
ಲಂಡನ್(ಸೆ. 08): ಇಂಗ್ಲೆಂಡ್'ನಲ್ಲೊಬ್ಬ ಅಪ್ರತಿಮ ಬಾಲಪ್ರತಿಭೆ ಸದ್ದು ಮಾಡುತ್ತಿದೆ. 13 ವರ್ಷದ ರೆಹಾನ್ ಅಹ್ಮದ್ ಎಂಬ ಆಲ್'ರೌಂಡರ್ ಈಗ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾನೆ. ಘಟಾನುಘಟಿ ಬ್ಯಾಟುಗಾರರ ನೆಟ್ ಪ್ರಾಕ್ಟೀಸ್'ಗೆ ಈತನ ಬೌಲಿಂಗ್ ಬೇಕೇಬೇಕು ಎಂಬಂಥ ಸ್ಥಿತಿ ಇದೆ. ಅಲಸ್ಟೇರ್ ಕುಕ್, ಜೋ ರೂಟ್ ಮೊದಲಾದ ಬ್ಯಾಟುಗಾರರಿಗೆ ಈತ ಬೌಲಿಂಗ್ ಮಾಡಿದ್ದಾನೆ. ಈತ ಲೆಗ್'ಸ್ಪಿನ್ ಆಡಲು ಬಹಳಷ್ಟು ಬ್ಯಾಟುಗಾರರು ಪರದಾಡುತ್ತಾರೆ. ಅಂದಹಾಗೆ, ಈ ಹುಡುಗ ಬೌಲಿಂಗ್ ಅಷ್ಟೇ ಅಲ್ಲ, ಬ್ಯಾಟಿಂಗ್'ನಲ್ಲೂ ಪ್ರತಿಭಾವಂತ.
ಇಂಗ್ಲೆಂಡ್'ನಲ್ಲೇ ಹುಟ್ಟಿ ಬೆಳೆದ ರೆಹಾನ್ ಅಹ್ಮದ್ ಇಂಗ್ಲೆಂಡ್'ನ ಅಂಡರ್-10 ತಂಡದಲ್ಲಿ ರೆಗ್ಯುಲರ್ ಆಗಿ ಆಡಿದ್ದಾನೆ, ಇನ್ನೂ 14 ವರ್ಷ ದಾಟದ ಬಾಲಕ ಈಗಾಗಲೇ ಅಂಡರ್-17 ತಂಡಕ್ಕೂ ಆಯ್ಕೆಯಾಗಿ ಆಡಿದ್ದಾನೆ. ಕೌಂಟಿ ಕ್ರಿಕೆಟ್ ಟೂರ್ನಿಯಲ್ಲೂ ಆಡಿದ್ದಾನೆ. ನಾಟಿಂಗ್'ಹ್ಯಾಮ್'ಶೈರ್ ಕೌಂಟಿ ತಂಡದ ಪರ ಆಡುವ ಈತ ಒಂದು ಪಂದ್ಯದಲ್ಲಿ 150 ರನ್ ಭಾರಿಸಿ ತನ್ನ ಸಾಮರ್ಥ್ಯ ನಿರೂಪಿಸಿದ್ದಾನೆ. ಆದರೆ, ಲೆಗ್ ಸ್ಪಿನ್ನಿಂಗ್ ಈತನ ಟ್ರಂಪ್ ಕಾರ್ಡ್. ಇಂಗ್ಲೆಂಡ್'ಗೆ ಬರುವ ಪ್ರವಾಸಿ ತಂಡಗಳ ಬ್ಯಾಟುಗಾರರ ಅಭ್ಯಾಸಕ್ಕೆ ನೆಟ್ ಬೌಲಿಂಗ್ ಮಾಡಲು ಈತನನ್ನು ತಪ್ಪದೇ ಕರೆಸುತ್ತಾರೆ.
ಮುಂದಿನ ಕೆಲ ವರ್ಷಗಳಲ್ಲಿ ಈ ಬಾಲಕ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೆ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಎಂಸಿಸಿಯ ಮುಖ್ಯಕೋಚ್ ಸ್ಟೀವ್ ಕಿರ್ಬಿ ಕೂಡ ರೆಹಾನ್ ಅಹ್ಮದ್'ನ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.