
ಬೆಂಗಳೂರು(ಆ.10): ರಾಜ್ಯದಲ್ಲಿನ ಯುವ ಪ್ರತಿಭಾನ್ವಿತ ಕ್ರಿಕೆಟಿಗರು ಮತ್ತು ಕೋಚ್‌ಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ ಇಲ್ಲಿನ ಕೆಎಸ್‌ಸಿಎನಲ್ಲಿ ಚೆನ್ನೈನ ಎಂಆರ್‌ಎಫ್ ಪೇಸ್ ಫೌಂಡೇಷನ್ 2 ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿತು.
ಮೊದಲ ದಿನವಾದ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಆರ್'ಎಫ್ ಪೇಸ್ ಫೌಂಡೇಷನ್‌ನ ತರಬೇತುದಾರರ ನಿರ್ದೇಶಕ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಗ್ರಾತ್, ರಾಜ್ಯದ 19 ಯುವ ವೇಗಿಗಳನ್ನು ಆಯ್ಕೆ ಮಾಡಿರುವುದಾಗಿ ಹೇಳಿದರು. ಇವರಿಗೆ ಚೆನ್ನೈನ ಎಂಆರ್‌ಎಫ್ ಅಕಾಡೆಮಿಯಲ್ಲಿ ವೇಗದ ಬೌಲಿಂಗ್ ತರಬೇತಿ ನೀಡಲಾಗುವುದು ಎಂದು ಮೆಗ್ರಾತ್ ಹೇಳಿದರು. ಇದೇ ವೇಳೆ ಎಂಆರ್‌ಎಫ್ ಫೌಂಡೇಷನ್‌ನ ಹಳೆಯ ವಿದ್ಯಾರ್ಥಿ, ರಾಜ್ಯದ ಯುವ ವೇಗಿ ಪ್ರಸಿದ್ಧ್ ಕೃಷ್ಣ ಬಗ್ಗೆ ಮೆಗ್ರಾತ್ ಮೆಚ್ಚುಗೆಯ ಮಾತುಗಳನ್ನಾಡಿದರು. ಪ್ರಸಿದ್ಧ್ ಅತ್ಯುತ್ತಮ ಪ್ರತಿಭೆ. ಭಾರತ ತಂಡದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮೆಗ್ರಾತ್ ಹೇಳಿದರು.
ಇದನ್ನು ಓದಿ: ಕೊಹ್ಲಿಯನ್ನು ಕೆಣಕಬೇಡಿ ಎಚ್ಚರಿಕೆ ನೀಡಿದ ಆಸೀಸ್ ಲೆಜೆಂಡ್...!
ಕಠಿಣ ಶ್ರಮದಿಂದ ವಿರಾಟ್ ಕೊಹ್ಲಿ ಇಂದು ನಂ.1 ಸ್ಥಾನಕ್ಕೇರಿದ್ದಾರೆ. 2014ರ ಅಡಿಲೇಡ್ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಉಳಿದುಕೊಂಡಿದ್ದ ಹೋಟೆಲ್’ನಲ್ಲಿದ್ದೆ. ಆಗ ಪ್ರತಿದಿನ ಮುಂಜಾನೆ ವಿರಾಟ್ ಕೊಹ್ಲಿ ಅವರನ್ನು ಜಿಮ್’ನಲ್ಲಿ ನೋಡುತ್ತಿದ್ದೆ. ಅವರು ಫಿಟ್ನೆಸ್’ಗೆ ಹೆಚ್ಚಿನ ಒತ್ತು ನೀಡಿದ್ದರಿಂದಲೇ ಇಂದು ಉನ್ನತ ಹಂತಕ್ಕೇರಿದ್ದಾರೆ ಎಂದು ನಾನು ಯುವ ಕ್ರಿಕೆಟಿಗರಿಗೆ ಕಿವಿ ಮಾತು ಹೇಳುತ್ತೇನೆ ಎಂದು ವಿವರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.