ವೀರೇಂದ್ರ ಸೆಹ್ವಾಗ್ ಕಾಲೆಳೆದ ಗಂಗೂಲಿ!

Published : Jun 19, 2017, 10:08 AM ISTUpdated : Apr 11, 2018, 12:42 PM IST
ವೀರೇಂದ್ರ ಸೆಹ್ವಾಗ್ ಕಾಲೆಳೆದ ಗಂಗೂಲಿ!

ಸಾರಾಂಶ

ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಪಂದ್ಯದ ವೇಳೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಹಾಗೂ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ನಡುವೆ ಸ್ವಾರಸ್ಯಕರ ಸಂಭಾಷಣೆ ನಡೆಯಿತು. ವಿರಾಟ್‌ ಕೊಹ್ಲಿ ರನ್‌ ಕದಿಯುವ ಸಂದರ್ಭದಲ್ಲಿ ಪಂದ್ಯದ ವೀಕ್ಷಕ ವಿವರಣೆ ಮಾಡುತ್ತಿದ್ದ ವೀರೂ, ಸೌರವ್‌ ನೀವು ಸಹ ವಿಕೆಟ್‌ಗಳ ನಡುವೆ ಓಡುವುದರಲ್ಲಿ ಚತುರರು ಎಂದರು. 

ಚಾಂಪಿಯನ್ಸ್ ಟ್ರೋಫಿಯ ಫೈನಲ್‌ ಪಂದ್ಯದ ವೇಳೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಹಾಗೂ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ನಡುವೆ ಸ್ವಾರಸ್ಯಕರ ಸಂಭಾಷಣೆ ನಡೆಯಿತು. ವಿರಾಟ್‌ ಕೊಹ್ಲಿ ರನ್‌ ಕದಿಯುವ ಸಂದರ್ಭದಲ್ಲಿ ಪಂದ್ಯದ ವೀಕ್ಷಕ ವಿವರಣೆ ಮಾಡುತ್ತಿದ್ದ ವೀರೂ, ಸೌರವ್‌ ನೀವು ಸಹ ವಿಕೆಟ್‌ಗಳ ನಡುವೆ ಓಡುವುದರಲ್ಲಿ ಚತುರರು ಎಂದರು. 

ತಕ್ಷಣ ಪ್ರತಿಕ್ರಿಯಿಸಿದ ಗಂಗೂಲಿ, ‘ಖಂಡಿತವಾಗಿಯೂ, ನಾನು ವಿಕೆಟ್‌ಗಳ ನಡುವೆ ಅತ್ಯಂತ ವೇಗವಾಗಿ ಓಡುತ್ತಿದ್ದೆ' ಎಂದರು. ಈ ವೇಳೆ ‘ಹೌದು ಹೌದು ಕೊಹ್ಲಿಯಷ್ಟುವೇಗವಾಗಿ ಓಡಲು ನಿಮ್ಮಿಂದ ಮಾತ್ರ ಸಾಧ್ಯ' ಎಂದು ಸೆಹ್ವಾಗ್‌, ಗಂಗೂಲಿ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಗಂಗೂಲಿ, ‘ಪಂದ್ಯಾವಳಿ ಮುಗಿದ ಬಳಿಕ ಮತ್ತೆ ಓವಲ್‌ನಲ್ಲಿ ಸಿಗೋಣ. 100 ಮೀಟರ್‌ ಓಟದ ಸ್ಪರ್ಧೆ ಏರ್ಪಡಿಸೋಣ. ಯಾರು ಗೆಲ್ಲುತ್ತಾರೋ ನೋಡೋಣ' ಎಂದು ಸೆಹ್ವಾಗ್‌ಗೆ ಸವಾಲೆಸೆದರು. ‘ನೀವೇ ಗೆಲ್ಲುತ್ತೀರಿ ಬಿಡಿ' ಎಂದು ಸೆಹ್ವಾಗ್‌ ಪ್ರತಿಕ್ರಿಯಿಸಿದರು. ಈ ವೇಳೆ ನೀವು ಎಷ್ಟುಸಿಂಗಲ್‌ ರನ್‌ಗಳನ್ನು ತೆಗೆದುಕೊಂಡಿದ್ದೀರಾ. ಎಷ್ಟುರನ್‌ ಓಡಿದ್ದೀರಿ ಎಂಬುದು ಅಂಕಿ ಅಂಶಗಳನ್ನು ಪರಿಶೀಲಿಸಿದರೆ ತಿಳಿಯುತ್ತದೆ ಎಂದು ಸೆಹ್ವಾಗ್‌ ಹೇಳುತ್ತಿದ್ದಂತೆ, ‘ಬೇರೆಯವರ ಬಗ್ಗೆ ಮಾತನಾಡುವುದನ್ನು ಬಿಡಿ. ಮೊದಲು ನಿಮ್ಮ ಅಂಕಿ ಅಂಶಗಳನ್ನು ನೋಡಿಕೊಳ್ಳಿ. ನೀವು ನನ್ನ ಮುಂದೆ ಭಾರತ ಕೋಚ್‌ ಹುದ್ದೆಯ ಸಂದರ್ಶನ ನೀಡಬೇಕಿದೆ' ಎಂದು ಹಾಸ್ಯದ ದಾಟಿಯಲ್ಲಿ ಚಾಟಿ ಬೀಸುತ್ತಿದ್ದಂತೆ ವೀಕ್ಷಕ ವಿವರಣೆ ಕೊಠಡಿ ನಗೆ ಗಡಲಲ್ಲಿ ಮುಳುಗಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!