ಅಧ್ಯಕ್ಷರ ಇಲೆವೆನ್ ತಂಡವನ್ನು ಆಯ್ಕೆ ಮಾಡಿತ್ತು. ಇದಕ್ಕಾಗಿ ಅಗ್ರ 74 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿತ್ತು. ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್‌ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಹೀಗಾಗಿ ಯುವಿ ಅಂತರಾಷ್ಟ್ರೀಯ ಕ್ರಿಕೆಟ್ ಮುಗಿಯುವ ಸಾಧ್ಯತೆಗಳು ದಟ್ಟವಾಗ ತೊಡಗಿವೆ.

ಈ ಹಿಂದೆ ನಾಯಕ ವಿರಾಟ್ ಕೊಹ್ಲಿ ಕೂಡ ಮುಂಬರುವ 2019ರ ವಿಶ್ವಕಪ್'ಗೆ ಯುವಕರಿಗೆ ಹೆಚ್ಚು ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ಯಾಮರೋನ್ ಗ್ರೀನ್ ಬಳಿಕ ಮತ್ತೋರ್ವ ಕಾಸ್ಟ್ಲಿ ಆಟಗಾರನನ್ನು ಖರೀದಿಸಿದ ಕೋಲ್ಕತಾ! ಕೆಕೆಆರ್ ಈಗ ಮತ್ತಷ್ಟು ಬಲಿಷ್ಠ
ಗ್ರೀನ್‌ನಿಂದ ಮೊರಿಸ್‌ವರೆಗೆ, ಐಪಿಎಲ್‌ ಮಿನಿ ಹರಾಜಿನ ಅತ್ಯಂತ ದುಬಾರಿ ಪ್ಲೇಯರ್ಸ್‌!